Advertisement

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

07:17 PM Sep 18, 2024 | Team Udayavani |

“ಗಗನ ಕುಸುಮ’ ಎಂಬ ಸಿನಿಮಾದ ಹಾಡುಗಳು ಮತ್ತು ಟ್ರೇಲರ್‌ ಬಿಡುಗಡೆಯಾಗಿದೆ. ಆರ್‌.ಶೇಖರನ್‌ ನಿರ್ಮಾಣ ಮಾಡುವ ಜತೆಗೆ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಾಗೇಂದ್ರ ಕುಮಾರ್‌ ಜೈನ್‌ ನಿರ್ದೇಶನ ಈ ಚಿತ್ರಕ್ಕಿದೆ.

Advertisement

“ಸಿನಿಮಾದೊಳಗೊಂದು ಸಿನಿಮಾದ ಕಥೆಯನ್ನು ಹೇಳಲಾಗಿದೆ. ಅಂದು ಚಿತ್ರಗಳ ಕೆಲಸ ನಡೆಯುತ್ತಿದ್ದ ಸಮಯದಲ್ಲಿ ನಿರ್ಮಾಪಕರು, ನಿರ್ದೇಶಕರ ವರ್ತನೆಗಳನ್ನು ನೋಡಿ ಅದನ್ನೇ ಚಿತ್ರಕತೆಗೆ ಬಳಸಲಾಗಿದೆ. ನಾಯಕಿಯ ಧೋರಣೆಗೆ ಬೇಸತ್ತ ನಿರ್ದೇಶಕ ಹಳ್ಳಿಯ ಹುಡುಗಿಯೊಬ್ಬಳನ್ನು ನಾಯಕಿಯಾಗಿ ಮಾಡಿ ಹೇಗೆ ಯಶಸ್ಸು ಗಳಿಸುತ್ತಾನೆ ಎನ್ನುವುದು ಕಥಾ ಹಂದರ’ ಎನ್ನುವುದು ನಿರ್ದೇಶಕರ ಮಾತು.

ತಾರಾಗಣದಲ್ಲಿ ಎಸ್‌.ಕೆ.ಪ್ರಕಾಶ್‌ ಸಣ್ಣಕ್ಕಿ, ದಿನೇಶ್‌ ಗೌಡ, ಕಾವ್ಯಾ ಪ್ರಕಾಶ್‌, ಆಶಾ, ಹರಿಣಿ ನಟರಾಜ್‌ ಮುಂತಾದವರು ಅಭಿನಯಿಸಿದ್ದಾರೆ. ನವೆಂಬರ್‌ನಲ್ಲಿ ಚಿತ್ರತೆರೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next