Advertisement

ಗಣೇಶ ಪ್ರತಿಷ್ಠಾಪನೆ: ಸರ್ಕಾರದಿಂದ ಗೊಂದಲ

01:27 PM Aug 21, 2020 | Suhan S |

ಗುಂಡ್ಲುಪೇಟೆ: ಗಣೇಶ ಪ್ರತಿಷ್ಠಾಪನೆ ಕುರಿತು ಸರ್ಕಾರದ ಗೊಂದಲದ ನೀತಿಯಿಂದ ಪರಿಸರ ಸ್ನೇಹಿ ಗೌರಿ-ಗಣೇಶ ತಯಾರಕರು ತೊಂದರೆಗೆ ಸಿಲುಕಿದ್ದಾರೆ.

Advertisement

ಕೋವಿಡ್ ಗೆ ಸಿಲುಕಿ ಹಬ್ಬದ ಅಚರಣೆಯೇ ಕಳಾಹೀನವಾಗಿದ್ದು, ಈ ನಡುವೆ ಜೇಡಿಮಣ್ಣಿನಲ್ಲಿ ಗೌರಿ-ಗಣೇಶ ಮೂರ್ತಿ ಮಾಡಿ ಮಾರಾಟ ಮಾಡುವ ಮೂಲಕವೇ ಜೀವನ ಸಾಗಿಸುತ್ತಿರುವ ನೂರಾರು ಕಲಾವಿದರ ಬದುಕು ಹೈರಾಣಾಗುತ್ತಿದೆ.

ಪಟ್ಟಣದ ಕಲಾವಿದ ಶ್ರೀನಿವಾಸಮೂರ್ತಿ ಅವರ ಕುಟುಂಬ ತಯಾರಿಸುತ್ತಿದ್ದ ಮಣ್ಣಿನ ಮೂರ್ತಿಗೆ ತಾಲೂಕಿನಲ್ಲಿ ಹೆಚ್ಚಿನ ಬೇಡಿಕೆ ಇದೆ. ತಮ್ಮ ಪತ್ನಿ ಲಕ್ಷ್ಮಮ್ಮ ಹಾಗೂ ಮಕ್ಕಳೊಂದಿಗೆ ಸೇರಿ ಮಣ್ಣಿನಲ್ಲಿ ಗೌರಿ ಹಾಗೂ ಗಣೇಶ ಮೂರ್ತಿ ತಯಾರಿಸುತ್ತಿದ್ದಾರೆ.1ರಿಂದ 5 ಅಡಿ ಎತ್ತರದ ವಿವಿಧ ವಿನ್ಯಾಸದಲ್ಲಿ ಮನಸೆಳೆಯುತ್ತಿದ್ದ ಮೂರ್ತಿಗಳನ್ನು ಗ್ರಾಮೀಣ ಜನತೆ ತಿಂಗಳಿಗೂ ಮೊದಲೇ ತಮಗೆ ಬೇಕಾದ ಗಣಪನಿಗೆ ಆರ್ಡರ್‌ ಕೊಟ್ಟು ಖರೀದಿಸುತ್ತಿದ್ದರು. ಅಲ್ಲದೆ, ಚಿಲ್ಲರೆ ಮಾರಾಟಗಾರರೂ ಇವರಿಂದಲೇ ಮೂರ್ತಿಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದರು.

ಈ ಬಾರಿ ಗಣೇಶ ಪ್ರತಿಷ್ಠಾಪನೆ ಸಂಬಂಧ ಸರ್ಕಾರ ಖಚಿತ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಗೊಂದಲದಲ್ಲಿರುವ ಜನರು, ತಾವು ನೀಡಿದ್ದ ಆರ್ಡರ್‌ ಕ್ಯಾನ್ಸಲ್‌ ಮಾಡಿಕೊಂಡಿದ್ದಾರೆ. ಸಣ್ಣ ಮೂರ್ತಿಗಳಿಗೆ ಮಾತ್ರ ಬೇಡಿಕೆಯುಂಟಾಗಿದೆ. ಇದರಿಂದ ತಯಾರಿಸಿದ ಮೂರ್ತಿಗಳೂ ಮಾರಾಟವಾಗದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next