ಗಂಗಾವತಿ: ಪರಿಸರ ಸಮತೋಲನದಿಂದ ಜೀವಿ ಸಂಕುಲಕ್ಕೆ ಸಂರಕ್ಷಣೆ ಸಾಧ್ಯವಾಗುತ್ತದೆ. ಇದರಿಂದ ಮಳೆ ಬೆಳೆ ಚೆನ್ನಾಗಿ ಆಗುವ ಮೂಲಕ ಮನುಷ್ಯರು ಸುಖವಾಗಿರಲು ಸಾಧ್ಯ ಎಂದು ಒಂದನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಹೇಳಿದರು.
ಅವರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಅರಣ್ಯ ಇಲಾಖೆ, ತಾಲೂಕು ಆಡಳಿತ ಹಾಗೂ ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನದ ನಿಮಿತ್ತ ಸಸಿಯನ್ನು ನಾಟಿ ಮಾಡಿ ಪರಿಸರ ಉಳಿಸುವ ಪ್ರತಿಜ್ಞೆ ಮಾಡಿದ ನಂತರ ಮಾತನಾಡಿದರು.
ಸಂವಿಧಾನದ ಪೀಠಿಕೆಯಲ್ಲಿ ಪರಿಸರ, ನದಿ, ಮಣ್ಣು ಸೇರಿದಂತೆ ಜೀವಿ ಸಂಕುಲ ಉಳಿಸುವ ಆಶಯವನ್ನು ಉಲ್ಲೇಖಿಸಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶವನ್ನು ಹೆಚ್ಚಳ ಮಾಡಬೇಕು. ಪರಿಸರ ಅಸಮತೋಲನದ ಪರಿಣಾಮವಾಗಿ ಪ್ರತಿ ವರ್ಷ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ ಎಂದರು.
Related Articles
ಅತಿಯಾದ ಪ್ಲಾಸ್ಟಿಕ್ ಮತ್ತು ರಸಗೊಬ್ಬರ, ಕ್ರಿಮಿನಾಶಕ ಬಳಕೆಯಿಂದಾಗಿ ಪರಿಸರ ನಾಶವಾಗಿ ಮನುಷ್ಯ ಸೇರಿ ಜೀವಿಸಂಕುಲಕ್ಕೆ ಉಸಿರಾಡಲು ಜೀವಿಸಲು ತೊಂದರೆಯಾಗಿದೆ. ಮಕ್ಕಳು ಸೇರಿ ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಸರಕಾರ ಅರಣ್ಯ ಕೃಷಿಗೆ ನಿರಂತರ ಬೆಂಬಲ ನೀಡುತ್ತಿದ್ದು ಕೃಷಿಕರು ಅಗತ್ಯ ಮಾಹಿತಿ ಪಡೆದು ಅರಣ್ಯ ಕೃಷಿ ಮಾಡುವ ಮೂಲಕ ಪರಿಸರ ಸಮತೋಲನಕ್ಕೆ ಶ್ರಮಪಡುವಂತೆ ಕರೆ ನೀಡಿದರು.
ಇದಕ್ಕೂ ಮೊದಲು ಸಸಿಗಳನ್ನು ನೆಟ್ಟು ನೀರು ಹಾಕಿ ಪರಿಸರ ಸಮತೋಲನದ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ್, ಪ್ರಧಾನ ಸಿವಿಲ್ ನ್ಯಾಯಾಧೀಶೆ ಶ್ರೀದೇವಿ ದರಭಾರೆ, ತಹಶೀಲ್ದಾರ್ ಮಂಜುನಾಥ ಸ್ವಾಮಿ, ವಲಯ ಅರಣ್ಯಾಧಿಕಾರಿ ಶಿವರಾಜ್ ಮೇಟಿ, ಪಿಐ ಅಡವೇಶ, ಎಜಿಪಿ ಎಚ್.ಸಿ.ಯಾದವ್, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಕಾರ್ಯದರ್ಶಿ ಎಚ್.ಎಂ.ಮಂಜುನಾಥ, ಶಿಕ್ಷಣ ಇಲಾಖೆ ರಂಗಸ್ವಾಮಿ, ಜೂನಿಯರ್ ಕಾಲೇಜು ಹೈಸ್ಕೂಲ್ ಮುಖ್ಯ ಶಿಕ್ಷಕ ಗಾದೆಪ್ಪ, ಅರಣ್ಯ ಇಲಾಖೆಯ ಶ್ರೀನಿವಾಸ, ರಾಮಣ್ಣ,ನಾಗರಾಜ, ಚಂದ್ರಶೇಖರ ಸೇರಿ ಅನೇಕರಿದ್ದರು.