Advertisement

ಗಾಂಧೀಜಿ ನೈತಿಕ ಭಾರತ ಕಟ್ಟುವ ಶಕ್ತಿ: ಬೊಮ್ಮಾಯಿ

11:29 PM Oct 02, 2021 | Team Udayavani |

ಬೆಂಗಳೂರು: ಗಾಂಧೀಜಿ ಒಬ್ಬ ವ್ಯಕ್ತಿಯಲ್ಲ. ಅವರು ನೈತಿಕ ಭಾರತವನ್ನು ಕಟ್ಟುವ ಶಕ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದ್ದಾರೆ.

Advertisement

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾ ಟಕ ಗಾಂಧೀ ಸ್ಮಾರಕ ನಿಧಿ ಗಾಂಧಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸ್ವಾತಂತ್ರೋತ್ಸವದ 75ನೇ ಅಮೃತ ಮಹೋತ್ಸವ ವರ್ಷಾ ಚರಣೆ, ಮಹಾತ್ಮಾ ಗಾಂಧಿ ಜನ್ಮ ದಿನಾಚರಣೆ ಹಾಗೂ ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಅವರು ಮಾತನಾಡಿದರು.

ಅವರು ಸ್ವಾತಂತ್ರ್ಯ ಹೋರಾಟ ಗಾರರಷ್ಟೇ ಅಲ್ಲ; ನೈತಿಕ ಭಾರತವನ್ನು ಕಟ್ಟುವ ಶಕ್ತಿ. ಪರಿವರ್ತನೆ ಗಾಂಧೀಜಿಯವರ ದೊಡ್ಡ ಗುಣ. ನಾವು ಇಂದು ಸುಳ್ಳನ್ನು ಉಳಿತಾಯ ಮಾಡಿ, ಸತ್ಯವನ್ನು ಖರ್ಚು ಮಾಡಬೇಕಾಗಿದೆ. ಗಾಂಧೀಜಿಯವರ ಹೋರಾಟಕ್ಕೆ ತಾತ್ವಿಕ, ಸೈದ್ಧಾಂತಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯಿದೆ. ಪ್ರತಿ ಯೊಬ್ಬರೂ ಬದ್ಧತೆಯೊಂದಿಗೆ ಕೆಲಸ ಮಾಡಿದಾಗ ಸಾರ್ಥಕತೆ ಮೂಡುತ್ತದೆ ಎಂದರು.

ಪ್ರಶಸ್ತಿ ಪ್ರದಾನ
ಪ್ರಸಕ್ತ ಸಾಲಿನ ಗಾಂಧಿ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿರುವ ಸಿದ್ದಗಂಗಾ ಮಠದ ಪರವಾಗಿ ಡಾ| ಶಿವಪ್ಪ ಹಾಗೂ ಮೀರಾಬಾಯಿ ಕೊಪ್ಪಿಕರ್‌ ಪರವಾಗಿ ಮುಧೋಳ ಶಾಸಕರೂ ಆಗಿರುವ ಸಚಿವ ಗೋವಿಂದ ಕಾರಜೋಳ ಅವರು ಪ್ರಶಸ್ತಿ ಸ್ವೀಕರಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಇದನ್ನೂ ಓದಿ:ಕಾಂಗ್ರೆಸ್‌ ಸೋಲಿಸಲು ಜೆಡಿಎಸ್‌ನಿಂದ ಮುಸ್ಲಿಂ ಅಭ್ಯರ್ಥಿ: ಸಿದ್ದು

Advertisement

ಗ್ರಾಮೋದ್ಯೋಗ ಉತ್ತೇಜನ
ರಾಜ್ಯದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಇದಕ್ಕಾಗಿ ವಿಶೇಷ ಕಾರ್ಯಕ್ರಮ ರೂಪಿಸಲಾಗು ವುದು ಎಂದು ಸಿಎಂ ಹೇಳಿದರು. ಮಾಜಿ ಸಚಿವ ಎಚ್‌.ಕೆ. ಪಾಟೀಲ್‌, ನಿವೃತ್ತ ನ್ಯಾಯಮೂರ್ತಿ ಅಶೋಕ್‌ ಬಿ. ಹಿಂಚಗೇರಿ, ಸಚಿವರಾದ ಗೋವಿಂದ ಎಂ. ಕಾರಜೋಳ, ಹಾಲಪ್ಪ ಆಚಾರ್‌, ಸಂಸದರಾದ ಶಿವಕುಮಾರ್‌ ಉದಾಸಿ, ಡಾ| ಎಲ್‌. ಹನುಮಂತಯ್ಯ ಮತ್ತಿತರರು ಉಪಸ್ಥಿತರಿದ್ದರು.

ಖಾದಿ ಸೀರೆ ಖರೀದಿಸಿದ ಮುಖ್ಯಮಂತ್ರಿ
ಗಾಂಧಿ ಜಯಂತಿ ನಿಮಿತ್ತ ಖಾದಿ ಎಂಪೋರಿಯಂಗೆ ಭೇಟಿ ನೀಡಿ ಮಾರಾಟ ಹಾಗೂ ಪ್ರದರ್ಶನ ಮಳಿಗೆಗಳನ್ನು ವೀಕ್ಷಿಸಿದ ಮುಖ್ಯಮಂತ್ರಿಯವರು ಪತ್ನಿಗೆ 16 ಸಾವಿರ ರೂ. ಮೌಲ್ಯದ ಸೀರೆ ಖರೀದಿಸಿದರು. ಇದೇ ವೇಳೆ ಜತೆಗಿದ್ದ ಸಚಿವರು ಹಾಗೂ ಇತರರಿಗೂ ಸೀರೆ ಖರೀದಿಸಲು ಪ್ರೇರೇಪಿಸಿದರು. ಸಚಿವರಾದ ಗೋವಿಂದ ಕಾರಜೋಳ, ಎಂಟಿಬಿ ನಾಗರಾಜ್‌, ಮಾಜಿ ಸಿಎಂ ಬಿಎಸ್‌ವೈ ಪುತ್ರ ಬಿ.ವೈ. ವಿಜಯೇಂದ್ರ ಕೂಡ ಸೀರೆಗಳನ್ನು ಖರೀದಿಸಿದರು. ಮುಖ್ಯಮಂತ್ರಿಯವರು ತಮಗಾಗಿ ಖಾದಿ ಬಟ್ಟೆಗಳನ್ನೂ ಖರೀದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next