Advertisement

Gangavathi ನಗರಸಭೆ ಸಾಮಾನ್ಯಸಭೆ: ಶಾಸಕ ರೆಡ್ಡಿ ಅವರಿಂದ ಅಧಿಕಾರಿಗಳ ತರಾಟೆ

08:39 PM Jun 07, 2023 | Team Udayavani |

ಗಂಗಾವತಿ: 1997 ರಲ್ಲಿ ಆರಂಭವಾಗಿರುವ ನಗರದ ಒಳಚರಂಡಿ ಮತ್ತು ನೀರು ಸರಬರಾಜು ಕಾಮಗಾರಿ ಇನ್ನೂ ಶೇ.50 ರಷ್ಟು ಸಹ ಪೂರ್ಣಗೊಂಡಿಲ್ಲ. ಇದರಿಂದ ಸಾರ್ವಜನಿಕರ ದುಡ್ಡು ನಷ್ಟವಾಗುತ್ತಿದ್ದು ಕಾಮಗಾರಿ ಗುತ್ತಿಗೆ ಪಡೆದ ಗುಜರಾತ್ ಮೂಲದ ಗುತ್ತಿಗೆದಾರ ಮತ್ತು ಒಳಚರಂಡಿ ಮತ್ತು ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ನೇರ ಹೊಣೆಯಾಗಲಿದ್ದಾರೆ. ಬೇಗನೆ ಕಾಮಗಾರಿ ಮುಗಿಸದಿದ್ದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಜತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗೆ ಕಳಿಸಲಾಗುತ್ತದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಎಚ್ಚರಿಕೆ ನೀಡಿದರು.

