ಉಡುಪಿ: ಮೂಡನಿಡಂಬೂರು ಗ್ರಾಮದ ಕರಾವಳಿ ಜಂಕ್ಷನ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟವಾಡುತ್ತಿದ್ದ ಕಾಡಬೆಟ್ಟುವಿನ ಕಿರಣ್, ಕುಂದಾಪುರದ ರಮೇಶ್, ಬ್ರಹ್ಮಾವರದ ಪ್ರಕಾಶ್ ಶೆಟ್ಟಿ, 76 ಬಡಗಬೆಟ್ಟುವಿನ ಮಹಮ್ಮದ್ ಇಮ್ರಾನ್, ಕಟಪಾಡಿಯ ಸುನಿಲ್ ಪೂಜಾರಿಯನ್ನು ಉಡುಪಿ ನಗರ ಠಾಣೆಯ ಪಿಎಸ್‌ಐ ರವಿ ಬಿ.ಕೆ. ಅವರ ತಂಡ ವಶಕ್ಕೆ ಪಡೆದುಕೊಂಡಿದೆ. ಅವರು ಆಟಕ್ಕೆ ಬಳಸಿದ್ದ 5,600 ರೂ. ನಗದು ಹಾಗೂ ಇತರ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement