Advertisement

ಗೇಮ್ಸ್‌ ಟೇಬಲ್‌ ಟೆನಿಸ್‌: ಭಾರತ ಭರ್ಜರಿ ಆರಂಭ

11:00 PM Jul 29, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಗೇಮ್ಸ್‌ ಟೇಬಲ್‌ ಟೆನಿಸ್‌ನಲ್ಲಿ ಭಾರತದ ವನಿತಾ ಮತ್ತು ಪುರುಷರ ತಂಡಗಳೆರಡೂ ಭರ್ಜರಿ ಆರಂಭ ಪಡೆದಿವೆ. ವನಿತೆಯರ ಲೀಗ್‌ ಹಂತದ ತಂಡ ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್‌ ಭಾರತ 2ನೇ ವಿಭಾಗದ ಮೊದಲ ಮುಖಾಮುಖಿಯಲ್ಲಿ ದಕ್ಷಿಣ ಆಫ್ರಿಕಾವನ್ನು 3-0 ಅಂತರದಿಂದ ಕೆಡವಿತು. ಬಳಿಕ ಫಿಜಿ ವಿರುದ್ಧ ಹೋರಾಟ ನಡೆಸಲಿದೆ.

Advertisement

ಡಬಲ್ಸ್‌ ಪಂದ್ಯದಲ್ಲಿ ಶ್ರೀಜಾ ಅಕುಲಾ-ರೀತ್‌ ಟೆನ್ನಿಸನ್‌ ಸೇರಿಕೊಂಡು ಲೈಲಾ ಎಡ್ವರ್ಡ್ಸ್‌-ದಾನಿಶಾ ಪಟೇಲ್‌ ವಿರುದ್ಧ 11-7, 11-7, 11-5 ಅಂತರದ ಗೆಲುವು ಸಾಧಿಸಿತು.

ಸಿಂಗಲ್ಸ್‌ನಲ್ಲಿ ಮಣಿಕಾ ಬಾತ್ರಾ 11-5, 11-3, 11-2ರಿಂದ ಮುಶ್ಫಿಕ್‌ ಕಲಾಂ ಅವರಿಗೆ ಸೋಲುಣಿಸಿದರು. ಬಳಿಕ ದಾನಿಶಾ ಪಟೇಲ್‌ ವಿರುದ್ಧ ಶ್ರೀಜಾ ಅಕುಲ್‌ ಕೂಡ 3-0 ಜಯ ಸಾಧಿಸಿದರು (11-5, 11-3, 11-6).

ಪುರುಷರಿಗೆ 3-0 ಜಯ
ಪುರುಷರ ಗ್ರೂಪ್‌ 3 ಸ್ಪರ್ಧೆಯಲ್ಲಿ ಭಾರತ 3-0 ಅಂತರದಿಂದ ಬಾರ್ಬಡಾಸ್‌ ತಂಡವನ್ನು ಮಗುಚಿತು. ಡಬಲ್ಸ್‌ನಲ್ಲಿ ಹರ್ಮೀತ್‌ ದೇಸಾಯಿ-ಜಿ. ಸಥಿಯನ್‌ ಸೇರಿಕೊಂಡು ಕೆವಿನ್‌ ಫಾರ್ಲಿ-ಟೈಯರ್ ನೈಟ್‌ ಅವರನ್ನು 11-9, 11-9, 11-4 ಅಂತರದಿಂದ ಪರಾಭವಗೊಳಿಸಿದರು. ಬಳಿಕ ಅಚಂತ ಶರತ್‌ ಕಮಲ್‌ ಮತ್ತು ಜಿ. ಸಥಿಯನ್‌ ಅವರು ಕ್ರಮವಾಗಿ ರಮೋನ್‌ ಮ್ಯಾಕ್ಸ್‌ವೆಲ್‌ ಮತ್ತು ಟೈಯರ್ ನೈಟ್‌ ಅವರನ್ನು 3-0 ಅಂತರದಿಂದ ಕೆಡವಿದರು.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next