Advertisement

ಅಂತರಾಷ್ಟ್ರೀಯ ಖ್ಯಾತಿಯ ಗಮಕಿ ಹೊಸಬಾಳೆ ಸೀತಾರಾಮರಾವ್ ಇನ್ನಿಲ್ಲ

01:13 PM Mar 11, 2022 | Team Udayavani |

ಸಾಗರ: ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಅಂತರ್ರಾಷ್ಟ್ರೀಯ ಖ್ಯಾತಿಯ ಗಮಕಿ, ಸಾಗರದ ಮಲೆನಾಡು ಗಮಕ ಸಂಘದ ಅಧ್ಯಕ್ಷ ಹೊಸಬಾಳೆ ಸೀತಾರಾಮರಾವ್(93) ವಯೋಸಹಜ ಕಾರಣಗಳಿಂದ ಗುರುವಾರ ನಗರದಲ್ಲಿ ನಿಧನ ಹೊಂದಿದ್ದಾರೆ.

Advertisement

ಮೃತರು ಖ್ಯಾತ ನೇತ್ರತಜ್ಞ, ಸಾಹಿತಿ ಪುತ್ರ ಡಾ| ಎಚ್.ಎಸ್.ಮೋಹನ್, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಗಮಕ ಕಲೆಯನ್ನು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದ ಖ್ಯಾತಿ ಇವರದು. 2000ದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ1993ರಲ್ಲಿ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ದೂರದರ್ಶನ ಚಂದನವಾಹಿನಿ ಪ್ರಶಸ್ತಿಗಳು ಇವರ ಸಾಧನೆಗೆ ಲಭಿಸಿವೆ.

ನಿಸರಾಣಿಯಲ್ಲಿ ಗಮಕ ಶಾಲೆಯನ್ನು ಪ್ರಾರಂಭಿಸಿ ಹೊಸ ತಲೆಮಾರಿನ ಅನೇಕರಿಗೆ ಗಮಕ ವಾಚನ ಕಲೆಯನ್ನು ಭೋಧಿಸಿದ್ದ ಸೀತಾರಾಮರಾವ್ ರಾಜ್ಯಮಟ್ಟದ ಗಮಕ ಸಮ್ಮೇಳನದ ಅಧ್ಯಕ್ಷತೆಯನ್ನು ಎರಡು ಬಾರಿ ವಹಿಸಿದ್ದರು. 25 ವರ್ಷಗಳ ಕಾಲ ಸಾಗರದ ಗಮಕ ಕಲಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ:ಹೆಂಡತಿಯನ್ನು ಕೊಂದು ತಾನೂ ನೇಣು ಹಾಕಿಕೊಂಡ ಪತಿ!

Advertisement

ನಗರದ ಮಾರಿಕಾಂಬಾ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಶುಕ್ರವಾರ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next