Advertisement

ಗಂಗಾವತಿ: ನಿವೇಶನದ ಅರ್ಜಿ ಸಲ್ಲಿಸಲು ಜನರ ನೂಕು ನುಗ್ಗಾಟ

02:37 PM Oct 11, 2021 | Team Udayavani |

ಗಂಗಾವತಿ: ನಗರಸಭೆ ವ್ಯಾಪ್ತಿಯಲ್ಲಿ ಬಡಜನರಿಗೆ ನಿವೇಶನ ನೀಡಲು ನಗರಸಭೆಯವರು ಅರ್ಜಿಗಳನ್ನು ಆಹ್ವಾನಿಸಿದ್ದಾರೆ ಅರ್ಜಿಗಳನ್ನು ಪಡೆಯಲು ಜನರು ನಗರಸಭೆ ಎದುರು ನೂಕುನುಗ್ಗಲು ನಡೆಸಿದ ದೃಶ್ಯ ಕಂಡುಬಂದಿದೆ .

Advertisement

ನಗರದ ಹೊಸಳ್ಳಿ ರಸ್ತೆಯಲ್ಲಿ ನಿರ್ಮಿಸಿರುವ ಆಶ್ರಯ ಕಾಲೊನಿಯಲ್ಲಿ ನಗರದ ಬಡಜನರಿಗೆ ನಿವೇಶನ ನೀಡಲು ಶಾಸಕರ ನೇತೃತ್ವದಲ್ಲಿ ನಗರಸಭೆಯವರು ಅರ್ಜಿಗಳನ್ನು ಆಹ್ವಾನಿಸಿದ್ದಾರೆ .

ಅರ್ಜಿ ಫಾರಂಗಳನ್ನು ಪಡೆಯಲು ನಗರಸಭೆ ಸೋಮವಾರದಿಂದ ಕಾರ್ಯ ಶುರು ಮಾಡಿದ್ದು ಜನರು ಅರ್ಜಿ ಫಾರ್ಮ್ ಗಳನ್ನು ಪಡೆಯಲು ನೂಕು ನುಗ್ಗಾಟ ನಡೆಸಿದ್ದಾರೆ .

ಕಳೆದ ಇಪ್ಪತ್ತು ವರ್ಷಗಳ ಹಿಂದೆ ಆಗಿನ ಶಾಸಕ ಶ್ರೀರಂಗದೇವರಾಯಲು ನಗರದಲ್ಲಿ 3ಕಡೆ ಆಶ್ರಯ ಕಲ್ ನಿರ್ಮಿಸಿ ಬಡ ಜನರಿಗೆ ನಿವೇಶನಗಳ ಹಂಚಿಕೆ ಮನೆಗಳನ್ನು ನಿರ್ಮಿಸಿಕೊಟ್ಟಿದ್ದರು .ನಂತರ ಇದುವರೆಗೂ ಯಾರೂ ಸಹ ನು ನಿವೇಶನ ಕೊಟ್ಟಿರ್ಲಿಲ್ಲ ಕಳೆದ 2008-13 ಅವಧಿಯಲ್ಲಿ ಹೊಸಳ್ಳಿ ರಸ್ತೆಯಲ್ಲಿರುವ ಆಶ್ರಯ ಕಾಲೊನಿಗಾಗಿ  ಭೂಮಿಯನ್ನು ಖರೀದಿ ಮಾಡಿ ನಿವೇಶನಗಳನ್ನು ಹಂಚಿಕೆ ಮಾಡಲು ಯೋಜಿಸಲಾಗಿತ್ತು.

Advertisement

ಆ ಸಂದರ್ಭದಲ್ಲಿ ನಿವೇಶನಗಳ ಹಂಚಿಕೆ ಸರಿಯಾಗಿ ನಡೆದಿಲ್ಲ ಎಂದು ಕೆಲವರು ಧಾರವಾಡ ಹೈಕೋರ್ಟ್ ಮೆಟ್ಟಿಲು ಏರಿದ್ದರು ಪರಿಣಾಮ ನಿವೇಶನ ಹಂಚಿಕೆ ನೆನೆಗುದಿಗೆ ಬಿದ್ದಿತ್ತು 2013 ನಂತರ ಪುನಃ ನ್ಯಾಯಾಲಯದಲ್ಲಿ ಪ್ರಕರಣವನ್ನು ಇತ್ಯರ್ಥ ಮಾಡಿ ನಿವೇಶನ ಹಂಚಿಕೆ ಮಾಡಲು ಯೋಚಿಸಿದರೂ ಪುನಃ ಕೆಲವರು ಧಾರವಾಡ ಹೈಕೋರ್ಟ್ ಗೆ ತೆರಳಿ ನಿವೇಶನ ಹಂಚಿಕೆ ಮಾಡಿದ ಪಟ್ಟಿ ಬಿಪಿಎಲ್ ಕಾರ್ಡ್ ಇಲ್ಲದವರು ಇದ್ದಾರೆಂದು ಮತ್ತೆ ಖ್ಯಾತೆ ತೆರಗೆಯಲಾಗಿತ್ತು .ಪುನಃ ನೆನೆಗುದಿಗೆ ಬಿದ್ದ ಕಾರಣ ಇದೀಗ ಧಾರವಾಡ ಹೈಕೋರ್ಟ್ ಪ್ರಕರಣ ಇತ್ಯರ್ಥಗೊಳಿಸಿದ್ದು ಶಾಸಕರ ನೇತೃತ್ವದಲ್ಲಿ ನಗರಸಭೆಯವರು ಪುನಃ ನಿವೇಶನ ರಹಿತರಿಗೆ ನಿವೇಶನ ನೀಡಲು ಅರ್ಜಿಗಳನ್ನು ಆಹ್ವಾನಿಸಿದ್ದಾರೆ .ಸುಮಾರು 5ನೂರ ಐವತ್ತು ಕ್ಕೂ ಹೆಚ್ಚು ನಿವೇಶನಗಳಿದ್ದು ನಗರದ 35ವಾರ್ಡ್ ಗಳಿರುವ ಬಡಜನರಿಗೆ ನಿವೇಶನ ರಹಿತರಿಗೆ ನಿವೇಶನ ನೀಡಲು ಯುಜಿಸಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಅರ್ಜಿಗಳನ್ನು ಪಡೆದು ನಂತರ ಮತ್ತೊಮ್ಮೆ ಪುನಸ್ಸಂಪರ್ಕದಿಂದ ಮಾಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ನಗರಸಭೆಯವರು ನಿರ್ಧರಿಸಿದ್ದಾರೆ .

ಅರ್ಜಿಗಳನ್ನು ಸಲ್ಲಿಸಲು ನಗರಸಭೆಯ ಎದುರು ಸಾವಿರಾರು ಜನರು ನೂಕುನುಗ್ಗಲು ನಡೆಸಿದ್ದಾರೆ .ಪ್ರತಿ ವಾರ್ಡಿನಲ್ಲೂ ಅರ್ಜಿಗಳನ್ನು ಸ್ವೀಕಾರ ಮಾಡುವ ಕೇಂದ್ರಗಳನ್ನು ನಗರಸಭೆ ಆರಂಭಮಾಡಿ ವಾರ್ಡ್ ಪ್ರಕಾರ ಅರ್ಜಿಗಳನ್ನು ಸ್ವೀಕಾರ ಮಾಡಿದರೆ ನಗರಸಭೆ ಎದುರು ಈ ನೂಕು ನುಗ್ಗಲು ಇರುವುದಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ .

ಬಡವರಿಗೆ ನಿವೇಶನ : ನಗರದ ಬಡವರಿಗೆ ಉಚಿತ ನಿವೇಶನ ನೀಡಲು ಹೊಸಳ್ಳಿ ರಸ್ತೆಯಲ್ಲಿರುವ ಆಶ್ರಯ ಕಾಲೊನಿಯಲ್ಲಿ ನಿವೇಶನ ಗುರುತು ಮಾಡಲಾಗಿದೆ ನಗರಸಭೆಯಿಂದ ಅರ್ಜಿಗಳನ್ನು ಕರೆದು ಅರ್ಹ ಬಡವರಿಗೆ ನಿವೇಶನ ನೀಡಲಾಗುತ್ತದೆ ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡುವುದು ಬೇಡ ಅರ್ಜಿಗಳನ್ನು ಸಲ್ಲಿಸಿ ಸ್ಥಳ ಪರಿಶೀಲನೆ ಮಾಡಿ ಅರ್ಹರಿಗೆ ನಿವೇಶನ ನೀಡಲಾಗುತ್ತದೆ ಎಂದು ಶಾಸಕ ಪರಣ್ಣ ಮನವಳ್ಳಿ ಉದಯವಾಣಿ ಜತೆ ಮಾತನಾಡುತ್ತ ತಿಳಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next