ಆದರೆ, ಈ ಬಾರಿ ಅಕ್ಟೋಬರ್‌ನಿಂದ ನ.12ರವರೆಗೆ 88.6 ಮಿ.ಮೀ. ಮಳೆ ಸುರಿದಿದೆ.
Advertisement
ರಾಜ್ಯದಲ್ಲಿ ಮುಂಗಾರು ಸ್ವಲ್ಪಮಟ್ಟಿಗೆ ಚುರುಕುಗೊಂಡಿತ್ತು. ಆದರೆ, ಹಿಂಗಾರು ಮಳೆ ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿಸೃಷ್ಟಿಯಾಗಿರುವ ಚಂಡಮಾರುತದಿಂದ ರಾಜ್ಯದಲ್ಲಿ ಸ್ವಲ್ಪಮಟ್ಟಿಗೆ ಮಳೆಯಾಗಬಹುದು ಎನ್ನಲಾಗಿದೆ. ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ ಮಳೆಯಾಗಬಹುದು ಅಥವಾ ಮೋಡ ಮುಸುಕಿದ ವಾತಾವರಣ ಕಂಡು ಬಂದು, ಚಳಿ ಕಡಿಮೆಯಾಗಬಹುದು. ಸದ್ಯ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29-30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 17-18 ಸೆಲ್ಸಿಯಸ್‌ನಷ್ಟಿದೆ. ಹಗಲಿನಲ್ಲಿ ಉಷ್ಣಾಂಶ ಹೆಚ್ಚಾಗಿದ್ದರೆ, ಸಂಜೆ ಹಾಗೂ ರಾತ್ರಿ ವೇಳೆಗೆ ಕೊರೆಯುವ ಚಳಿಯ ಅನುಭವವಾಗುತ್ತಿದೆ. ಶುಭ್ರ ಆಕಾಶವಿರುವುದರಿಂದ ತಾಪಮಾನ ಇಳಿಯುತ್ತದೆ. ಮೋಡ ಬಂದರೆ ತಾಪಮಾನ ಮೇಲಕ್ಕೇರುತ್ತದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.