Advertisement

ಗಡ್ಚಿರೋಲಿಯ ಆನೆಗಳ ಮೇಲೂ ರಾಜಕೀಯ ಸವಾರಿ 

12:32 PM May 24, 2022 | Team Udayavani |

ಮುಂಬಯಿ: ಮಹಾರಾಷ್ಟ್ರದಲ್ಲಿ ಎಂವಿಎ ಸರಕಾರ ಆಡಳಿತಕ್ಕೆ ಬಂದ ಬಳಿಕ ಕೇಂದ್ರ ಮತ್ತು ರಾಜ್ಯದ ನಾಯಕರ ನಡುವೆ ವಾದ ವಿವಾದಗಳು ನಡೆಯುತ್ತಾ ಬಂದಿದೆ. ಆದರೆ ಈ ರಾಜಕೀಯ ವಾದ ವಿವಾದವು ಈಗ ವನ್ಯ ಜೀವಿಗಳ ಮೇಲೂ ನಡೆಸುತ್ತಿರುವುದು ಕಂಡುಬಂದಿದೆ.

Advertisement

ಗಡಿcರೋಲಿಯ ಆನೆಗಳನ್ನು ಗುಜರಾತಿಗೆ ಕೊಂಡೊಯ್ಯಲು ಯೋಜಿಸಲಾಗುತ್ತಿದ್ದು, ಆನೆಗಳನ್ನು ಗುಜರಾತ್‌ ಹೋಗಲು ಬಿಡದಂತೆ ಸಚಿವ ವಿಜಯ್‌ ವಾಡೆಟ್ಟಿವಾರ್‌ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಮನವಿ ಮಾಡಿದ್ದಾರೆ. ಅದೇ ರಾಜ್ಯ ಸರಕಾರವು ಇತಿಹಾಸವನ್ನು ಅಳಿಸಿ ಹಾಕಿ, ಆನೆಗಳನ್ನು ಗುಜರಾತಿಗೆ ಮಾರಾಟ ಮಾಡಲು ಯತ್ನಿಸುತ್ತಿದೆ ಎಂದು ಗಡಿcರೋಲಿ ಸಂಸದ ಅಶೋಕ್‌ ನೇತೆ ಅವರು ಆರೋಪಿಸಿದ್ದಾರೆ.

ಮಹಾರಾಷ್ಟ್ರದ ಗಡಿcರೋಲಿ ಜಿಲ್ಲೆಯ ಏಕೈಕ ಆನೆ ಶಿಬಿರವು ಆರು ದಶಕಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ, ಆದರೆ ರಾಜ್ಯ ಸರಕಾರವು ಈ ಇತಿಹಾಸವನ್ನು ಅಳಿಸಿ ಹಾಕುವುದು ಮತ್ತು ಶ್ರೀಮಂತ ಕೈಗಾರಿಕೋದ್ಯಮಿಗಳ ಖಾಸಗಿ ವಸ್ತುಸಂಗ್ರಹಾಲಯದ ಭೂಷಣ ಹೆಚ್ಚಿಸುವ ಪರವಾಗಿ ಕೆಲಸ ಮಾಡುತ್ತಿದೆ. ಈ ಖಾಸಗಿ ಮ್ಯೂಸಿಯಂ ಮಹಾರಾಷ್ಟ್ರದಲ್ಲಿದ್ದರೆ ಒಮ್ಮೆ ಸ್ವೀಕಾರಾರ್ಹ. ಆದರೆ ಗುಜರಾತ್‌ನಂತಹ ರಾಜ್ಯಕ್ಕೆ ಮಹಾರಾಷ್ಟ್ರದಿಂದ ಆನೆಗಳನ್ನು ಕಳುಹಿಸುವ ಮೂಲಕ ರಾಜ್ಯ ಸರಕಾರಕ್ಕೆ ಏನು ಸಿಗುತ್ತದೆ ಎಂದು ನಿಖರವಾಗಿ ತಿಳಿಸಬಹುದೆ ಎಂದು ಹೇಳಿದ್ದಾರೆ.

