Advertisement
ಜಿಲ್ಲೆಯಲ್ಲಿ 2019ರಲ್ಲಿ ಸಿಟಿ ಗ್ಯಾಸ್ ವಿತರಣೆ ಗುತ್ತಿಗೆಯನ್ನು ಗೈಲ್ ಗ್ಯಾಸ್‌ಗೆ ನೀಡಲಾಗಿದ್ದು ವಿತರಣ ಜಾಲ ಹಾಕುವ ಕಾಮಗಾರಿ ನಿಧಾನವಾಗಿ ಸಾಗುತ್ತಿದೆ. ಮುಖ್ಯವಾಗಿ ಮನೆಗಳಿಗೆ ಪೈಪ್‌ಲೈನ್ ಮೂಲಕ ಪೂರೈಕೆ, ವಾಣಿಜ್ಯ ಮತ್ತು ಕೈಗಾರಿಕೆ ಘಟಕಗಳಿಗೆ ವಿತರಣೆ ಹಾಗೂ ಸಿಎನ್‌ಜಿ ವಾಹನಗಳಿಗೆ ದೊರಕುವಂತಾಗಲು ಸ್ಟೇಷನ್‌ಗಳ ಮೂಲಕ ವಿತರಣೆ ಇದರ ಮುಖ್ಯ ಭಾಗವಾಗಿದೆ.ಈಗಾಗಲೇ ನೀಡುತ್ತಿರುವ ಸಿಎನ್‌ಜಿ ಅನಿಲ ಹೊರತು ಪಡಿಸಿ, ಗೈಲ್‌ಗ್ಯಾಸ್ ಇನ್ನೂ 40 ಕೈಗಾರಿಕೆ ಘಟಕಗಳು, 124 ವಾಣಿಜ್ಯ ಸಂಸ್ಥೆಗಳ (ಹೊಟೇಲ್, ರೆಸ್ಟೋರೆಂಟ್ ಸಹಿತ) ಜತೆಗೆ ಪಿಎನ್‌ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಪೂರೈಕೆ ಕುರಿತು ಒಪ್ಪಂದ ಮಾಡಿಕೊಂಡಿದೆ. 1,10,000 ಮಂದಿ ನಾಗರಿಕರು ಮನೆಗಳು, ಫ್ಲ್ಯಾಟ್‌ಗಳು, ಅಪಾರ್ಟ್‌ಮೆಂಟ್‌ಗಳಿಗೆ ಸಿಎನ್‌ಜಿ ಪಡೆಯಲು ನೋಂದಾಯಿಸಿಕೊಂಡಿದ್ದಾರೆ.
ಈಗಿನ ಆರಂಭಿಕ ಹಂತದಲ್ಲಿ ಸುರತ್ಕಲ್, ಮುಕ್ಕ, ಮೂಲ್ಕಿ, ಕುಳಾç, ಬೋಂದೆಲ್ ಪ್ರದೇಶಕ್ಕೆ ಪಿಎನ್‌ಜಿ ಸಂಪರ್ಕ ನೀಡಲು ನಿರ್ಧರಿಸಲಾಗಿದೆ ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ. ಆಸಕ್ತರು ಪಿಎನ್‌ಜಿ ಮಿತ್ರ ಆ್ಯಪ್‌ನ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದೂ ತಿಳಿಸಲಾಗಿದೆ.
Related Articles
Advertisement