Advertisement

80 ಬಡಗಬೆಟ್ಟು ಗ್ರಾ.ಪಂ.ಗೆ 3ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ

09:12 PM Sep 22, 2021 | Team Udayavani |

ಉಡುಪಿ:  ಉತ್ತಮ ಸಾಧನೆ ಮಾಡಿದ ಗ್ರಾ.ಪಂ.ಗಳಿಗೆ ಕೊಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾ.ಪಂ. 3ನೇ ಬಾರಿಗೆ ಆಯ್ಕೆಯಾಗಿದೆ.

Advertisement

ಮಣಿಪಾಲ ನಗರಕ್ಕೆ ತಾಗಿರುವ ಈ ಗ್ರಾ.ಪಂ. ತಾಂತ್ರಿಕವಾಗಿ ಗ್ರಾಮೀಣ ಪ್ರದೇಶವಾದರೂ ನಗರದ ಅಭಿವೃದ್ಧಿ ಮಾನದಂಡಕ್ಕೆ ಅನುಗುಣವಾಗಿ ಬೆಳೆದಿದೆ. 2,345.69 ಹೆಕ್ಟೇರ್‌ ವಿಸ್ತೀರ್ಣ ಹೊಂದಿದ್ದು, 4,895 ಪುರುಷರು, 4,414 ಮಹಿಳೆಯರು ಸೇರಿದಂತೆ ಒಟ್ಟು 9,309 ಜನಸಂಖ್ಯೆ ಇದೆ. ಪ್ರತಿಷ್ಠಿತ ಮ್ಯಾನೇಜೆ¾ಂಟ್‌ ಸಂಸ್ಥೆ ಟ್ಯಾಪ್ಮಿ, ಸಾಲುಮರದ‌ ತಿಮ್ಮಕ್ಕ ಪಾರ್ಕ್‌ ಗ್ರಾ.ಪಂ. ವ್ಯಾಪ್ತಿಯೊಳಗೆ ಇದೆ. ಉತ್ತಮ ತೆರಿಗೆ ಸಂಗ್ರಹ, ಸರಕಾರದ ವಿಶೇಷ ಅನುದಾನದ ಪೂರ್ಣ ಪ್ರಮಾಣದ ಬಳಕೆ, ಸ್ವಾವಲಂಬಿ ಎಸ್‌ಎಲ್‌ಆರ್‌ಎಂ ಘಟಕ, ಡಿಜಿಟಲ್‌ ಗ್ರಂಥಾಲಯ, ಸ್ವಜಲಧಾರ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ವ್ಯವಸ್ಥಿತವಾಗಿ ಅಳವಡಿಸಿರುವುದು ಗ್ರಾ.ಪಂ. ಸಾಧನೆ.

ಸ್ವಾವಲಂಬಿ ಗ್ರಾ.ಪಂ. ಹೆಗ್ಗಳಿಕೆ:

ಎಸ್‌ಎಲ್‌ಆರ್‌ಎಂ ಘಟಕಕ್ಕೆ ತಿಂಗಳಿಗೆ 1.80 ಲ.ರೂ.ನಂತೆ, ವಾರ್ಷಿಕ 21.6 ಲ.ರೂ. ಆದಾಯ ಬರುತ್ತಿದೆ. ಇದು ಜಿಲ್ಲೆಯಲ್ಲಿ ಅತ್ಯಧಿಕ ಆದಾಯ ಗಳಿಸುವ ಘಟಕ. ಜತೆಗೆ ಗ್ರಾ.ಪಂ.ನಿಂದ ಅನುದಾನ ಪಡೆಯದೆ ಎಸ್‌ಎಲ್‌ಆರ್‌ಎಂ ಘಟಕ ಮುನ್ನಡೆಸಲಾಗುತ್ತಿದೆ.

ಮನೆಗೆ –ಮನೆಗೂ ನೀರಿನ ಸಂಪರ್ಕ :

Advertisement

ಗ್ರಾ.ಪಂ. ವ್ಯಾಪ್ತಿಯಲ್ಲಿ 3,499 ಮನೆಗಳಿದ್ದು, ಬಾವಿ ವ್ಯವಸ್ಥೆ ಇಲ್ಲದ ಸುಮಾರು 3,200ಕ್ಕೂ ಅಧಿಕ ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಒದಗಿಸಿ ಮೀಟರ್‌ ಅಳವಡಿಸಿದೆ. ನಗರಸಭೆಯ ಸ್ವರ್ಣಾ ನದಿ ನೀರು, ಬೋರ್‌ವೆಲ್‌, ತೆರೆದ ಬಾವಿಗಳು ನೀರಿನ ಮೂಲವಾಗಿದೆ. ಸ್ವಜಲಧಾರಾ ಯೋಜನೆಯಡಿ 2 ಕೋ.ರೂ.ವೆಚ್ಚದ ನೀರಿನ ಯೋಜನೆ ಅನುಷ್ಠಾನ ಮಾಡಿದ್ದು, ಅದರ ಫ‌ಲವಾಗಿ ವರ್ಷದ 365 ದಿನವೂ ಇಲ್ಲಿ ನೀರಿಗೆ ಬರವಿಲ್ಲ. ಕುಡಿಯುವ ನೀರಿನಿಂದ ಬರುವ ಆದಾಯವನ್ನು ನೀರಿಗಾಗಿ ಖರ್ಚು ಮಾಡಲಾಗುತ್ತಿದೆ.

