Advertisement

‘ಗೇಮ್ ಓವರ್’, ‘ಗೇಮ್ ಸ್ಟಾರ್ಟ್’ಮದುವೆಯಲ್ಲಿ ಗಮನ ಸೆಳೆದ ಬರಹ !!

05:58 PM Dec 01, 2021 | Team Udayavani |

ಮುದ್ದೇಬಿಹಾಳ: ಕೆಲವೊಮ್ಮೆ ಮದುವೆಗಳಲ್ಲಿ ವಿಶೇಷ ಘಟನಾವಳಿಗಳು ನಡೆದು ಮದುವೆಯ ನೆನಪನ್ನು ಶಾಸ್ವತವಾಗಿಸುವುದರ ಜೊತೆಗೆ ಜೀವನದ ಪಾಠವನ್ನು ಮುಂಚಿತವಾಗಿಯೇ ಕಲಿಸಿಕೊಡುತ್ತವೆ. ಗಂಡು ಅಥವಾ ಹೆಣ್ಣಿನ ಕಡೆಯ ಸ್ನೇಹಿತರ ಬಳಗ ಹಾಸ್ಯಕ್ಕಾಗಿ ನಡೆಸುವ ಪ್ರಯತ್ನಗಳೂ ಸಹಿತ ಮುದ ನೀಡುವುದರ ಜೊತೆಗೆ ಜೀವನದ ಸತ್ಯ ತಿಳಿಸಿಕೊಡುತ್ತವೆ ಅನ್ನುವುದಕ್ಕೆ ಒಂದು ಜ್ವಲಂತ ಉದಾಹರಣೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಹಳ್ಳೂರು ಗ್ರಾಮದಲ್ಲಿ ಬುಧವಾರ ನಡೆದಿದೆ.

Advertisement

ಗ್ರಾಮದ ಶ್ರೀ ಶಂಕರಾನಂದ ಅವಧೂತರ ಮಂಗಲ ಕಾರ್ಯಾಲಯದಲ್ಲಿ ಕಸ್ತೂರಿಬಾಯಿ ಮತ್ತು ಸಂಗಪ್ಪ ಸಂಗಮ ದಂಪತಿಗಳ ಪುತ್ರರಾದ ಕೆಎಸ್ಆರ್ ಟಿಸಿ ನೌಕರರಾಗಿರುವ ಸಂತೋಷಕುಮಾರ ಜೊತೆ ಅರ್ಚನಾ ಮತ್ತು ಗುರುಬಸಪ್ಪ ಜೊತೆ ಮಹಾದೇವಿ (ಕವಿತಾ) ಅವರ ವಿವಾಹವನ್ನು ಬುಧವಾರ ಏರ್ಪಡಿಸಲಾಗಿತ್ತು.

ಮಧ್ಯಾಹ್ನ ವರರು ವಧುಗಳಿಗೆ ಮಾಂಗಲ್ಯ ಧಾರಣೆ ಮಾಡಿ ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಕೆಲ ಗೆಳೆಯರು ಸೇರಿಕೊಂಡು ಕಾಮಿಡಿ ಸೀನ್ ಕ್ರಿಯೇಟ್ ಮಾಡಲು ಮತ್ತು ಈ ಮದುವೆಯನ್ನು ಅವಿಸ್ಮರಣೀಯವಾಗಿಸಲು ಹೊಸದೇನನ್ನಾದರೂ ಮಾಡಬೇಕೆಂದು ತೀರ್ಮಾನಿಸಿ ಗೇಮ್ ಓವರ್ ಎಂದು ಬರೆದ ಸ್ಲೇಟನ್ನು ಗಂಡಿನ ಕೈಯಲ್ಲಿ, ಗೇಮ್ ಸ್ಟಾರ್ಟ್ ಎಂದು ಬರೆದ ಸ್ಲೇಟನ್ನು ಹೆಣ್ಣಿನ ಕೈಯಲ್ಲಿ ನೀಡಿ ಫೋಟೊ ತೆಗೆಸಿಕೊಂಡರು.

