Advertisement

ಗಣೇಶ್‌ಗೆ ಶೀಘ್ರದಲ್ಲೇ ಸಚಿವ ಸ್ಥಾನ:ರಮೇಶ್‌ ಜಾರಕಿಹೊಳಿ

12:30 AM Feb 20, 2019 | |

ಹೊಸಪೇಟೆ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಲೇ ಬಂದಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಈಗ ಹೊಸ ಬಾಂಬ್‌ ಸಿಡಿಸಿದ್ದಾರೆ. ರೆಸಾರ್ಟ್‌ಲ್ಲಿ ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿ ಸದ್ಯ ತಲೆಮರೆಸಿಕೊಂಡಿರುವ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಶೀಘ್ರದಲ್ಲೇ ಸಚಿವರಾಗಲಿದ್ದಾರೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Advertisement

ಮಂಗಳವಾರ ಶಾಸಕ ಗಣೇಶ್‌ ಅವರ ಮನೆಗೆ ಭೇಟಿ ನೀಡಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿ ಮೈತ್ರಿ ಸರಕಾರದ ಬಗ್ಗೆ ನನಗೆ ಅತೃಪ್ತಿ ಇದೆ. ಆದರೆ ಕಾಂಗ್ರೆಸ್‌ ತೊರೆಯುವುದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಬಲಿಷ್ಠ ಸಂಘಟನೆಗಾಗಿ ಜಿÇÉೆಯ ಶಾಸಕ ಗಣೇಶನನ್ನು ಸಚಿವರಾಗಿಸಬೇಕು. ಇದಕ್ಕಾಗಿ ನಾನು ಯಾವ ತ್ಯಾಗಕ್ಕೂ ಸಿದ್ಧ ಎಂದರು.

ಗಣೇಶ್‌ ಯಾವುದೇ ತಪ್ಪು ಮಾಡಿಲ್ಲ
ರೆಸಾರ್ಟ್‌ ಗಲಾಟೆ ಪ್ರಕರಣದಲ್ಲಿ ಗಣೇಶನನ್ನು ಬಲಿಪಶು ಮಾಡಲಾಗಿದೆ. ಗಣೇಶ್‌ ಯಾವುದೇ ತಪ್ಪು ಮಾಡಿಲ್ಲ. ಗಲಾಟೆ ನಡೆದಾಗ ಶಾಸಕ ಭೀಮಾನಾಯ್ಕ, ಆನಂದ್‌ ಸಿಂಗ್‌ ಮತ್ತು ಗಣೇಶ್‌ ಮಾತ್ರ ಇದ್ದರು. ಈ ಘಟನೆ ಕುರಿತು ಶಾಸಕ ಭೀಮಾ ನಾಯ್ಕ ಅವರೇ ಸತ್ಯ ಹೊರ ಹಾಕಬೇಕಿದೆ. ಶಾಸಕ ಆನಂದ್‌ ಸಿಂಗ್‌, ಗಣೇಶ್‌ ವಿರುದ್ಧ ನೀಡಿದ ದೂರು ಹಿಂಪಡೆಯಬೇಕೆಂದರು. ಗಣೇಶ್‌ ತಪ್ಪು ಮಾಡಿಲ್ಲ. ನ್ಯಾಯಾಲಯಕ್ಕೆ ಶರಣಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಶಾಸಕ ಭೀಮಾ ನಾಯ್ಕ ಸತ್ಯ ಬಾಯ್ಬಿಡಬೇಕು. ಗಣೇಶ್‌ ತಪ್ಪಿತಸ್ಥನಾಗಿದ್ದರೆ ಆತನಿಗೂ ಶಿಕ್ಷೆಯಾಗಲಿ. ಆದರೆ ಗಣೇಶ್‌ನಿಗೆ ಅನ್ಯಾಯವಾದರೆ ಸಮಾಜ ಸುಮ್ಮನೆ ಇರುವುದಿಲ್ಲ ಎಂದರು.

ಕುತೂಹಲ ಮೂಡಿಸಿದ ಭೇಟಿ
ಕಂಪ್ಲಿ ಶಾಸಕ ಗಣೇಶ್‌ ಅವರ ಹೊಸಪೇಟೆ ನಿವಾಸಕ್ಕೆ ರಮೇಶ್‌ ಜಾರಕಿಹೊಳಿ ಮಂಗಳವಾರ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ. ಅತೃಪ್ತ ಶಾಸಕರ ಈ ಭೇಟಿ ಇನ್ನೂ “ಆಟ’ ಬಾಕಿ ಇದೆ ಎಂಬ ಸಂದೇಶವನ್ನು ಪಕ್ಷದ ಮುಖಂಡರಿಗೆ ರವಾನಿಸಿದೆೆ. 

Advertisement

Udayavani is now on Telegram. Click here to join our channel and stay updated with the latest news.

Next