ಚಿಕ್ಕೋಡಿ: ಸ್ವಚ್ಛತೆ , ಸಮರ್ಪಕ ಸರಕಾರದ ಅನುದಾನ ಬಳಕೆ, ಒಂದೇ ಸೂರಿನಡಿ ಸರ್ಕಾರದ ಸೌಲಭ್ಯ ಒದಗಿಸುವ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮ ಪಂಚಾಯತಿಗೆ ಪ್ರಸಕ್ತ ವರ್ಷದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ಆಡಳಿತದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್ ಗಳಿಗೆ ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೀಡುವ 2018-19ನೇ ಸಾಲಿನ ಗಾಂಧಿಧೀ ಗ್ರಾಮ ಪ್ರಶಸ್ತಿಗೆ ಭಾಜನವಾಗಿದೆ. ಚಿಕ್ಕೋಡಿ ತಾಲೂಕಿನ 63 ಗ್ರಾಮ ಪಂಚಾಯತ್ ಗಳಲ್ಲಿ ಕರೋಶಿ ಗ್ರಾಮ ಪಂಚಾಯತ್ ಆಡಳಿತದಲ್ಲಿ ಉತ್ತಮವಾಗಿದೆಂದು ಪರಿಗಣಿಸಿ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಳಿಸಿದೆ.
ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮವು ತೀವ್ರ ಬರಗಾಲಕ್ಕೆ ಒಳಗಾಗಿರುವ ಗ್ರಾಮ. ಇಂತಹ ಗ್ರಾಮದಲ್ಲಿ ಜನರಿಗೆ ಕುಡಿಯುವ ನೀರನ್ನು ಪೂರೈಕೆ ಮಾಡುವುದೇ ಒಂದು ದೊಡ್ಡ ಸಮಸ್ಯೆ, ಇಂತಹ ಸಮಸ್ಯೆಗಳನ್ನು ಬಗೆ ಹರಿಸುತ್ತಾ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನಿರಿನ ತೊಂದರೆಯಾಗದಂತೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿಯು ಸೂಕ್ತ ಗಮನ ಹರಿಸಿ ಗ್ರಾಮದ ಇತರೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ ಪರಿಣಾಮ ಇಂದು ತಾಲೂಕಿನಲ್ಲಿಯೇ ಉತ್ತಮ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 9 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಕರೋಶಿ ಗ್ರಾಮದಲ್ಲಿ 22 ಜನ ಸದಸ್ಯರಿದ್ದಾರೆ.
ಇಂತಹ ದೊಡ್ಡ ಗ್ರಾಮ ಪಂಚಾಯತ್‌ದಲ್ಲಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿರುವ ಗ್ರಾಮದ ಮುಖಂಡ ಮಹೇಶ ಭಾತೆ, ಪಂಚಾಯತ್ ಅಧ್ಯಕ್ಷ ಸಂಜಯ ಕಾಂಬಳೆ ಅವರು ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳಿಂದ ಬರುವ ಅನುದಾನವನ್ನು ಎಲ್ಲ ವಾರ್ಡಗಳಿಗೆ ಸದ್ಬಳಕೆಯಾಗುವಂತೆ ಪಿಡಿಒ ಮತ್ತು ಸಿಬ್ಬಂದಿ ವರ್ಗ ನಿರ್ದೇಶನ ನೀಡಿದ ಫಲವಾಗಿ ಪಿಡಿಒಗಳು ಗ್ರಾಮದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ವಾರ್ಡ ಸಭೆ ಮತ್ತು ಗ್ರಾಮ ಸಭೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ. ಗ್ರಾಪಂ ಗೆ ಬರುವ ವಿವಿಧ ಯೋಜನೆಗಳು ಕ್ರಮ ಬದ್ಧವಾಗಿವೆ.
ಅನುಷ್ಠಾನಗೊಳ್ಳುತ್ತವೆ ಎಂಬುದನ್ನು ಪ್ರತಿ ತಿಂಗಳು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆಯುತ್ತದೆ. ಸಾರ್ವಜನಿಕರ ಕೆಲಸ ಕಾರ್ಯಗಳು ಮತ್ತು ಇಲಾಖೆ ಕಾಗದ ಪತ್ರಗಳು ಕ್ರಮ ಬದ್ಧವಾಗಿವೆ ಇಲ್ಲವೆ ಎಂಬುದನ್ನು ಪ್ರತಿ ದಿನ ಪರಿಶೀಲನೆ ನಡೆಸಲಾಗುತ್ತದೆ ಎನ್ನುತ್ತಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಸಂಜಯ ಕಾಂಬಳೆ.