Advertisement

ಅದ್ಧೂರಿ ದಸರಾ ಜಂಬೂಸವಾರಿ

03:44 PM Oct 20, 2018 | |

ಗಂಗಾವತಿ: ಶರನ್ನವರಾತ್ರಿ ಹಬ್ಬದ ಕೊನೆಯ ದಿನ ತಾಲೂಕಿನ ಆನೆಗೊಂದಿ ಕಿಷ್ಕಿಂದಾ ವಾಲೀಕಿಲ್ಲಾದ ಆದಿಶಕ್ತಿ ಜಂಬೂಸವಾರಿ ಬ್ರಹ್ಮನಂದ ಸ್ವಾಮಿ ನೇತೃತ್ವದಲ್ಲಿ ಅದ್ಧೂರಿಯಾಗಿ ಜರುಗಿತು. ಅಂಬಾರಿ ಮೆರವಣಿಗೆಗೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು. ಅವರು ಈ ಸಂದರ್ಭದಲ್ಲಿ ಮಾತನಾಡಿ, ಆನೆಗೊಂದಿ ವಿಜಯನಗರ ಸಾಮ್ರಾಜ್ಯದ ತೊಟ್ಟಿಲು. ಮೈಸೂರು ದಸರಾ ಹಬ್ಬಕ್ಕೆ ಹಂಪಿ ಮೂಲ ಪ್ರೇರಣೆಯಾಗಿದೆ. ಕಿಷ್ಕಿಂದಾ ವಾಲೀಕಿಲ್ಲಾದಲ್ಲಿರುವ ಆದಿಶಕ್ತಿ ದೇವತೆ ವಿಜಯನಗರ ಅರಸರ ದೇವತೆ. ಅದೇ ಪರಂಪರೆಯಂತೆ ಬ್ರಹ್ಮನಂದ ಸ್ವಾಮಿ ದಸರಾ ಹಬ್ಬವನ್ನು ಆನೆಗೊಂದಿ ರಾಜಮನೆತನದವರ ನೇತೃತ್ವದಲ್ಲಿ ನಡೆಸುತ್ತಿದ್ದಾರೆ ಎಂದರು. ಅಂಬಾರಿ ಮೆರವಣಿಗೆಯಲ್ಲಿ ನಾಡಿನ ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದವು.

Advertisement

ಹೇಮಗುಡ್ಡ ಆನೆಅಂಬಾರಿ: ಶರನ್ನವರಾತ್ರಿ ಹಬ್ಬ ವಿಜಯನಗರ ಸಾಮ್ರಾಜ್ಯದ ಸಾಂಸ್ಕೃತಿಕ ಪರಂಪರೆಯಾಗಿದ್ದು, ಇದನ್ನು ಶ್ರದ್ಧೆಯಿಂದ ಆಚರಣೆ ಮಾಡಬೇಕೆಂದು ಮಾಜಿ ಸಂಸದ ಎಚ್‌.ಜಿ. ರಾಮುಲು ಹೇಳಿದರು. ಅವರು ತಾಲೂಕಿನ ಹೇಮಗುಡ್ಡದಲ್ಲಿ ಗುರುವಾರ ಸಂಜೆ ಆನೆ ಅಂಬಾರಿ ಶ್ರೀದುರ್ಗಾಪರಮೇಶ್ವರಿ ಮೂರ್ತಿ ಮೆರವಣಿಗೆ ಚಾಲನೆ ನೀಡಿ ಮಾತನಾಡಿದರು. ದಕ್ಷಿಣ ಭಾರತದಲ್ಲಿ ಶರನ್ನವರತ್ರಿ ದಸರಾ ಹಬ್ಬವನ್ನು ಆರಂಭ ಮಾಡಿದ್ದು ವಿಜಯನಗರ ಅರಸರು. ಪ್ರಸ್ತುತ ಮೈಸೂರು ದಸರಾ ಅಂಬಾರಿ ಕುಮ್ಮಟ ದುರ್ಗಾ ನಂತರ ವಿಜಯನಗರ ಸಾಮ್ರಾಜ್ಯದ ಕೊಡುಗೆಯಾಗಿದೆ. ಸರಕಾರ ಪರಂಪರೆಯಾಗಿ ದಸರಾ ಹಬ್ಬವನ್ನು ಆಚರಣೆ ಮಾಡುತ್ತಿದೆ. ಕಳೆದ 28 ವರ್ಷಗಳಿಂದ ಕಮ್ಮಟದುರ್ಗದ ಪಕ್ಕದದಲ್ಲಿರುವ ಹೇಮಗುಡ್ಡ ಶ್ರೀದುರ್ಗಾ ಪರಮೇಶ್ವರಿ ಶರನ್ನವರಾತ್ರಿ ಹಬ್ಬವನ್ನು 9 ದಿನಗಳ ಕಾಲ ದೇವಿ ಪುರಾಣ ಜರುಗಿ ಕೊನೆಯ ದಿನ ಆದಿಶಕ್ತಿಯ ಆನೆಯ ಮೇಲೆ ಅಂಬಾರಿ ಮೆರವಣಿಗೆಯಲ್ಲಿ ನಾಡಿನ ಕಲಾ ತಂಡ ಪಾಲ್ಗೊಳ್ಳುವ ಮೂಲಕ ಹಳೆಯ ದಸರಾ ನೆನಪಿಸುವ ಕಾರ್ಯನಡೆಯುತ್ತಿದೆ ಎಂದರು.

ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್‌, ಜಿಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನಿರಲೂಟಿ, ಎಪಿಎಂಸಿ ಅಧ್ಯಕ್ಷ ನೀಲಪ್ಪ ಸಣ್ಣಕ್ಕಿ, ಮಾಜಿ ಶಾಸಕ ಗವಿಯಪ್ಪ, ಎಚ್‌.ಆರ್‌. ಶ್ರೀನಾಥ, ಶ್ರೀನಿವಾಸಗೌಡ, ವಿಠಲಾಪೂರ ಯಮನಪ್ಪ, ಎಸ್‌. ರಾಘವೇಂದ್ರಶೆಟ್ಟಿ, ಇಲಿಯಾಸಬಾಬಾ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next