Advertisement

ಅವರು ನಗರಸಭೆಯಲ್ಲಿ ಅಧಿಕಾರಿಗಳ ಸಾಮಾನ್ಯಸಭೆ ನಡೆಸಿ ಮಾತನಾಡಿದರು. ನಗರದ ಜನಸಂಖ್ಯೆ ಹೆಚ್ಚುತ್ತಿದ್ದು ಪೂರಕವಾಗಿ ರಸ್ತೆ, ಕುಡಿಯುವ ನೀರು, ಆಟದ ಮೈದಾನ, ಬಸ್ ನಿಲ್ದಾಣ, ಒಳಚರಂಡಿ ವ್ಯವಸ್ಥೆ ಹಾಗೂ ಬೀದಿ ದೀಪಗಳ ವ್ಯವಸ್ಥೆ ಮಾಡಬೇಕಾಗಿರುವ ಕರ್ತವ್ಯ ನಗರಸಭೆ ಆಡಳಿತ ಮಂಡಳಿಗೆ ಸೇರಿದೆ. ಕಳೆದ ಮೂರು ದಶಕಗಳಿಂದ ನಗರದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದೂ ಯೋಜನಾ ಗಾತ್ರ ಶೇ.೧೦೦ ರಷ್ಟು ಹೆಚ್ಚಾಗಿದ್ದು ಮುಂದುವರಿದ ಕಾಮಗಾರಿ ನೆಪದಲ್ಲಿ ಗುತ್ತಿಗೆದಾರರು ಸರಕಾರ ಹಣ ಪಡೆಯುತ್ತಿದ್ದರೂ ಕಾಮಗಾರಿ ನಿಗದಿವಾಗಿ ಪೂರ್ಣಗೊಂಡಿಲ್ಲ. ಇದುವರೆಗೂ ಕೇವಲ 120 ಕಿ.ಮೀ.ಮಾತ್ರ ಒಳಚರಂಡಿ ಕಾಮಗಾರಿ ಮಾಡಿರೂ ಶೇ.50 ರಷ್ಟು ಮನೆಗಳಿಗೆ ಸಂಪರ್ಕ ಪೈಪ್ ಅಳವಡಿಸಿಲ್ಲ. ಇದರಿಂದ ನಗರದಲ್ಲಿ ಅನೈರ್ಮಲ್ಯಯುಂಟಾಗಿ ದುರುಗಮ್ಮನಹಳ್ಳಕ್ಕೆ ಬಳಸಿದ ನೀರು ಹರಿಸಲಾಗುತ್ತಿದೆ. ಕಿಷ್ಕಿಂಧಾ ಅಂಜನಾದ್ರಿ ಸೇರಿ ಗಂಗಾವತಿ ಸುತ್ತ ಐತಿಹಾಸಿಕ ಪ್ರವಾಸಿ ತಾಣಗಳಿದ್ದು ಇವುಗಳ ವೀಕ್ಷಣೆಗೆ ನಿತ್ಯವೂ ಸಾವಿರಾರು ಜನ ಪ್ರವಾಸಿಗರು ಆಗಮಿಸುವುದರಿಂದ ನಗರವನ್ನು ಸೌಂದರೀಕರಣ ಮಾಡಬೇಕು. ಒಳಚರಂಡಿ ಮತ್ತು ಶುದ್ಧಕುಡಿಯುವ ನೀರಿನ ಪೈಪ್ ಜೋಡಣೆ ಅರ್ಧಂಬರ್ಧ ಕಾಮಗಾರಿಯಾಗಿದ್ದು ತಾವು ವಿಧಾನಸಭಾ ಪ್ರಚಾರದ ಸಂದರ್ಭದಲ್ಲಿ ನಗರದ ಪ್ರತಿ ಓಣಿಯಲ್ಲಿ ಸಂಚಾರ ಮಾಡುವಾಗ ಜನರು ಈ ಸಮಸ್ಯೆ ಕುರಿತು ಗಮನಸೆಳೆದಿದ್ದಾರೆ. ಕೆಲವೇ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕು. ಇಲ್ಲದಿದ್ದರೆ ಕಾಮಗಾರಿ ಗುತ್ತಿಗೆ ಪಡೆದ ವ್ಯöಕ್ತಿ ಸೇರಿ ಒಳಚರಂಡಿ ಇಲಾಖೆಯ ಇಂಜಿನಿರ‍್ಸ್ ಮತ್ತು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ.ನಗರದ ಸರ್ವಾಂಣಗೀಣ ಪ್ರಗತಿಗೆ ಪಕ್ಷಾತೀತವಾಗಿ ಸದಸ್ಯರು ಯೋಜನೆ ರೂಪಿಸಿ ಅಗತ್ಯವಿರುವ ವಾರ್ಡುಗಳಿಗೆ ಎಲ್ಲಾ ಅನುದಾನ ನೀಡುವ ಮೂಲಕ ಹಂತಹಂತ ವಾಗಿ ಅಭಿವೃದ್ಧಿ ಕಾಮಗಾರಿ ಮಾಡಬೇಕು. ಕುಡಿಯುವ ನೀರು, ಕಸದ ಸ್ವಚ್ಛತೆ ಬಗ್ಗೆ ಹಲವು ದೂರುಗಳಿದ್ದು ಅಧಿಕಾರಿಗಳು ಸರಿಯಾಗಿ ಕಾರ್ಯ ಮಾಡಬೇಕು. ಅಮೃತಸಿಟಿ ಕಾಮಗಾರಿ, ಮಳೆ ಕೋಯ್ಲು, ಪಾರ್ಕ್ಗಳ ಅಭಿವೃದ್ಧಿ, ಸಾರ್ವಜನಿಕರು ಸಂಚರಿಸುವ ಪುಟ್‌ಪಾಟ್ ಒತ್ತುವರಿ ತೆರವು, ಸ್ಲಂ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಸರಕಾರದಿಂದ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರಿಗೆ ವಿದ್ಯಾರ್ಥಿಗಳಿಗೆ ದೊರಕುವ ಸೌಲಭ್ಯಗಳನ್ನು ಆದ್ಯತೆ ಮೇರೆಗೆ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಬೇಕು. ನಗರಸಭೆಯ ವ್ಯಾಪ್ತಿಯ ರೈಸ್ ಮಿಲ್, ಚಿತ್ರಮಂದಿರ, ಕಲ್ಯಾಣಮಂಟಪ, ವಾಣಿಜ್ಯ ಸಂಕಿರ್ಣಗಳು, ಮಳಿಗೆಗೆಗಳ ಬಾಡಿಗೆ ಹಾಗೂ ಸರಕಾರಿ ಕಚೇರಿಗಳು ಕ್ವಾಟರಸ್ ಗಳ ತೆರಿಗೆ ವಸೂಲಿಗೆ ಕ್ರಮಕೈಗೊಂಡು ನಗರಸಭೆಯ ಆರ್ಥಿಕ ಶಕ್ತಿ ವೃದ್ಧಿಸುವಂತೆ ಅಧಿಕಾರಿಗಳು ಕ್ರಮಕೈಗೊಂಡು ಕಾರ್ಯ ಮಾಡುವಂತೆ ಸೂಚನೆ ನೀಡಿದರು.

