Advertisement

ಇಂದಿನಿಂದ ಗಣೇಶ್ ನಗೆಹಬ್ಬ: ತೆರೆಗೆ ಬಂತು ‘ತ್ರಿಬಲ್ ರೈಡಿಂಗ್’

09:17 AM Nov 25, 2022 | Team Udayavani |

ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ “ತ್ರಿಬಲ್‌ ರೈಡಿಂಗ್‌’ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಕಳೆದ ಒಂದು ತಿಂಗಳಿನಿಂದ ಭರದಿಂದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ “ತ್ರಿಬಲ್‌ ರೈಡಿಂಗ್‌’ ಸಿನಿಮಾಕ್ಕೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ “ತ್ರಿಬಲ್‌ ರೈಡಿಂಗ್‌’ ಸಿನಿಮಾದ ಟೀಸರ್‌, ಹಾಡುಗಳು ಮತ್ತು ಟ್ರೇಲರ್‌ ಎಲ್ಲವೂ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಜೋರಾಗಿ ಸೌಂಡ್‌ ಮಾಡುತ್ತಿದೆ. ಇದೇ ಖುಷಿಯಲ್ಲಿರುವ “ತ್ರಿಬಲ್‌ ರೈಡಿಂಗ್‌’ ಚಿತ್ರತಂಡ, ಥಿಯೇಟರ್‌ ನಲ್ಲೂ ಸಿನಿಮಾ “ರೈಡಿಂಗ್‌’ ಜೋರಾಗಿರಲಿದೆ ಎಂಬ ವಿಶ್ವಾಸದಲ್ಲಿದೆ.

Advertisement

ಫ್ಯಾಮಿಲಿ ಡ್ರಾಮಾ “ಇದೊಂದು ಕಂಪ್ಲೀಟ್‌ ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಸಿನಿಮಾ. ಲವ್‌, ರೊಮ್ಯಾನ್ಸ್‌, ಆ್ಯಕ್ಷನ್‌, ಕಾಮಿಡಿ, ಎಮೋಶನ್ಸ್‌ ಎಲ್ಲವೂ ಸಿನಿಮಾದಲ್ಲಿದೆ. ಸಿನಿಮಾದ ಟೈಟಲ್‌ “ತ್ರಿಬಲ್‌ ರೈಡಿಂಗ್‌’ ಅಂತಿದ್ದರೂ, ಯಾವುದೇ ಮುಜುಗರವಿಲ್ಲದೆ ಇಡೀ ಫ್ಯಾಮಿಲಿ ಕುಳಿತು ಈ ಸಿನಿಮಾ ನೋಡಬಹುದು. ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ಇಷ್ಟವಾಗುವಂಥ ಸಿನಿಮಾ ಮಾಡಿದ್ದೇವೆ’ ಎಂಬುದು ಸಿನಿಮಾದ ಬಗ್ಗೆ ನಾಯಕ ನಟ ಗಣೇಶ್‌ ಮಾತು.

ಇನ್ನು “ತ್ರಿಬಲ್‌ ರೈಡಿಂಗ್‌’ ಸಿನಿಮಾದಲ್ಲಿ ಗಣೇಶ್‌ ಅವರಿಗೆ ಅದಿತಿ ಪ್ರಭುದೇವ, ಮೇಘಾ ಶೆಟ್ಟಿ ಮತ್ತು ರಚನಾ ಇಂದರ್‌ ಮೂವರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಮಸ್ತ್ ಮಜಾ ಸಿನ್ಮಾ “ಕೃಪಾಲು ಎಂಟರ್‌ಟೈನ್ಮೆಂಟ್ಸ್‌’ ಬ್ಯಾನರ್‌ನಲ್ಲಿ ವೈ. ಎಂ ರಾಮ್‌ ಗೋಪಾಲ್‌ ನಿರ್ಮಿಸಿರುವ “ತ್ರಿಬಲ್‌ ರೈಡಿಂಗ್‌’ ಸಿನಿಮಾಕ್ಕೆ ಮಹೇಶ್‌ ಗೌಡ ನಿರ್ದೇಶನವಿದೆ. ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ, ಈ ಹಿಂದೆ “ರಗಡ್‌’ ಎಂಬ ಸಿನಿಮಾ ನಿರ್ದೇಶಿಸಿದ್ದ ಮಹೇಶ್‌ ಗೌಡ, ಈ ಬಾರಿ “ತ್ರಿಬಲ್‌ ರೈಡಿಂಗ್‌’ ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

“ಸಿನಿಮಾದ ಟೈಟಲ್ಲೇ ಹೇಳುವಂತೆ, “ತ್ರಿಬಲ್‌ ರೈಡಿಂಗ್‌’ ಒಂದು ಫ‌ನ್‌ ರೈಡಿಂಗ್‌ ಸಿನಿಮಾ. ಇಡೀ ಸಿನಿಮಾದಲ್ಲಿ ಎಲ್ಲೂ ಡಬಲ್‌ ಮೀನಿಂಗ್‌ ಡೈಲಾಗ್ಸ್‌ ಇಲ್ಲ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ಮಹತ್ವವಿದೆ. ಹಿಂದಿನ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿರದಂತಹ ಡಿಫ‌ರೆಂಟ್‌ ಗೆಟಪ್‌ ಗಣೇಶ್‌ ಅವರಿಗೆ ಈ ಸಿನಿಮಾದಲ್ಲಿದೆ. ಖಂಡಿತವಾಗಿಯೂ ಫ್ಯಾಮಿಲಿ ಆಡಿ ಯನ್ಸ್‌ಗೆ “ತ್ರಿಬಲ್‌ ರೈಡಿಂಗ್‌’ ಇಷ್ಟವಾಗಲಿದೆ’ ಎಂಬುದು ನಿರ್ದೇಶಕ ಮಹೇಶ್‌ ಗೌಡ ಮಾತು.

ಜಿ.ಎಸ್‌.ಕಾರ್ತಿಕ ಸುಧನ್

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next