Advertisement
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಮಾತನಾಡಿ, ಗಣಪತಿ ವಿಗ್ರಹಕ್ಕೆ ಮಾಲಾರ್ಪಣೆಗೈದು, ಉತ್ಸವಗಳ ಹಿನ್ನೆಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಎಲ್ಲರೂ ಸಹಕರಿಸಬೇಕಾಗಿದೆ ಎಂದರು.
ಬದ್ಧತೆ ಇರಲಿ
ಶ್ರೀ ಕ್ಷೇತ್ರ ಕಟೀಲಿನ ಗೋಪಾಲಕೃಷ್ಣ ಆಸ್ರಣ್ಣ ಅವರು ಮಾತನಾಡಿ, ಸಾರ್ವಜನಿಕ ಉತ್ಸವ ಆಚರಿಸುವ ನಾವೆಲ್ಲರೂ ವ್ಯಕ್ತಿಗತವಾಗಿ ವರ್ಷಕ್ಕೆ ಕನಿಷ್ಠ ಒಂದು ಗಿಡವನ್ನಾದರೂ ನೆಡುವ ಮೂಲಕ ಪರಿಸರ ಸಂರಕ್ಷಿಸಬೇಕು ಎಂದರು. ಪ್ರಧಾನ ಅರ್ಚಕ ಅಲಂಗಾರು ಈಶ್ವರ ಭಟ್ ಶ್ರೀ ಗಣೇಶ ದೇವರ ವಿಗ್ರಹ ಪ್ರತಿಷ್ಠಾಪನೆಗೈದರು.
ಟ್ರಸ್ಟ್ ಅಧ್ಯಕ್ಷ ಕೆ. ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಮಾತನಾಡಿದರು. ಉಪಾಧ್ಯಕ್ಷರಾದ ಚೌಟರ ಅರಮನೆ ಕುಲದೀಪ ಎಂ., ಜಯಶ್ರೀ ಅಮರನಾಥ ಶೆಟ್ಟಿ , ಉದ್ಯಮಿ ತಿಮ್ಮಯ್ಯ ಶೆಟ್ಟಿ, ಸಂಚಾಲಕ ರಾಜಾರಾಮ್ ನಾಗರಕಟ್ಟೆ, ಜತೆ ಕಾರ್ಯದರ್ಶಿ ಸುದರ್ಶನ ಉಪಸ್ಥಿತರಿದ್ದರು.
Related Articles
ಕೋಶಾಧಿಕಾರಿಯಾಗಿದ್ದ ದಿ| ಲಕ್ಷ್ಮಣ ಸಂಸ್ಮರಣಾರ್ಥ ಪತ್ನಿ ಕಸ್ತೂರಿ, ಪುತ್ರ, ಹಾಲಿ ಕೋಶಾಧಿಕಾರಿ ಪ್ರಸನ್ನ ರಾವ್-ವಾಣಿಶ್ರೀ ದಂಪತಿ ಗಣಪತಿಗೆ ಚಿನ್ನದ ಅಮೃತ ಹಸ್ತಗಳು, ಟ್ರಸ್ಟ್ ಸದಸ್ಯರು, ಭಕ್ತರು ಸೇರಿ 90 ಗ್ರಾಂ. ಚಿನ್ನದ ಹಾರ,
ಸಂಚಾಲಕ ರಾಜಾರಾಮ್ ಸಾವಿರ ಮಲ್ಲಿಗೆ ಮೊಗ್ಗುಗಳ ರಜತ ಹಾರ,ಸರ್ವೋದಯ ಫ್ರೆಂಡ್ಸ್ ಅರಡಿ ಎತ್ತರದ ಬೆಳ್ಳಿಯ ಕಬ್ಬು, ನಾರಾಯಣ ಪಿ.ಎಂ.-ಮೀನಾಕ್ಷಿ ದಂಪತಿರೇಷ್ಮೆ ವಸ್ತ್ರ, ಹೇಮಚಂದ್ರ ಆಚಾರ್ಯ-ದಿವ್ಯಾ ದಂಪತಿ ರಜತ ಮಾಲೆ ಸಮರ್ಪಿಸಿದರು. ಪ್ರ. ಕಾರ್ಯದರ್ಶಿ ನಾರಾಯಣ ಪಿ.ಎಂ. ಸ್ವಾಗತಿಸಿದರು. ಉಪಾಧ್ಯಕ್ಷ ಕೃಷ್ಣರಾಜ ಹೆಗ್ಡೆವಂದಿಸಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.
Advertisement