ಮದುವೆಯಾದ ಮೇಲೆ ಗಂಡಿನ ಆಟ ಬಂದ್, ಹೆಂಡತಿಯ ಆಟ ಶುರು ಎನ್ನುವ ಅರ್ಥದಲ್ಲಿ ಆ ಸ್ಲೇಟುಗಳನ್ನು ಅವರ ಕೈಯಲ್ಲಿ ಕೊಟ್ಟಿದ್ದರು. ಮೇಲ್ನೋಟಕ್ಕೆ ಇದು ಹಾಸ್ಯ ಭರಿತ ಎನ್ನಿಸಿದರೂ ಒಳಹೊಕ್ಕು ನೋಡಿದಾಗ ಇದರ ಮರ್ಮ ಹಲವರಿಗೆ ಹಲವು ರೀತಿ ಚರ್ಚೆ ನಡೆಸಲು ದಾರಿ ಮಾಡಿಕೊಟ್ಟಂತಾಗಿತ್ತು.

Advertisement

ಮದುವೆಯಲ್ಲಿ ಪಾಲ್ಗೊಂಡಿದ್ದ ಸಂತೋಷಕುಮಾರ ಮತ್ತು ಗುರುಬಸಪ್ಪ ಅವರ ಸ್ನೇಹಿತರಿಗೆ ಇದೊಂದು ಹಾಸ್ಯದ ಸನ್ನಿವೇಶವಾಗಿದ್ದರೂ ಅಲ್ಲಿದ್ದ ಹಿರಿಯರಿಗೆ, ಮದುವೆ ನಂತರದ ಜೀವನದ ಅನುಭವ ಇದ್ದವರಿಗೆ ಮಾತ್ರ ಇದು ಜೀವನದ ನಿಜವಾದ ಅರ್ಥ ತಿಳಿಸಿಕೊಡುವಂಥದ್ದು ಎಂದು ತಮ್ಮೊಳಗೆ ಮುಸಿಮುಸಿ ನಗು ಬೀರುವ ಮೂಲಕ ಮದುವೆಯ ನಂತರದ ಗಂಡು, ಹೆಣ್ಣಿನ ದಾಂಪತ್ಯ ಜೀವನದ ಬದಲಾವಣೆಗಳನ್ನು, ದೃಷ್ಟಿಕೋನಗಳನ್ನು ಈ ರೀತಿಯಾದ ಮುಂದಾಲೋಚನೆಯ ಬರಹಗಳಿಂದ ಮುನ್ನೆಚ್ಚರಿಕೆ ನೀಡಿದಂತಾಗಿದೆ ಎಂದು ತಮ್ಮೊಳಗೆ ಮಾತಾಡಿಕೊಂಡದ್ದು ಕಿವಿಗೆ ಬಿತ್ತು. ಆದರೆ ಗೆಳೆಯರ ಈ ಚಿಂತನೆಯು ಮದುವೆಯ ಸಂಭ್ರಮವನ್ನು ಹಾಸ್ಯ ಮಿಶ್ರಿತವಾಗಿ ಹೆಚ್ಚಿಸಿದ್ದು ಮಾತ್ರ ವಿಶೇಷವಾಗಿತ್ತು.

ಈ ಮದುವೆಗೆ ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ, ಮಾಜಿ ಸಚಿವ ಸಿ.ಎಸ್.ನಾಡಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ, ಗಣ್ಯರದ ಶಿವಶಂಕರಗೌಡ ಹಿರೇಗೌಡರ, ನೀಲಕಂಠರಾಯಗೌಡ ನಾಡಗೌಡ ಬಸರಕೋಡ, ಹೇಮರಡ್ಡಿ ಮೇಟಿ, ಎಂ.ಎಸ್.ಪಾಟೀಲ ನಾಲತವಾಡ, ಶಾಂತಗೌಡ ಪಾಟೀಲ ನಡಹಳ್ಳಿ, ಗುರು ತಾರನಾಳ, ಶ್ರೀಶೈಲ ಸೂಳಿಭಾವಿ, ನಿಂಗಪ್ಪಗೌಡ ಬಪ್ಪರಗಿ, ಶ್ರೀಧರ ಕಲ್ಲೂರ, ಗಿರೀಶಗೌಡ ಪಾಟೀಲ ನಾಲತವಾಡ, ಸಿಪಿಐ ಆನಂದ ವಾಘ್ಮೋಡೆ, ತೆರಿಗೆ ಸಲಹೆಗಾರ ರುದ್ರಗೌಡ ಪಾಟೀಲ ಅಗಸಬಾಳ ಸೇರಿ ಹಲವರು ಆಗಮಿಸಿ ಶುಭಕೋರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next