ಹೊಸದಿಲ್ಲಿ: ಯಾವುದೇ ಕಾರಣಕ್ಕೂ ಅಡ್ಡದಾರಿ ಹಿಡಿಯಬೇಡಿ. ಪರೀಕ್ಷೆಯಲ್ಲಿ ನಕಲು ಮಾಡುವುದರಿಂದ ಉತ್ತೀರ್ಣರಾಗಬಹುದಷ್ಟೇ. ದೀರ್ಘಾವಧಿಯಲ್ಲಿ ಇದರಿಂದ ಪ್ರಯೋಜನವಾಗದು. ಅತಿಯಾದ ಗ್ಯಾಜೆಟ್ ಬಳಕೆ ಒಳ್ಳೆಯದಲ್ಲ…
– ಇವು ಪ್ರಧಾನಿ ಮೋದಿ ಆರನೇ ಆವೃತ್ತಿಯ “ಪರೀಕ್ಷಾ ಪೇ ಚರ್ಚೆ’ಯಲ್ಲಿ ವಿದ್ಯಾರ್ಥಿಗಳಿಗೆ ಹೇಳಿದ ಕಿವಿಮಾತುಗಳು. ಶುಕ್ರವಾರ ನಡೆದ ಈ ಸಂವಾದದಲ್ಲಿ 38 ಲಕ್ಷ ಮಕ್ಕಳು ಭಾಗಿಯಾಗಿದ್ದರು.
ನಿಮ್ಮ ಸ್ಮಾರ್ಟ್‌ನೆಸ್ ಬಗ್ಗೆ ನಂಬಿಕೆ ಇಡಿ, ಡಿಜಿಟಲ್ ಗ್ಯಾಜೆಟ್‌ಗಳ ಮೇಲಲ್ಲ. ಆನ್‌ಲೈನ್ ಗೇಮ್‌ಗಳು, ಸಾಮಾಜಿಕ ಮಾಧ್ಯಮಗಳ ಗೀಳು ಒಳ್ಳೆಯದಲ್ಲ. ಇದು ನಿಮ್ಮ ಪರೀಕ್ಷಾ ಫಲಿತಾಂಶದ ಮೇಲೆ ಅಡ್ಡ ಪರಿಣಾಮ ಬೀರಬಹುದು ಎಂದರು.
ಪ್ರತೀ ಮನೆಯಲ್ಲಿ “ಟೆಕ್ನಾಲಜಿ ಫ್ರೀ ಝೋನ್’ ಎಂಬುದು ಇರಲಿ. ಇದರಿಂದ ಮಕ್ಕಳಲ್ಲಿ ಉಲ್ಲಾಸಭರಿತ ಜೀವನ ತರಲು ಮತ್ತು ಗ್ಯಾಜೆಟ್‌ಗಳಿಗೆ ದಾಸರಾಗಿರುವ ಮಕ್ಕಳನ್ನು ಅದರ ಹಿಡಿತದಿಂದ ಹೊರತರಲು ಸಾಧ್ಯವಿದೆ ಎಂಬ ಸಲಹೆಯನ್ನು ಮೋದಿ ನೀಡಿದರು.
Related Articles
ಮೋದಿ ಕಿವಿಮಾತುಗಳು
01ಪೋಷಕರು ಸಾಮಾಜಿಕ ಅಂತಸ್ತಿನ ವಿಚಾರವಾಗಿ ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರಬೇಡಿ.
02 ಸತತ ಪರಿಶ್ರಮದ ಮೇಲೆಯೇ ನಂಬಿಕೆ ಇಡಿ, ತಾತ್ಕಾಲಿಕ ಯಶಸ್ಸನ್ನು ನಂಬಲು ಹೋಗಬೇಡಿ.
03 ಜೀವನದುದ್ದಕ್ಕೂ ಪರೀಕ್ಷೆಗಳು ಬರುತ್ತಲೇ ಇರುತ್ತವೆ. ಎಲ್ಲ ಪರೀಕ್ಷೆಗಳಲ್ಲೂ ನಕಲು ಮಾಡಲು ಸಾಧ್ಯವಿಲ್ಲ.
04 ನನ್ನ ಸಂಪುಟವನ್ನು “ಸುಮಾರು’ ಎನ್ನಲಾಗುತ್ತಿತ್ತು. ಆದರೆ ಇದೇ “ಆ್ಯವರೇಜ್’ ಮಂದಿ ಜಗತ್ತಿನಲ್ಲೇ ಭಾರತವನ್ನು ಮಿಂಚುವಂತೆ ಮಾಡಿದ್ದಾರೆ.
05 ಪರೀಕ್ಷೆಗಳು ಜೀವನದ ಅಂತಿಮವಲ್ಲ. ಮನೆಯ ಮಂದಿ ಮಕ್ಕಳ ಮೇಲೆ ಸಾಮಾಜಿಕ ಅಂತಸ್ತಿನ ಮೇಲೆ ಗಮನ ಹರಿಸಬಾರದು.
06 ಪೋಷಕರು ತಮ್ಮನಿರೀಕ್ಷೆಗಳನ್ನು ಮಕ್ಕಳ ಮೇಲೆ ಹೆಚ್ಚು ಹೇರಲು ಹೋಗಬೇಡಿ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆಸಿ.
07 ಇಂದು ಮಕ್ಕಳಲ್ಲಿ ಒತ್ತಡದ ಪ್ರಮಾಣ ಹೆಚ್ಚಾ ಗುತ್ತಿರುವುದಕ್ಕೆ ಈ ಅಂಶ ಕಾರಣ.
08. 10 ಮತ್ತು 12ನೇ ತರಗತಿ ಪರೀಕ್ಷೆ ಅನಂತರ ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಿ. ಅವರಿಂದ ಪ್ರವಾಸದ ಅನುಭವ ಬರೆಸಿ.