Advertisement

Small break ಬಳಿಕ ಸಾಗಲಿದೆ ಸಿಂಧು ಆಟ

12:21 AM Aug 03, 2024 | Team Udayavani |

ಪ್ಯಾರಿಸ್‌: ಪಿ.ವಿ. ಸಿಂಧು ಅವರ ಹ್ಯಾಟ್ರಿಕ್‌ ಒಲಿಂಪಿಕ್‌ ಪದಕದ ಕನಸು ಗುರುವಾರ ರಾತ್ರಿ ಚೀನದ ಹೆ ಬಿಂಗ್‌ ಜಿಯಾವೊ ಅವರಿಂದ ನುಚ್ಚುನೂರಾಗಿದೆ. 2016ರ ರಿಯೋ ಗೇಮ್ಸ್‌ನಲ್ಲಿ ಬೆಳ್ಳಿ, 2020ರ ಟೋಕಿಯೊ ಕೂಟದಲ್ಲಿ ಕಂಚಿನ ಪದಕ ಜಯಿಸಿದ್ದ ಸಿಂಧು, ಪ್ಯಾರಿಸ್‌ನಿಂದ ಬರಿಗೈಯಲ್ಲಿ ಮರಳಬೇಕಾದ ಸಂಕಟಕ್ಕೆ ಸಿಲುಕಿದ್ದಾರೆ. ಸಹಜವಾಗಿಯೇ ಮುಂದೇನು ಎಂಬ ಪ್ರಶ್ನೆ ಕಾಡಲಾರಂಭಿಸಿದೆ.

Advertisement

ನಿರ್ಗಮನದ ಆಘಾತದ ನಡುವೆಯೇ ಮಾಧ್ಯಮದವರೊಂದಿಗೆ ಮಾತಾಡಿದ ಪಿ.ವಿ. ಸಿಂಧು, “ನನ್ನ ಭವಿಷ್ಯದ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಂದಿದ್ದೇನೆ. ಸಣ್ಣದೊಂದು ಬ್ರೇಕ್‌ ಬಳಿಕ ಮತ್ತೆ ಅಂಕಣಕ್ಕೆ ಇಳಿಯಲಿದ್ದೇನೆ. ನನ್ನ ದೇಹ, ಇದಕ್ಕೂ ಮಿಗಿಲಾಗಿ ನನ್ನ ಮನಸ್ಸಿಗೆ ವಿಶ್ರಾಂತಿಯ ಅಗತ್ಯವಿದೆ. ಇದೊಂದು ಅತ್ಯಂತ ಆಘಾತಕಾರಿ ಸೋಲು. ಇದನ್ನು ಸ್ವೀಕರಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ ಬದುಕು ಮುಂದುವರಿಯಲೇ ಬೇಕು’ ಎಂಬುದಾಗಿ ಸಿಂಧು ಹೇಳಿದರು.29 ವರ್ಷದ ಸಿಂಧು ಅವರಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಉದ್ಘಾಟನೆಯ ವೇಳೆ ಭಾರತದ ತ್ರಿವರ್ಣ ಧ್ವಜಧಾರಿಯ ಗೌರವ ಲಭಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next