ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದೆ. ನಾವು ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು. ಗಣಪತಿ ಉತ್ಸವ ಯಶಸ್ವಿಯಾಗಿ ನಡೆಸಬೇಕು ಎನ್ನುವ ವಿಚಾರದಲ್ಲಿ ಯಾವ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಹಿಂದುತ್ವದ ಸಿದ್ದಾಂತವನ್ನು ಯಾವತ್ತೂ ಒಪ್ಪುವವರೂ ಕೂಡ. ಗಣಪತಿ ಉತ್ಸವವನ್ನು ನಡೆಸಿಯೇ ನಡೆಸುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಆದರೆ ಕೋವಿಡ್ ಸಂದರ್ಭದಲ್ಲಿ ಹೇಗೆ ನಡೆಸಬೇಕು, ಎಷ್ಟು ಜನ ಸೇರಬೇಕು ಎಂದು ಗಮನಿಸಬೇಕು. ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ನೀತಿ- ನಿಯಮಗಳನ್ನು ತಿಳಿಸಲಿದೆ. ಗಣೇಶೋತ್ಸವ ಯಶಸ್ವಿಯಾಗಿ ನಡೆಯುತ್ತದೆ. ಸರ್ಕಾರ ಕೂಡ ಅದಕ್ಕೆ ಪೂರ್ಣ ಬೆಂಬಲ ಕೊಡುತ್ತದೆ ಎಂದು ನನಗೆ ಪೂರ್ಣ ನಂಬಿಕೆಯಿದೆ. ರಾಜ್ಯದ ಜನ ಕೂಡ ಅದನ್ನು ಗಮನಿಸುತ್ತಾರೆ ಎಂದರು.
ಇದನ್ನೂ ಓದಿ:ಏನೇ ಆದರೂ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ನಡೆಯುತ್ತದೆ: ಈಶ್ವರಪ್ಪ
ಜನಾಶೀರ್ವಾದ ಯಾತ್ರೆ ಸಂದರ್ಭದಲ್ಲಿ ಜನ ಸೇರಿದ್ದನ್ನು ನಾನು ಒಪ್ಪಲ್ಲ. ತುಂಬಾ ಸ್ಪಷ್ಟವಾಗಿ ಬಿಜೆಪಿಯ ಒಬ್ಬ ಮಂತ್ರಿಯಾಗಿ ಹೇಳು ಇಷ್ಟ ಪಡುತ್ತೇನೆ. ನಾನು ಒಪ್ಪಲ್ಲ, ಹಾಗೇಯೇ ಗಣೇಶೋತ್ಸವ ನಿಲ್ಲಿಸಬೇಕು ಎಂಬುದನ್ನು ನಾನು ಒಪ್ಪಲ್ಲ. ಆರೋಗ್ಯವೂ ಮುಖ್ಯ. ಅದರ ಕಡೆಗೂ ಗಮನ ಕೊಡಬೇಕು ಎಂದು ಸಚಿವ ಈಶ್ವರಪ್ಪ ಹೇಳಿದರು.