Advertisement

ಪೀಣ್ಯ : 14 ರ ಬಾಲಕಿಯ ಮೇಲೆ ಅಪ್ರಾಪ್ತ ವಯಸ್ಕರಿಂದಲೇ ಗ್ಯಾಂಗ್‌ರೇಪ್‌

10:45 AM May 26, 2017 | Team Udayavani |

ಬೆಂಗಳೂರು : ನಗರದ ಪೀಣ್ಯದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳ ಮೇಲೆ ಇಬ್ಬರು ಅಪ್ರಾಪ್ತ ವಯಸ್ಕ ಬಾಲಕರು ಸೇರಿದಂತೆ ಮೂವರು ಬರ್ಬರವಾಗಿ ಗ್ಯಾಂಗ್‌ರೇಪ್‌ ಎಸಗಿರುವ ಘಟನೆ ಮೇ 8 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.  

Advertisement

ಬಾಲಕಿಯನ್ನು ಸಿನಿಮಾಕ್ಕೆಂದು ಯಶವಂತಪುರಕ್ಕೆ  ಕರೆದೊಯ್ದ ಪರಿಚಿತ ಯುವಕ ರಾತ್ರಿ ವಾಪಾಸಾಗುವ ವೇಳೆ ಅಮಲು ಬರುವ ಮಾತ್ರೆ ಬೆರೆಸಿದ ಜ್ಯೂಸ್‌ ನೀಡಿ ಪಾಳು ಬಿದ್ದ ಕಟ್ಟಡಕ್ಕೆ  ಕರೆದೊಯ್ದು ಅತ್ಯಾಚಾರಗೈದಿದ್ದಾನೆ. ಬಳಿಕ ತನ್ನ ಸ್ನೇಹಿತರಾದ ಅಪ್ರಾಪ್ತ ವಯಸ್ಕ ಬಾಲಕನ್ನು ಕರೆಸಿಕೊಂಡು ಗ್ಯಾಂಗ್‌ರೇಪ್‌ ಎಸಗಿದ್ದಾನೆ. 

ಘಟನೆ ನಡೆದ ಬಳಿಕ  ಕಂಗಾಲಾದ ಬಾಲಕಿ  5 ದಿನಗಳ ಕಾಲ ಸ್ನೇಹಿತೆಯ ಮನೆಯಲ್ಲಿದ್ದಳು ಎಂದು ವರದಿಯಾಗಿದೆ. 

ಬಾಲಕಿ ನಾಪತ್ತೆಯಾದುದರಿಂದ ಹೆದರಿದ ತಾಯಿ ಪೀಣ್ಯ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. 

ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next