Advertisement

ಚತುರ್ಥಿ ಅಂಗವಾಗಿ ಗಣೇಶನ ಚಿನ್ನದ ಬಿಸ್ಕತ್ತು ಅನಾವರಣ

08:00 AM Aug 03, 2022 | Team Udayavani |

ಲಂಡನ್‌: ಪ್ರಸಕ್ತ ತಿಂಗಳಾಂತ್ಯದಲ್ಲಿ ಗಣೇಶ ಚತುರ್ಥಿ ಹಬ್ಬವಿರುವ ಕಾರಣ ಯುನೈಟೆಡ್‌ ಕಿಂಗ್‌ಡಂನ ರಾಯಲ್‌ ಮಿಂಟ್‌ ವಿಘ್ನ ವಿನಾಶಕನ ಚಿತ್ರವನ್ನು ಕೆತ್ತಿರುವಂಥ 24 ಕ್ಯಾರೆಟ್‌ ಚಿನ್ನದ ಬಿಸ್ಕೆಟ್‌ ಅನ್ನು ಮಂಗಳವಾರ ಅನಾವರಣಗೊಳಿಸಿದೆ.

Advertisement

20 ಗ್ರಾಂ ತೂಕದ “999.9 ಚಿನ್ನ’ದ ಗಣೇಶನ ಚಿತ್ರವಿರುವ ಬಿಸ್ಕತ್ತು ಆನ್‌ಲೈನ್‌ನಲ್ಲಿ ಲಭ್ಯವಿದ್ದು, 1,110.80 ಪೌಂಡ್‌ (1.06 ಲಕ್ಷ ರೂ.)ಗೆ ಮಾರಾಟ ಮಾಡಲಾಗುತ್ತದೆ.

ಕಳೆದ ವರ್ಷ ದೀಪಾವಳಿಗೆ ಬಿಡುಗಡೆ ಮಾಡಲಾದ 24 ಕ್ಯಾರೆಟ್‌ನ ಲಕ್ಷ್ಮೀ ದೇವಿಯ ಚಿತ್ರವುಳ್ಳ ಚಿನ್ನದ ಬಿಸ್ಕತ್ತಿಗೂ ಇಷ್ಟೇ ಮೊತ್ತ ನಿಗದಿಪಡಿಸಲಾಗಿತ್ತು ಎಂದು ರಾಜಮನೆತನದ ಟಂಕಸಾಲೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next