Advertisement

ಮತ ಮಾರಾಟಕ್ಕಿಲ್ಲ ಎಂದು ಜನಸಂಕಲ್ಪ ಮಾಡಬೇಕು :ಗಣಪತಿ ಸಚ್ಚಿದಾನಂದ ಶ್ರೀ

02:20 PM May 29, 2022 | Team Udayavani |

ಮೈಸೂರು: ನಮ್ಮ ಮತ ಮಾರಾಟಕ್ಕಿಲ್ಲ ಎಂದು ಜನರೆಲ್ಲ ಸಂಕಲ್ಪ ಮಾಡಬೇಕೆಂದು ‌ಶ್ರೀ ಗಣಪತಿ ಸಚ್ಚಿದಾನಂದ ‌ಸ್ವಾಮೀಜಿಯವರು ನುಡಿದರು.

Advertisement

ಶ್ರೀಗಳ 80ನೇ ಜನ್ಮದಿನೋತ್ಸವದ ಭಾನುವಾರದ ಕಾರ್ಯಕ್ರಮದಲ್ಲಿ ಅನುಗ್ರಹ ಭಾಷಣ ಮಾಡಿದ ಶ್ರೀಗಳು, ನಮ್ಮ ದೇಶಕ್ಕೆ ಒಳ್ಳೆಯದಾಗಬೇಕಾದರೆ ಇಂದೇ ನಾವೆಲ್ಲ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

ನಮ್ಮ ವೋಟನ್ನು ಮಾರುವುದಿಲ್ಲ,ಇದನ್ನು ಬೇರೆಯವರಿಗೂ ಹೇಳುತ್ತೇವೆ ಎಂಬ ಸಂಕಲ್ಪವನ್ನು ಸ್ವಾಮೀಜಿಯವರು ನಾದಮಂಟಪದಲ್ಲಿ ಸೇರಿದ್ದ ಎಲ್ಲರಿಂದ ಮಾಡಿಸಿದುದು ವಿಶೇಷವಾಗಿತ್ತು.

ನಾವು ಜನರೇ ಸರಿಯಿಲ್ಲ,ನಾವೇ ಲಂಚಕೊಡುವುದನ್ನು ಅಭ್ಯಾಸ ಮಾಡಿಸುತ್ತೇವೆ. ನಮ್ಮಿಂದ ಹತ್ತು ಸಾವಿರ ಪಡೆದವರು ನಂತರ ಇಪ್ಪತ್ತು ಸಾವಿರ ತೆಗೆದುಕೊಳ್ಳುತ್ತಾರೆ.ಅದರ ಹೊರೆ ನಮ್ಮ ಮೇಲೆಯೇ ಬೀಳುತ್ತದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಎಲ್ಲರಿಗೂ ತಿಳಿಹೇಳಿದರು.

ನಮ್ಮ ಹಾಗೂ ಸಮಾಜವನ್ನು ಉದ್ದಾರ ಮಾಡುವಂತಹ ಶಕ್ತಿಯುಳ್ಳವರನ್ನು ಆರಿಸಿ, ದೇಶವನ್ನು ನಾಶ ಮಾಡುವವರು ಜನರೇನೆ ಹಾಗಾಗಿ ಈಗಿನಿಂದಲೇ ಎಚ್ಚೆತ್ತಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದರು.

Advertisement

ನಮ್ಮಲ್ಲಿರುವ ಕಾಮಕ್ರೋದಗಳನ್ನು ಹೊಡೆದು ಓಡಿಸಬೇಕು.ಅಜ್ಞಾನದಲ್ಲಿರುವವರು ಗುರು ಮುಖೇನ ಜ್ಞಾನ ಪಡೆದುಕೊಳ್ಳಬಹುದು.ಶ್ರೀ ದತ್ತಾತ್ರೇಯ ಎಲ್ಲಾರೀತಿಯಲ್ಲೂ ಜನರನ್ನು ಕಾಪಾಡುತ್ತಾನೆ ಎಂದು ತಿಳಿಸಿದರು.

ನನ್ನ ಜನ್ಮದಿನೋತ್ಸವದ ಈ ಸಂದರ್ಭದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಶ್ರೀಗಳು ಹೇಳಿದರು.

ಆಖಿಲ ಕರ್ನಾಟಕ ಬ್ರಾಹ್ಮಣ ಸಭಾ,ವಿಪ್ರ ಜಗೃತ ವೇದಿಕೆ,ಹೊಯ್ಸಳ ಕರ್ನಾಟಕ ಸಂಘ ಸೇರಿದಂತೆ ಹಲವಾರು ಬ್ರಾಹ್ಮಣ ಸಮಾಜದ ಸದಸ್ಯರು ಗಣಪತಿ ಶ್ರೀಗಳಿಗೆ ಶುಭಕಾಮನೆ ಸಲ್ಲಿಸಿದರು.

ಇದೇ ವೇಳೆ ಪೌರಕಾರ್ಮಿಕ ಸಂಘದವರು, ನಾದ ಮಂಟಪಕ್ಕೆ ಸೇವೆ‌ಸಲ್ಲಿಸಿದವರು ಮತ್ತಿತರರಿಗೆ ವಸ್ತ್ರ ಪ್ರಸಾದ ನೀಡಲಾಯಿತು. ಇದೇ ವೇಳೆ ‌ಶ್ರೀಯವರ ಮಾತೃಶ್ರೀ ಯವರ ಊರು ಸೋಗಾಲದಿಂದ ಬಹಳಷ್ಟು ಮಂದಿ ಸ್ವಾಮೀಜಿಯವರ ದರುಶನ ಮಾಡಿದರು. ಇಂದು ಬೆಳಗಿನಿಂದ ಸ್ವಾಮೀಜಿಯವರ ದರ್ಶನ ಮಾಡಲು ಬಂದ ಪ್ರತಿಯೊಬ್ಬರಿಗೂ ವಸ್ತ್ರ ಪ್ರಸಾದವನ್ನು ಸ್ವಾಮೀಜಿಯವರು ನೀಡಿದುದು ವಿಶೇಷ.

ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ‌ಉಪಸ್ಥಿತರಿದ್ದರು.ಶ್ರೀ‌ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೇ‌ ಜನ್ಮ ದಿನೋತ್ಸವದ ಪ್ರಯುಕ್ತ ಇಂದು ಬೆಳಗ್ಗೆ ಶ್ರೀ ಚಕ್ರಪೂಜೆ,ಮಹಾ‌ ಸೌರಹೋಮ ನೆರವೇರಿಸಲಾಯಿತು.

ನಂತರ ಶ್ರೀಗಳಿಗೆ ಪಾದಪೂಜೆ ಹಾಗೂ ಭಕ್ತಾದಿಗಳಿಗೆ ದತ್ತಪಾದುಕಾ ದರ್ಶನ ಮಾಡಲಾಯಿತು.ವಿಧಾನಸಭಾ ಅಧ್ಯಕ್ಷರಾದ ‌ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಾನುವಾರ ನಾದಮಂಟಪಕ್ಕೆ ಆಗಮಿಸಿ ಶ್ರೀಗಳಿಗೆ ಜನ್ಮದಿನದ ಶುಭ ಕೋರಿದರು.ಇದೇ ವೇಳೆ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ರಾಮಪ್ರಸಾದ್,ಅಕ್ಬರ್ ಖಾನ್ ಮತ್ತಿತರರು ಶ್ರೀಗಳಿಗೆ ಶುಭಕಾಮನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next