ನಗರದ ವ್ಯಾಪ್ತಿಯಲ್ಲಿರುವ ಖಾಸಗಿ ನೀರು ಶುದ್ಧೀಕರಣ ಮತ್ತು ಮಾರಾಟ ಮಾಡುವ ಘಟಕಗಳ ದಾಖಲಾತಿ ಪರಿಶೀಲಿಸಿ ಅಗತ್ಯ ತೆರಿಗೆ ವಿಧಿಸುವಂತೆ ನಗರಸಭೆ ಸದಸ್ಯ ಮೊಹಮದ್ ಉಸ್ಮಾನ್ ಬಿಚ್ಚಗತ್ತಿ ಗಮನ ಸೆಳೆದಾಗ ಶಾಸಕ ಗಾಲಿ ಜನಾರ್ದನರೆಡ್ಡಿ ಮಾತನಾಡಿ, ನಗರದಲ್ಲಿರುವ ಖಾಸಗಿ ಆರ್‌ಓ ಪ್ಲಾಂಟ್‌ಗಳೆಷ್ಟು ಎಷ್ಟು ಘಟಕಗಳು ನೋಂದಾಯಿಸಿಕೊಂಡು ನಗರಸಭೆಯಿಂದ ಪರವಾನಿಗೆ ಪಡೆದಿವೆ. ಪ್ರತಿ ವರ್ಷ ನವೀಕರಣ ಮಾಡಲಾಗುತ್ತಿದೆ. ನೀರನ್ನು ಪರೀಕ್ಷಿಸಿ ಸಾರ್ವನಿಕರಿಗೆ ವಿತರಣೆ ಮಾಡಲಾಗುತ್ತಿದೆ ಎನ್ನುವ ಕುರಿತು ಅಗತ್ಯ ಮಾಹಿತಿ ಸಂಗ್ರಹಿಸಿ ಅನಧಿಕೃತ ಆರ್‌ಓ ಪ್ಲಾಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಸರಕಾರದ ಸಹಾಯಧನದಲ್ಲಿ ನಿರ್ಮಾಣಗೊಂಡಿರುವ ಆರ್‌ಓ ಪ್ಲಾಂಟ್‌ಗಳ ನವೀಕರಣ ಮತ್ತು ಹೊಸ ಟೆಂಡರ್ ಕುರಿತು ಗಮನಹರಿಸುವಂತೆ ಸೂಚನೆ ನೀಡಿದರು.

ನಗರಸಭೆಯಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಕೆ ಆರ್ ಪಿ ಪಾರ್ಟಿ ಮುಖಂಡರು ಹಾಗೂ ನಗರಸಭೆಯ ಮಹಿಳಾ ಸದಸ್ಯರ ಪತಿರಾಯರು ಪಾಲ್ಗೊಂಡು ಪ್ರಗತಿಪರಿಶೀಲನೆಯ ಚರ್ಚೆಯಲ್ಲಿ ಭಾಗವಹಿಸಿ ಒಳಚರಂಡಿ ಹಾಗೂ ಶುದ್ಧ ಕುಡಿಯುವ ನೀರಿನ ಕಾಮಗಾರಿ ಚರ್ಚೆಯಲ್ಲಿ ಪಾಲ್ಗೊಂಡು ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸೂಕ್ತ ಕ್ರಮ ಜರುಗಿಸುವಂತೆ ಶಾಸಕರಲ್ಲಿ ತಾಕೀತು ಮಾಡಿದರು. ಮಂಗಳವಾರ ಜರುಗಿದ್ದ ತಾ.ಪಂ.ಕೆಡಿಪಿ ಸಾಮಾನ್ಯ ಸಭೆಯಲ್ಲೂ ಕೆಆರ್ ಪಿ ಪಾರ್ಟಿಯ ಕಾರ್ಯಕರ್ತರು, ಮುಖಂಡರು ಪಾಲ್ಗೊಂಡು ಅಧಿಕಾರಿಗಳನ್ನು ಮುಜುಗರಕ್ಕೀಡು ಮಾಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next