ಕಚೇರಿಗೆ ಸೋಲಾರ್‌ :

ಗ್ರಾ.ಪಂ. ಕಚೇರಿಗೆ ದಾನಿಗಳ ನೆರವಿ ನಿಂದ ಸಂಪೂರ್ಣವಾಗಿ ಸೋಲಾರ್‌ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಸುಮಾರು 1,150 ಬೀದಿ ದೀಪ, ಮೂರು ರಿಂಗ್‌ ರೋಡ್‌, ಉತ್ತಮ ರಸ್ತೆಗಳು, ನಿಗದಿತ ಸಮಯದಲ್ಲಿ ಸಭೆ, ದಾಖಲೆಗಳ ಡಿಜಿಟಲೀಕರಣ, ಎಸ್ಸಿ ಮತ್ತು ಎಸ್‌ಟಿ ಶೇ.25 ಅನುದಾನದ ನಿಧಿ ಬಳಸಿಕೊಂಡು ಸುಮಾರು 20 ಪರಿಶಿಷ್ಟರಿಗೆ 4.50 ಲ.ರೂ. ವೆಚ್ಚದಲ್ಲಿ ಆರೋಗ್ಯ ಕಾರ್ಡ್‌ ವಿತರಿಸಿದ್ದಾರೆ.

ಸಂಪೂರ್ಣ ಅನುದಾನ ಬಳಕೆ :

ಗ್ರಾ.ಪಂ. ಪ.ಜಾತಿ ಹಾಗೂ ಪಂಗಡದ, 15ನೇ ಹಣಕಾಸು ಆಯೋಗದ, ಅಂಗ ವಿಕಲರ ಅನುದಾನಗಳನ್ನು ಸಂಪೂರ್ಣ ವಾಗಿ ಬಳಸಿಕೊಂಡಿದೆ. ಜತೆಗೆ ನಗರಸಭೆ ನೀರಿನ ಬಿಲ್‌ ಹಾಗೂ ದಾರಿ ದೀಪದ ವಿದ್ಯುತ್‌ ಬಿಲ್‌ ವಾರ್ಷಿಕ ಸುಮಾರು 18 ಲ.ರೂ. ಮೊತ್ತವನ್ನು ಕ್ಲಪ್ತ ಸಮಯಕ್ಕೆ ಪಾವತಿಸುತ್ತಿದೆ. ಈ ಬಾರಿ ವಿಶೇಷವಾಗಿ ಕೋವಿಡ್‌ ಸಂದರ್ಭ ಪಂ. ವಿಶೇಷವಾಗಿ ದಾನಿಗಳ ನೆರವಿನಿಂದ ಆಸ್ಪತ್ರೆಗಳಿಗೆ ಆಕ್ಸಿಜನ್‌ ಕೊಡುಗೆಯ ಜತೆಗೆ ಔಷಧಗಳನ್ನು, ವಿಟಮಿನ್‌ ಮಾತ್ರೆ ವಿತರಿಸಿರುವುದು ಸತತ 2ನೇ ಬಾರಿ ಗಾಂಧಿ ಪುರಸ್ಕಾರ ಪಡೆಯಲು ಸಹಕಾರಿಯಾಗಿದೆ.

ಗ್ರಾ.ಪಂ. ಸಾಧನೆ :

  • ಜ ಡಿಜಿಟಲ್‌ ಲೈಬ್ರೆರಿ
  • ಅಗತ್ಯವಿರುವ ಎಲ್ಲ ಮನೆಗಳಿಗೆ ನಳ್ಳಿ ಸಂಪರ್ಕ
  • ವ್ಯವಸ್ಥಿತ ಹಸಿ -ಒಣ ಕಸ ವಿಲೇವಾರಿ
  • ಗ್ರಾ.ಪಂ. ಕಟ್ಟಡಕ್ಕೆ ಸೋಲಾರ್‌ ಅಳವಡಿಕೆ
  • ಶೇ. 100 ಸಾಕ್ಷರತೆ
  • ತೆರಿಗೆ ಸಂಗ್ರಹ: ಉತ್ತಮ ಸಾಧನೆ
  • ಉತ್ತಮ ರಸ್ತೆಗಳು
  • ಪ.ಜಾತಿ ಹಾಗೂ ಪ.ಪಂ. ದವರಿಗೆ ಆರೋಗ್ಯ ಕಾರ್ಡ್‌

ಗ್ರಾ.ಪಂ.ನ ಪ್ರಗತಿಯನ್ನು ಆಧರಿಸಿ, ಉಡುಪಿ ತಾಲೂಕಿನ ಗ್ರಾ.ಪಂ.ಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 80 ಬಡಗಬೆಟ್ಟು ಗ್ರಾ.ಪಂ. ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಸಂಘಟನಾತ್ಮಕ ಕಾರ್ಯದಿಂದಾಗಿ ಪುರಸ್ಕಾರ ದೊರೆತಿದೆ.ಅಶೋಕ್‌ ಕುಮಾರ್‌, ಪಿಡಿ ಒ, 80 ಬಡಗಬೆಟ್ಟು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next