Advertisement

Gangavathi: ಪ್ಲಾಸ್ಟಿಕ್ ತಿಂದ ಕರುವಿಗೆ ಉಸಿರಾಟ ತೊಂದರೆ; ನೆರವಿಗೆ ಬಂದ ಕ್ರಿಕೆಟ್ ಆಟಗಾರರು

08:43 AM Sep 06, 2024 | Team Udayavani |

ಗಂಗಾವತಿ: ಪ್ಲಾಸ್ಟಿಕ್ ಪೊಟ್ಟಣದಲ್ಲಿದ್ದ ಆಹಾರವನ್ನು ತಿಂದ ಆಕಳು ಕರುವೊಂದಕ್ಕೆ ಉಸಿರಾಟದ ತೊಂದರೆಯಾಗಿ ನರಳಾಡುತ್ತಿದ್ದಾಗ ಕ್ರಿಕೆಟ್ ಆಟಗಾರರು ಕರುವನ್ನು ಬದುಕಿಸಲು ನೆರವಾದ ಘಟನೆ ಗಂಗಾವತಿಯ ಜೂನಿಯರ್ ಕಾಲೇಜು ಮೈದಾನದಲ್ಲಿ ಸೆ.6ರ ಶುಕ್ರವಾರ ಬೆಳ್ಳಿಗ್ಗೆ ಕಂಡು ಬಂತು.

Advertisement

ಪಶು ವೈದ್ಯರನ್ನು ಕರೆಸಿ ಕರುವಿಗೆ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಆರೈಕೆಗಾಗಿ ಕನಕಗಿರಿ ರಸ್ತೆಯಲ್ಲಿರುವ ಗಣೇಶ ಗೋಶಾಲೆಗೆ ಕರುವನ್ನು ರವಾನೆ ಮಾಡಲಾಯಿತು.

ಪ್ಲಾಸ್ಟಿಕ್ ಜಾಗೃತಿ ಅಗತ್ಯ:

ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಸಾರ್ವಜನಿಕರು ತಾವು ಬಳಸುವ ಪ್ಲಾಸ್ಟಿಕ್ ಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ಸಾಮಾನ್ಯವಾಗಿದೆ. ನಗರಸಭೆಯವರು ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಪ್ಲಾಸ್ಟಿಕ್ ಬಳಕೆಯನ್ನು ಬಿಡದಿರುವುದು ಶೋಚನೀಯವಾಗಿದೆ.

ನಗರದಲ್ಲಿ ಬೀದಿ ದನಗಳು ಹೆಚ್ಚಿದ್ದು ರಸ್ತೆಯಲ್ಲಿ ಸಿಕ್ಕಿದ ಪ್ಲಾಸ್ಟಿಕ್, ಪೇಪರ್, ಹಣ್ಣು-ಹಂಪಲುಗಳು ಸೇರಿ ಹಸಿ ಮತ್ತು ಒಣ ಕಸವನ್ನು ತಿನ್ನುತ್ತವೆ. ಇದರಿಂದ ಆಕಳುಗಳ ಬೆಳವಣಿಗೆ ಮತ್ತು ಆರೋಗ್ಯದಲ್ಲಿ ಸಮಸ್ಯೆಯಾಗುತ್ತಿದ್ದು, ಈ ಕುರಿತು ನಗರಸಭೆ ಮತ್ತು ಕೆಲ ಸಂಘ ಸಂಸ್ಥೆಯವರು ಜಾಗೃತಿ ಮೂಡಿಸುತ್ತಿದ್ದರೂ ಜನರು ಮೂಕ ಪ್ರಾಣಿಗಳು ಮತ್ತು ಪರಿಸರ ನಾಶದ ಕುರಿತು ತಲೆ ಕೆಡಿಸಿಕೊಳ್ಳುತ್ತಿಲ್ಲ.

Advertisement

ಪ್ರತಿನಿತ್ಯ ಆಕಳು, ಕರು ಸೇರಿ ಮೂಕ ಪ್ರಾಣಿಗಳು ಪ್ಲಾಸ್ಟಿಕ್ ಹಾಗೂ ಅನೈರ್ಮಲ್ಯ ಆಹಾರ ತಿಂದು ಗಾಯಗೊಳ್ಳುತ್ತಿದ್ದು ಅಥವಾ ಸಾವನ್ನಪ್ಪುತ್ತಿವೆ . ಪ್ಲಾಸ್ಟಿಕ್ ಹಾಗೂ ಅನೈರ್ಮಲ್ಯ ವಸ್ತುಗಳು, ಆಹಾರ ಸೇವನೆ ಮಾಡುವ ಬೀದಿ ದನ ಮತ್ತು ಮೂಕಪ್ರಾಣಿಗಳ ಕುರಿತು ನಗರಸಭೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್, ಪಶುವೈದ್ಯ, ಅರಣ್ಯ ಇಲಾಖೆಯವರು ನಗರದಲ್ಲಿ ಜನಜಾಗೃತಿ ಮೂಡಿಸಬೇಕು. ಬೀದಿದನಗಳನ್ನು ನಿಯಂತ್ರಿಸಿ ದನ ಮಾಲೀಕರ ವಿರುದ್ಧ ಕೇಸ್ ದಾಖಲಿಸಲು ಗೋ ಪ್ರಿಯರು ಮತ್ತು ಪ್ರಾಣಿ ದಯಾ ಸಂಘಟನೆಯವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಪ್ಲಾಸ್ಟಿಕ್ ಬಳಕೆ ಪರಿಸರದ ಮೇಲೆ, ದನ, ಕರು ಮತ್ತು ಇತರ ಮೂಕ ಪ್ರಾಣಿಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದ್ದು ನಗರ ಸಭೆಯವರು ಜನರಿಗೆ ಜಾಗೃತಿ ಮೂಡಿಸಬೇಕಿದೆ. ಜೊತೆಗೆ ಜನರು ಪ್ಲಾಸ್ಟಿಕ್ ಸೇರಿದಂತೆ ಹಸಿ, ಕಸ ಒಣ ಕಸವನ್ನು ಪ್ರತ್ಯೇಕ ಮಾಡಿ ನಗರಸಭೆಯವರು ಮನೆ ಬಳಿ ಕಸ ಸಂಗ್ರಹಿಸುವ ವಾಹನ ಬಂದಾಗ ವಾಹನದಲ್ಲಿ ಹಾಕಬೇಕು. ಬೀದಿಗಳು ಮತ್ತು ಚರಂಡಿಗಳಿಗೆ ಪ್ಲಾಸ್ಟಿಕ್ ಹಾಗೂ ಇತರ ಕಸವನ್ನು ಎಸೆಯಬಾರದು. ಇದರಿಂದ ಬೀದಿ ದನಗಳು ಪ್ಲಾಸ್ಟಿಕ್ ಮತ್ತು ಕಸವನ್ನು ತಿಂದು ಅನಾರೋಗ್ಯಗೊಂಡು ಸಾವನ್ನಪ್ಪುತ್ತವೆ. ಜನರು ಪ್ರಾಣಿಗಳ ಬಗ್ಗೆ ಜಾಗೃತಿ ವಹಿಸಬೇಕು. –ಚನ್ನಬಸವ  ಪಶುವೈದ್ಯ ಇಲಾಖೆಯ ಸಹಾಯಕ

Advertisement

Udayavani is now on Telegram. Click here to join our channel and stay updated with the latest news.