Advertisement

ಪರಮ ಪಾವನೆಯಾಗುವತ್ತ ಗಂಗಾಮಾತೆ

12:15 AM Oct 25, 2021 | Team Udayavani |

ದೇಶದ ಪವಿತ್ರ ನದಿ ಗಂಗೆಯ ಶುದ್ಧೀಕರಣಕ್ಕಾಗಿ ಕೇಂದ್ರ ಸರಕಾರ ರೂಪಿಸಿದ್ದ “ನ್ಯಾಶನಲ್‌ ಮಿಷನ್‌ ಫಾರ್‌ ಕ್ಲೀನ್‌ ಗಂಗಾ ಯೋಜನೆ’ ಯಶಸ್ಸಿಯತ್ತ ಸಾಗಿದೆ. ಈ ಬಗ್ಗೆ ಯೋಜನೆಯ ಮಹಾ ನಿರ್ದೇಶಕ ರಾಜೀವ್‌ ರಂಜನ್‌ ಮಿಶ್ರಾ ಮಾಹಿತಿ ನೀಡಿದ್ದಾರೆ. 2014ರಲ್ಲಿ ನದಿಯಲ್ಲಿ ಸ್ನಾನ ಮಾಡಲು ಯೋಗ್ಯವಾದ ಸ್ಥಳಗಳ ಸಂಖ್ಯೆ 32ರಷ್ಟಿದ್ದರೆ ಈಗ ಅವುಗಳ ಸಂಖ್ಯೆ 68ಕ್ಕೇರಿದೆ.

Advertisement

ಸ್ನಾನಕ್ಕೆ ಯೋಗ್ಯ: ನದಿ ಹರಿಯುವ ಜಾಗಗಳ ಸುಮಾರು 97 ಪರಿಶೀಲನ ಸ್ಥಳಗಳನ್ನಾಗಿ ಗುರುತು ಮಾಡಲಾಗಿತ್ತು. ಅವುಗಳಲ್ಲಿ ಸುಮಾರು 68 ಸ್ಥಳಗಳಲ್ಲಿ ನೀರಿನ ಮಾದರಿಯನ್ನು ಪಡೆದು ಪರೀಕ್ಷಿಸಲಾಗಿದೆ. ಅದರಲ್ಲಿ ಆಮ್ಲಜನಕದ ಪ್ರಮಾಣ ತಜ್ಞರು ನಿಗದಿಪಡಿಸಿದ್ದಕ್ಕಿಂತ ಜಾಸ್ತಿಯೇ ಇದೆ. ಅಲ್ಲದೆ, “ಬಯೋಕೆಮಿಕಲ್‌ ಆಕ್ಸಿಜನ್‌ ಡಿಮ್ಯಾಂಡ್‌’ (ಬಿಒಡಿ) ಅನುಸಾರ ಈಗ ನದಿ ನೀರು ಸ್ನಾನಕ್ಕೆ ಯೋಗ್ಯವಾಗಿದೆ.

ಸ್ನಾನ ಯೋಗ್ಯ ನೀರು 98 ಕಡೆ ಲಭ್ಯ ಗಂಗೆಯ ಉಗಮ ಸ್ಥಾನದಲ್ಲಿ ಸಿಗುವ ನೀರಿನಷ್ಟೇ ಶುದ್ಧತೆಯನ್ನು ನದಿಯ ಉಳಿದೆಲ್ಲ ಕಡೆಗಳಲ್ಲಿ ಸಿಗುವಂತೆ ಮಾಡಲು ಯೋಜನೆಯನ್ನು ರೂಪಿಸಲಾಗಿತ್ತು. 2014ರಲ್ಲಿ ನದಿಯ 53 ಕಡೆ ಸ್ಯಾಂಪಲ್‌ಗ‌ಳನ್ನು ಪರೀಕ್ಷಿಸಿದಾಗ “ಬಿಒಡಿ’ ಮಾನದಂಡಕ್ಕೆ ಅನುಸಾರವಾಗಿ ಇರುವ ನೀರು 38 ಕಡೆ ಕಂಡುಬಂದಿತ್ತು. ಅಂದರೆ, ಆ ಜಾಗಗಳಲ್ಲಿ ಸಿಗುವ ನೀರಿನಿಂದ ಮಾತ್ರ ಸ್ನಾನ ಮಾಡಬಹುದಿತ್ತು. 2021ರಲ್ಲಿ ನದಿಯ 97 ಜಾಗಗಳಿಂದ ನೀರನ್ನು ಸಂಗ್ರಹಿಸಲಾಗಿದ್ದು ಅವುಗಳಲ್ಲಿ ಸ್ನಾನದ ಗುಣಮಟ್ಟವಿರುವ ನೀರು ಸಿಗುವ ಸ್ಥಳಗಳ ಸಂಖ್ಯೆ 68ಕ್ಕೇರಿದೆ ಎಂದಿದ್ದಾರೆ.

ಇದನ್ನೂ ಓದಿ:ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಏನಿದು ಬಿಒಡಿ?
“ಬಯೋಕೆಮಿಕಲ್‌ ಆಕ್ಸಿಜನ್‌ ಡಿಮ್ಯಾಂಡ್‌’ ಎಂದರೆ ನದಿ ನೀರಿನಲ್ಲಿ ನೈಸರ್ಗಿಕವಾಗಿರುವ ಮಾನವ ಸ್ನೇಹಿ ಬ್ಯಾಕ್ಟೀರಿಯಾ ಹಾಗೂ ಇನ್ನಿತರ ಸೂಕ್ಷ್ಮಜೀವಿಗಳು ಹೀರಿಕೊಳ್ಳುವ ಆಮ್ಲಜನಕದ ಪ್ರಮಾಣ. ಅಂದರೆ ಬಿಒಡಿ ಹೆಚ್ಚಾಗಿದೆ ಎಂದರೆ ಆಮ್ಲಜನಕದ ಪ್ರಮಾಣ ಹೆಚ್ಚಾಗಿದೆ ಎಂದರ್ಥ.

Advertisement

ವ್ಯತ್ಯಾಸ ಏನು?
“ನ್ಯಾಶನಲ್‌ ಮಿಷನ್‌ ಫಾರ್‌ ಕ್ಲೀನ್‌ ಗಂಗಾ’ ಯೋಜನೆ ಯಶಸ್ಸಿಗೆ ಸಿಕ್ಕ ಸಾಕ್ಷ್ಯ
ನದಿಮಾರ್ಗದಲ್ಲಿ ಈಗ 68 ಕಡೆ
ಸ್ನಾನಯೋಗ್ಯ ನೀರು ಲಭ್ಯಎಂದ ತಜ್ಞರು
ಆಮ್ಲಜನಕದ ಪ್ರಮಾಣ ಹೆಚ್ಚಾಗಿರುವ ನೀರು ಈಗ ಹಲವು ಕಡೆ ಲಭ್ಯ: ಯೋಜನೆ ಯಶಸ್ವಿ

Advertisement

Udayavani is now on Telegram. Click here to join our channel and stay updated with the latest news.

Next