Advertisement

ಗಡೇ ದುರ್ಗಮ್ಮ ಭಾವಚಿತ್ರ ದೇವಿ ಪುರಾಣ ಗ್ರಂಥ ಮೆರವಣಿಗ

01:34 PM Dec 01, 2018 | |

ಸುರಪುರ: ನಗರದ ಕಬಾಡಗೇರಾ ಹತ್ತಿರದ ಗಡೇ ದುರ್ಗಮ್ಮ ದೇವಿ ಭಾವಚಿತ್ರ ಮತ್ತು ದೇವಿ ಪುರಾಣ ಗ್ರಂಥದ ಮೆರವಣಿಗೆ
ಶುಕ್ರವಾರ ನಗರದಲ್ಲಿ ಸಂಭ್ರಮದಿಂದ ಜರುಗಿತು. ಪೂರ್ಣ ಕುಂಭ ಕಳಸ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಾರ್ತಿಕೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ನ. 20ರಿಂದ ದೇವಿ ಪುರಾಣ ಆಯೋಜಿಸಲಾಗಿತ್ತು. ಕಳೆದ ಒಂಬತ್ತು ದಿನಗಳಿಂದ ಪ್ರವಚನಕಾರ ರಮೇಶ ಯಾಳಗಿ ಪುರಾಣ ಪ್ರವಚನ ನಡೆಸಿಕೊಟ್ಟಿದ್ದರು. ಶುಕ್ರವಾರ ಪುರಾಣ ಮಂಗಲೋತ್ಸವ ಅಂಗವಾಗಿ ಮೆರವಣಿಗೆ ಏರ್ಪಡಿಸಲಾಗಿತ್ತು.
 
ದೇವಸ್ಥಾನ ಪ್ರಾಂಗಣದಿಂದ ಹೊರಟ ಮೆರವಣಿಗೆ ಅರಮನೆ ಮಾರ್ಗವಾಗಿ ಭಾಜಾ ಭಜಂತ್ರಿ ಡೊಳ್ಳಿನೊಂದಿಗೆ ನಗರದ ವೇಣೂಗೋಪಾಲ ಸ್ವಾಮಿ ದೇವಸ್ಥಾನದವರೆಗೆ ಮೆರವಣಿಗೆ ಜರುಗಿತು. ಮಾರ್ಗದ ಉದ್ದಕ್ಕೂ ಭಕ್ತರು ಮನೆ ಮುಂದೆ ಚಿತ್ತಾರದ ರಂಗೋಲಿ ಬಿಡಿಸಿ ದೇವಿಗೆ ಸ್ವಾಗತ ಕೋರಿದರು.

Advertisement

ನಂತರ ದೇವಸ್ಥಾನದಲ್ಲಿ ಸಮಂಗಲಿಯರಿಗೆ ಉಡಿ ತುಂಬುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ. ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ, ದೇವಿ ಅಷ್ಟೋತ್ತರ ಪಾರಾಯಣ ಹಾಗೂ ನಂತರ ಮಹಾ ಪ್ರಸಾದ ನರವೇರಿತು. 

ದೇವಸ್ಥಾನ ಅರ್ಚಕ ಛತ್ರಪ್ಪ ಪೂಜಾರಿ, ಕಮಿಟಿ ಅಧ್ಯಕ್ಷ ರತ್ನಾಕರ ಜಗತಾಪ, ಹುಲಗಪ್ಪ ಕಲಬುರಗಿ, ರತನಸಿಂಗ ಠಾಕೂರ, ಮರೆಪ್ಪ ಮಾಸ್ಟರ್‌ ದಾಯಿ, ಮಾಳಪ್ಪ ಕವಡಿಮಟ್ಟಿ, ಬಸಪ್ಪ ಗುಡಿಹಾಳ, ಸತ್ಯಪ್ಪ ಗುಡಿಹಾಳ, ಭೀಮಣ್ಣ ಕುಲಕರ್ಣಿ, ಕಾಶಪ್ಪ ದೊರೆ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next