Advertisement
2017, ಅ.30ರಂದು ಕೊಂಕಣಗಾಂವ ತೋಟದ ಮನೆಯಲ್ಲಿ ಚಡಚಣ ಠಾಣೆ ಪಿಎಸ್‌ಐ ಗೋಪಾಲ ಹಳ್ಳೂರ ನೇತೃತ್ವದಲ್ಲಿ ಭೀಮಾ ತೀರದ ಹಂತಕ ಧರ್ಮರಾಜ ಚಡಚಣನ ಎನ್‌ಕೌಂಟರ್ ನಡೆದಿತ್ತು. ಘಟನೆಯಲ್ಲಿ ಪಿಎಸ್‌ಐ ಹಳ್ಳೂರ ಕೈಗೆ ಕೂಡ ಗಾಯವಾಗಿ, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದರು. ಧರ್ಮರಾಜ ಎನ್‌ಕೌಂಟರ್ ಆಗಿದ್ದ ದಿನವೇ ಆತನ ಸಹೋದರ ಗಂಗಾಧರ ಚಡಚಣ ಕಾಣೆಯಾಗಿದ್ದ.
Related Articles
Advertisement
ಡಿಎಸ್‌ಪಿ ಜನಾರ್ದನ, ಸಿಪಿಐ ಎಂ.ಎ. ಮೊಹ್ಮದ್ ಅವರಿದ್ದ ಸಿಒಡಿ ತನಿಖಾ ತಂಡ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಬೀಡು ಬಿಟ್ಟಿತ್ತು. ಈ ಪ್ರಕರಣದಲ್ಲಿ ಸಿದ್ಧಗೊಂಡ ತಿಕ್ಕುಂಡಿ ಎಂಬ ಇನ್ನೊಬ್ಬ ಆರೋಪಿಯನ್ನು ಬಂ ಧಿಸಿದ್ದರು. ಧರ್ಮರಾಜ ಚಡಚಣ ಎನ್‌ಕೌಂಟರ್ ದಿನವೇ ಪಿಎಸ್‌ಐ ಹಳ್ಳೂರ ಅವರು ಗಂಗಾಧರನನ್ನೂ ಬಂ ಧಿಸಿ ಅವರ ಎದುರಾಳಿ ಮಹಾದೇವ ಭೈರಗೊಂಡನ ವಶಕ್ಕೆ ಒಪ್ಪಿಸಿದ್ದರು. ಆಗ ನಾವೇ ಗಂಗಾಧರನನ್ನು ಹತ್ಯೆ ಮಾಡಿ, ಶವವನ್ನು ಭೀಮಾ ನದಿಗೆ ಎಸೆದಿದ್ದಾಗಿ ಪೊಲೀಸರಿಗೆ ಹನುಮಂತ ಹಾಗೂ ಸಿದ್ಧಗೊಂಡ ಇಬ್ಬರೂ ಹೇಳಿಕೆ ನೀಡಿದ್ದರು.ಪಿಎಸ್‌ಐ ಗೋಪಾಲ ಹಳ್ಳೂರ, ಪೇದೆಗಳಾದ ಚಂದ್ರಶೇಖರ ಜಾಧವ, ಗದ್ದೆಪ್ಪ ನಾಯೊRàಡಿ ಹಾಗೂ ಸಿದ್ಧಾರೂಢ ರೂಗಿ ಅವರ ಪಾತ್ರ ಇರುವುದು ಖಚಿತವಾಗುತ್ತಿದ್ದಂತೆ ಬಂ ಧಿಸಿದ್ದಾರೆ. ಬಂ ಧಿತರನ್ನು ಶನಿವಾರ ಇಂಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆರೋಪಿಗಳನ್ನು ಜೂ.28ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪಿಎಸ್‌ಐ, ನಾಲ್ವರು ಪೊಲೀಸರ ಬಂಧನವನ್ನು ಖಚಿತಪಡಿಸಿರುವ ವಿಜಯಪುರ ಎಸ್ಪಿ ಪ್ರಕಾಶ ನಿಕ್ಕಂ, ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ ಮಹಾದೇವ ಭೈರಗೊಂಡ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಗಂಗಾಧರ ಚಡಚಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಗೋಪಾಲ ಹಳ್ಳೂರ, ಮೂವರು ಪೇದೆಗಳನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿ ಮಹಾದೇವ ಭೈರಗೊಂಡ ಬಂಧನಕ್ಕೆ ಜಾಲ ಬೀಸಲಾಗಿದೆ.
– ಪ್ರಕಾಶ ನಿಕ್ಕಂ, ವಿಜಯಪುರ ಎಸ್‌ಪಿ