Advertisement

40 ಗ್ರಾಪಂಗಳಿಗೆ “ಗಾಂಧಿ ಗ್ರಾಮ’ಪುರಸ್ಕಾರ

07:00 AM Oct 02, 2017 | Harsha Rao |

ಬಾಗಲಕೋಟೆ: ರಾಜ್ಯದಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಮತ್ತು ಸರ್ಕಾರದ ಇತರ ಯೋಜನೆ ಅನುಷ್ಠಾನಕ್ಕೆ ರಾಜ್ಯಾದ್ಯಂತ 40 ಗ್ರಾಮಗಳು “ಗಾಂಧಿ ಗ್ರಾಮ’ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಸೋಮವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಾಂಧಿ  ಗ್ರಾಮ ಪುರಸ್ಕಾರ ನೀಡಲಿದ್ದಾರೆ. ರಾಜ್ಯದ 7 ಜಿಲ್ಲೆಯ 40 ತಾಲೂಕುಗಳಲ್ಲಿ 40 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿ ಸರ್ಕಾರ ಆಯ್ಕೆ ಮಾಡಿದೆ.

Advertisement

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೋಟಿಕಲ್ಲ ಗ್ರಾಮ, ಬಾಗಲಕೋಟೆ ತಾಲೂಕಿನ ಸುತಗುಂಡಾರ, ಬೀಳಗಿ ತಾಲೂಕಿನ ಬಾಡಗಂಡಿ, ಹುನಗುಂದ ತಾಲೂಕಿನ ಕೂಡಲಸಂಗಮ, ಜಮಖಂಡಿ ತಾಲೂಕಿನ ಹುಲ್ಯಾಳ ಮತ್ತು ಮುಧೋಳ ತಾಲೂಕಿನ ಕುಳಲಿ. ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಉತ್ತರ ತಾಲೂಕಿನ ದೊಡ್ಡಜಾಲ, ಬೆಂಗಳೂರು ದಕ್ಷಿಣ ತಾಲೂಕಿನ ಅಜ್ಜನಹಳ್ಳಿ, ಬೆಂಗಳೂರು ಪೂರ್ವ ತಾಲೂಕಿನ ದೊಡ್ಡಗುಬ್ಬಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟಿ, ಹೊಸಕೋಟಿ ತಾಲೂಕಿನ ಕಂಬಳಿಪುರ, ನೆಲಮಂಗಲ ತಾಲೂಕಿನ ಬೂದಿಹಾಳ, ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಗ್ಗಲಹಳ್ಳಿ, ಮಾಗಡಿ ತಾಲೂಕಿನ ಬಿಸ್ಕೋರು, ಚನ್ನಪಟ್ಟಣ ತಾಲೂಕಿನ ಮುದುಂಗೆರೆ, ರಾಮನಗರ ತಾಲೂಕಿನ ಕೂಟಗಲ್‌, ಬೆಳಗಾವಿ ಜಿಲ್ಲೆಯ ಅಥಣಿ
ತಾಲೂಕಿನ ಶಿರಗುಪ್ಪಿ, ಬೈಲಹೊಂಗಲ ತಾಲೂಕಿನ ಅನಿಗೋಳ, ಬೆಳಗಾವಿ ತಾಲೂಕಿನ ಮಾರಿಹಾಳ,
ಚಿಕ್ಕೋಡಿ ತಾಲೂಕಿನ ಶಮನೇವಾಡಿ, ಗೋಕಾಕ ತಾಲೂಕಿನ ಯಾದವಾಡ, ಹುಕ್ಕೇರಿ ತಾಲೂಕಿನ ಹತ್ತರಗಿ, ಖಾನಾಪುರ ತಾಲೂಕಿನ ನಾಗುರ್ಡಾ, ರಾಯಬಾಗ ತಾಲೂಕಿನ ಕೋಳಿಗುಡ್ಡ, ರಾಮದುರ್ಗ ತಾಲೂಕಿನ ಕಿತ್ತೂರ, ಸವದತ್ತಿ ತಾಲೂಕಿನ ಉಗರಗೋಳ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬ್ಯಾಸಿಗದೇರಿ, ಹೊಸಪೇಟೆ ತಾಲೂಕಿನ ಹೊಸೂರು, ಕೂಡ್ಲಗಿ ತಾಲೂಕಿನ ಶಿವಪುರ, ಸಂಡೂರು ತಾಲೂಕಿನ ದೇವಗಿರಿ, ಸಿರುಗುಪ್ಪ ತಾಲೂಕಿನ ಕುಡದರಹಾಳ್‌, ಹಾಗೂ ಬೀದರ ಜಿಲ್ಲೆ ಔರಾದ ತಾಲೂಕಿನ ಚಿಂತಾಕಿ, ಬಸವಕಲ್ಯಾಣ ತಾಲೂಕಿನ ಕಲಕೋರಾ, ಭಾಲ್ಕಿ ತಾಲೂಕಿನ ಡೋಣಗಾಪುರ, ಬೀದರ ತಾಲೂಕಿನ ಔರಾದ (ಎಸ್‌), ಹುಮನಾಬಾದ ತಾಲೂಕಿನ ದುಬಲಗುಡಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಬಾಗಲಕೋಟೆ ಜಿಲ್ಲೆಯ 6 ಗ್ರಾಮ ಪಂಚಾಯಿತಿಗಳು ಗಾಂ ಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ.

– ವಿಠuಲ ಮೂಲಿಮನಿ

Advertisement

Udayavani is now on Telegram. Click here to join our channel and stay updated with the latest news.

Next