ರಾಜ್ಯದ ಅತಿ ದೊಡ್ಡ ಅರಣ್ಯ ಗಡಿcರೋಲಿ ಜಿಲ್ಲೆಯಲ್ಲಿದೆ. ಇದೇ ಜಿಲ್ಲೆಯ ಆಹೇರಿ, ಎಟಪಲ್ಲಿ, ಸಿರೊಂಚಾ ತಾಲೂಕುಗಳಲ್ಲಿಯೂ ಅಮೂಲ್ಯವಾದ ವೃಕ್ಷ ಸಂಪತ್ತಿದ್ದು, ಹೆಚ್ಚಿನ ಆದಾಯ ಈ ಜಿಲ್ಲೆಯಿಂದ ಬರುತ್ತಿದೆ. ಪ್ರತಿ ಬಾರಿಯೂ ಕೇಂದ್ರದತ್ತ ಬೆರಳು ತೋರಿಸುವುದಿಲ್ಲ, ಏಕೆಂದರೆ ಅಂತಿಮವಾಗಿ ಆನೆಗಳು ರಾಜ್ಯಕ್ಕೆ ಸೇರಿವೆ ಮತ್ತು ಮುಖ್ಯ ಪಾತ್ರ ರಾಜ್ಯ ಸರಕಾರ ತೆಗೆದುಕೊಳ್ಳಬೇಕು.

1962ರಲ್ಲಿ ಬಸಂತಿ ಮತ್ತು ಮಹಾಲಿಂಗ ಎಂಬ ಎರಡು ಆನೆಗಳನ್ನು ಆಹೇರಿ ತಾಲೂಕಿನ ಕಮಲಾಪುರ ಮೀಸಲು ಅರಣ್ಯಕ್ಕೆ ಮರ ಸಾಗಾಟಕ್ಕೆ ತರಲಾಗಿತ್ತು. ಆನೆಗಳ ಸಂಖ್ಯೆ ಹೆಚ್ಚಾದ ಅನಂತರ ಮತ್ತು ಕೋಲಮಾರ್ಕ ಅರಣ್ಯದಲ್ಲಿ ಆನೆಗಳಿಗೆ ಕುಡಿಯಲು ನೀರಿಲ್ಲದ ಹಿನ್ನೆಲೆಯಲ್ಲಿ ಕಮಲಾಪುರದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ದಾಮರಂಚ ರಸ್ತೆಯಲ್ಲಿರುವ ಕಾಡಿಗೆ ತರಲಾಯಿತು. ಆನೆಗಳಿಗೆ ಉಪಯುಕ್ತವಾದ ಆವಾಸಸ್ಥಾನದ ಕಾರಣ ಇದಕ್ಕೆ “ಆನೆ ಶಿಬಿರ’ ಎಂದು ಹೆಸರಿಸಲಾಯಿತು. ಇದು ಮಹಾರಾಷ್ಟ್ರದ ಏಕೈಕ ಆನೆ ಶಿಬಿರವಾಗಿದ್ದು, ಅಲ್ಲಿಂದ ಒಂದು ಗಂಡು ಮತ್ತು ಎರಡು ಹೆಣ್ಣು ಆನೆಗಳನ್ನು ಮತ್ತು ಆಲಪಲ್ಲಿ ಅರಣ್ಯ ವಿಭಾಗದ ಎರಡು ಗಂಡು ಮತ್ತು ಒಂದು ಹೆಣ್ಣ ಆನೆಗಳನ್ನು ಗುಜರಾತ್‌ಗೆ ಕಳುಹಿಸಲಿದೆ. ಅದಲ್ಲದೆ ತಡೋಬಾ-ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದಿಂದ ನಾಲ್ಕು ಗಂಡು ಮತ್ತು ಎರಡು ಹೆಣ್ಣು ಆನೆಗಳನ್ನು ಕಳುಹಿಸಲಾಗಿದೆ. ಆದರೆ, ರಾಜ್ಯ ಸರಕಾರ ಈ ನಿರ್ಧಾರ ರಾತ್ರೋರಾತ್ರಿ ಕೈಗೊಂಡಿರುವುದರಿಂದ ಗಡಿcರೋಲಿಯಲ್ಲಿ ಆನೆಗಳಿಗೂ ಅದೇ ಆಗಬಹುದು.

