ಕೆರೆ ತುಂಬಬೇಕಾದರೆ ಹೆಚ್ಚು ನೀರು ಹರಿದುಬರಬೇಕು. ಹರಿದು ಬರಬೇಕಾದರೆ ಆಯಕಟ್ಟಿನ ಪ್ರದೇಶದಲ್ಲಿ ಒಳ್ಳೆಯ ಮಳೆ ಆಗಬೇಕು. ತುಂತುರು ಮಳೆಯನ್ನು ಕಾದ ಭೂಮಿಯೇ ಹೀರಿಕೊಂಡುಬಿಡುತ್ತದೆ. ಇದೇ ರೀತಿ ಗಮನಾರ್ಹ ಸಂಶೋಧನೆ, ಮಾಡಬೇಕಾದರೆ ಅನೇಕ ವರ್ಷಗಳ ಎಡೆಬಿಡದ ಪ್ರಯತ್ನ ಅತ್ಯಗತ್ಯ.
Advertisement
ಇಷ್ಟವಿಲ್ಲದ ಮಗುವಿಗೆ ಹೆಚ್ಚು ಸಿಹಿಕೊಡುದಿನನಿತ್ಯದ ವ್ಯವಹಾರದಲ್ಲಿ ನಾವು ನಮಗೆ ಇಷ್ಟವಿಲ್ಲದ ಕೆಲಸಗಳನ್ನೂ ಮಾಡಬೇಕಾಗುತ್ತದೆ. ಈ ಕೆಲಸಗಳನ್ನು ಬೇರೆಯವರನ್ನು ಮೆಚ್ಚಿಸಲು ನಾವು ಮಾಡುತ್ತೇವೆ. ಇಲ್ಲವೇ ದೊಡ್ಡಸ್ತಿಕೆಯನ್ನು ಮೆರೆಯುವುದಕ್ಕೆ, ಸಮಾನತೆಯನ್ನು ತೋರಿಸಿಕೊಳ್ಳುವುದಕ್ಕೆ. ಇಷ್ಟವಿಲ್ಲದ ಮಗುವಿಗೆ ಹೆಚ್ಚು ಸಿಹಿ ಕೊಡುತ್ತೇವೆ. ಸ್ವಲ್ಪ ಯೋಚಿಸಿದಾಗ ಈ ಮಾತು ಅರ್ಥಪೂರ್ಣವಾಗುತ್ತದೆ.
ಮಗು ಅತ್ತರೆ ತಾಯಿಯ ಗಮನ ಅದರ ಕಡೆಗೆ ಹರಿಯುತ್ತದೆ. ತನ್ನ ಪಾಡಿಗೆ ತಾನು ಇದ್ದರೆ ಅದನ್ನು ತಾಯಿ ಗಮನಿಸುವುದಿಲ್ಲ.ಹೀಗೆಯೇ ನಾವು ಉಪಯೋಗಿಸುವ ಯಾವುದೋ ಯಂತ್ರ (ಕುಕ್ಕರ್, ಮಿಕ್ಸರ್, ಕಂಪ್ಯೂಟರ್, ಕಾರು ಇತ್ಯಾದಿ)ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದರೆ ನಾವು ಗಮನಿಸುವುದಿಲ್ಲ. ಇದನ್ನೇ ಅಳುವ ಮಗುವಿಗೆ ತಾನೇ ತಾಯಿ ಹಾಲು ಕೊಡುವುದು ಎನ್ನಬಹುದು. ಮಾತು ಬೆಳ್ಳಿ ಮೌನ ಬಂಗಾರ
ನೆರೆಹೊರೆ,ಬಂಧುಬಳಗ ಪರಸ್ಪರ ಮಾತನಾಡಿಕೊಳ್ಳುವುದು ಸಹಜ. ಯಾರೊಂದಿಗೆ ಎಷ್ಟು ಮಾತನಾಡಬೇಕು, ಹೇಗೆ ಮಾತನಾಡಬೇಕು ಎನ್ನುವುದನ್ನು ತಿಳಿದುಕೊಂಡಿರಬೇಕು. ಕೆಲವು ಸಂದರ್ಭಗಳಲ್ಲಿ ಒಂದು ಮಾತನಾಡಿದರೆ ಹೆಚ್ಚು ಒಂದು ಮಾತನಾಡಿದರೆ ಕಡಿಮೆ. ಹಿತಮಿತವಾದ ಮಾತು ಸಂಬಂಧಗಳನ್ನು ಬೆಸೆಯುತ್ತದೆ.
Related Articles
Advertisement