Advertisement

ವಾಲ್ಕೇಶ್ವರ ಶ್ರೀ ಕವಳೆ ಮಠ: ವಾರ್ಷಿಕ ಗಣೇಶೋತ್ಸವ ಸಂಪನ್ನ

02:39 PM Sep 23, 2021 | Team Udayavani |

ಮುಂಬಯಿ: ವಾಲ್ಕೇಶ್ವರ ಶ್ರೀ ಕವಳೆ ಮಠದಲ್ಲಿ ಗಣೇಶೋತ್ಸವವು ಸೆ. 21ರಂದು ಶ್ರೀ ಗಣೇಶ ವಿಗ್ರಹ ವಿಸರ್ಜನೆಯ ಮೂಲಕ ಸಮಾಪ್ತಿಗೊಂಡಿತು.

Advertisement

ವಾಲ್ಕೇಶ್ವರ ಕವಳೆ ಮಠದಲ್ಲಿ ಚಾತುರ್ಮಾಸ ವ್ರತಾಚರಣೆ ಕೈಗೊಂಡಿ ರುವ ಕೈವಲ್ಯ ಮಠಾಧೀಶ ಶ್ರೀಮದ್‌ ಶಿವಾನಂದ ಸರಸ್ವತೀ ಸ್ವಾಮೀಜಿ ಅವರಿಂದ ದಿನಂಪ್ರತಿ ವಿವಿಧ ಧಾ ರ್ಮಿಕ ಕಾರ್ಯಕ್ರಮಗಳು ನಡೆದವು.

ಮಂಗಳವಾರ ಬೆಳಗ್ಗೆಯಿಂದ ವಿವಿಧ ಪೂಜಾ ಕಾರ್ಯಗಳು ನೆರವೇರಿದವು. ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಸಂಜೆ ಬಾಣಗಾಂಗಾದಲ್ಲಿ ನಿರ್ಮಿಸಲಾದ ಕೃತಕ ಕೊಳದಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿ ಸಲಾಯಿತು. ಹನ್ನೆರಡು ದಿನಗಳ ಕಾಲ ನಡೆದ ಗಣೇಶೋತ್ಸವ ಸಂದರ್ಭದಲ್ಲಿ ದಿನಂಪ್ರತಿ ಪೂಜೆ,ಪುನಸ್ಕಾರಗಳು ವಿಧಿವತ್ತಾಗಿ ನೆರವೇರಿತು.

ಇದನ್ನೂ ಓದಿ:ಅರ್ಚಕರಿಗೆ, ದೇಗುಲ ನೌಕಕರಿಗೆ ಆರೋಗ್ಯ ವಿಮೆ ಜಾರಿಗೆ ಶೀಘ್ರ ಕ್ರಮ: ಶಶಿಕಲಾ ಜೊಲ್ಲೆ

ಕೋವಿಡ್‌ ಮಾರ್ಗ ಸೂಚಿಗಳನ್ನು ಅನುಸರಿಸಿಕೊಂಡು ವಿಸರ್ಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಾಲ್ಕೇಶ್ವರ ಶ್ರೀ ಕವಳೆ ಮಠದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಅರ್ಚಕ ವೃಂದದವರು, ಸಮಾಜ ಬಾಂಧವರು ಪಾಲ್ಗೊಂಡು ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next