Advertisement

ಈ ಹಿಂದೆ ರಾಜ್ಯ ಸರಕಾರ ನಾನಾ ಕಾರಣಗಳನ್ನು ನೀಡುತ್ತಿದೆ. ಆದರೆ ಹುಲಿಗಾಗಿ ಮನುಷ್ಯನ ಪ್ರಾಣವನ್ನೇ ಬಲಿಕೊಡುತ್ತಿರುವ ಸರಕಾರ ಆನೆಗಳಿಗೆ ಮಾವುತರು ಹಾಗೂ ಪಶುವೈದ್ಯಾಧಿಕಾರಿಗಳನ್ನು ನೀಡಲು ಹಿಂದೇಟು ಹಾಕುತ್ತಿದೆ. ಈ ಆನೆಗಳನ್ನು ಕಳುಹಿಸಲು . ಗುಜರಾತ್‌ ಮೃಗಾಲಯದ ಮುಂದೆ ರಾಜ್ಯ ಸರಕಾರ ತಲೆಬಾಗಿರುವುದು ಕಾರಣವೇ? ಅರ್ಥವಾಗುತ್ತಿಲ್ಲ.

ವನ್ಯಜೀವಿಗಳ ಬಗ್ಗೆ ಇಷ್ಟೊಂದು ಸಂವೇದನಾಶೀಲ ಗುರುತನ್ನು ಹುಟ್ಟು ಹಾಕುತ್ತಿರುವ ಮುಖ್ಯಮಂತ್ರಿ ಎಲ್ಲಿ ಬಲಹೀನರಾದರು?. ಈ ಮಧ್ಯೆ, ಮ್ಯೂಸಿಯಂನಲ್ಲಿ 13 ಮತ್ತು 22 ಕ್ಕಿಂತ ಹೆಚ್ಚು ಆನೆಗಳು ಇದ್ದರೆ, ಹೆಚ್ಚಿನ ಸಮೃದ್ಧಿ ಇರುತ್ತದೆ ಎಂದು ಭವಿಷ್ಯವಾದಿ ಗುರೂಜಿ ಸಲಹೆ ನೀಡಿದ್ದರು. ಅಷ್ಟೇ ಅಲ್ಲ ಮಹಾರಾಷ್ಟ್ರದಿಂದ ಈ ಆನೆಗಳನ್ನು ಪಡೆಯಲು ಎನ್‌ಜಿಒ ಸಹಾಯ ಪಡೆದು ಅದಕ್ಕೆ ಪ್ರತಿಯಾಗಿ ಹೆಲಿಕಾಪ್ಟರ್‌ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ವರದಿ ಬಂದಿದೆ. ಆದರೆ ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ಸ್ಪಷ್ಟವಾಗಿಲ್ಲ, ಆದರೆ ಮಹಾರಾಷ್ಟ್ರದ ಆನೆ ಏಕೆ ಎಂಬ ಪ್ರಶ್ನೆ ಉಳಿದಿದೆ.ಅಶೋಕ್‌ ನೇತೆ ಸಂಸದ, ಗಡ್ಚಿರೋಲಿ

ಗಡ್ಚಿರೋಲಿ ಆನೆಗಳನ್ನು ಗುಜರಾತ್‌ ಕರೆದೊಯ್ಯಲು ಬಿಡುವುದಿಲ್ಲ. ಆ ಯೋಜನೆ ರದ್ದಾಗಲಿದೆ. ಆನೆಗಳನ್ನು ಗಡಿcರೋಲಿಯಲ್ಲಿ ಇರಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಪತ್ರವನ್ನು ಕಳುಹಿಸಲಾಗಿದೆ.ವಿಜಯ್‌ ವಾಡೆತ್ತಿವಾರ್‌ ಪರಿಹಾರ ಮತ್ತು ಪುನರ್ವಸತಿ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next