ನವದೆಹಲಿ: 10 ವರ್ಷಗಳ ಹಿಂದಿನ ಅತ್ಯಾಚಾರ ಪ್ರಕರಣ ಸಂಬಂಧ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುನನ್ನು ದೋಷಿ ಎಂದು ಪರಿಗಣಿಸಿ ಗಾಂಧಿನಗರ ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ.
Advertisement
ಸೂರತ್ ಮೂಲದ ಮಹಿಳೆಯೊಬ್ಬರು ತಾವು ಅಹಮದಾಬಾದ್‌ನಲ್ಲಿ ಅಸಾರಾಂನ ಆಶ್ರಮದಲ್ಲಿದ್ದ ವೇಳೆ, ಆತ ತನ್ನ ಮೇಲೆ ಪದೇ ಪದೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿ, ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ಅಸಾರಾಂ ದೋಷಿ ಎಂದು ಸಾಬೀತಾಗಿದ್ದು, ಇನ್ನಿತರ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅಸಾರಾಂನ ಪತ್ನಿ ಸೇರಿದಂತೆ 6 ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಅಸಾರಾಂ ಸದ್ಯಕ್ಕೆ ಮತ್ತೊಂದು ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಜೋಧಪುರ ಜೈಲಿನಲ್ಲಿದ್ದಾನೆ.