Advertisement

ಮಾಟ-ಮಂತ್ರ ಸುತ್ತ ‘ಗದಾಯುದ್ಧ’: ಜೂ.9ರಂದು ರಿಲೀಸ್

04:16 PM May 26, 2023 | Team Udayavani |

ಮಾಟ, ಮಂತ್ರದ ಸುತ್ತ ಈಗಾಗಲೇ ಕೆಲವು ಸಿನಿಮಾಗಳು ಬಂದಿವೆ. ಪ್ರತಿ ಸಿನಿಮಾವೂ ಇದಕ್ಕೆ ತನ್ನದೇ ಆದ ವ್ಯಾಖ್ಯಾನ ನೀಡಿವೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ “ಗದಾಯುದ್ಧ’. ವಾಮಚಾರದ ಸುತ್ತ ಕಥಾಹಂದರ ಹೊಂದಿರುವ “ಗದಾಯುದ್ಧ’ ಚಿತ್ರ ಜೂನ್‌ 09ರಂದು ತೆರೆ ಕಾಣುತ್ತಿದೆ. ಮೊದಲ ಹಂತವಾಗಿ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಶ್ರೀವತ್ಸ ರಾವ್‌ ಅವರ ನಿರ್ದೇಶನದ ಈ ಚಿತ್ರವನ್ನು ನಿತಿನ್‌ ಶಿರಗೂರ್‌ ಕರ್‌ ನಿರ್ಮಾಣ ಮಾಡಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡುವ ಅವರು, “ನಾಲ್ಕು ವರ್ಷದ ಹಿಂದೆ ನಿರ್ದೇಶಕರು ಹೇಳಿದ ಈ ಕಥೆ ನನಗೆ ಇಷ್ಟವಾಯಿತು. ಬಾನಾಮತಿ ಅಥವಾ ಬ್ಲಾಕ್‌ಮ್ಯಾಜಿಕ್‌ ಮಹಾರಾಷ್ಟ್ರದಲ್ಲಿಯೂ ಇದೆ. ನಾನು ಅನೇಕ ಮಂದಿಯನ್ನು ಭೇಟಿ ಮಾಡಿ ಈ ಬ್ಲಾಕ್‌ ಮ್ಯಾಜಿಕ್‌ ಬಗ್ಗೆ ವಿಚಾರಿಸಿದ್ದೆ. ನನ್ನ ಮಗ ಸುಮಿತ್‌ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾನೆ’ ಎಂದರು.

ಚಿತ್ರದ ಕಥೆ ಮಾಟ ಮಂತ್ರದ ಕುರಿತಾಗಿದ್ದರೂ ಇಲ್ಲಿ ಪ್ರತಿ ಪಾತ್ರವೂ ಮುಖ್ಯವಾಗಿದೆ. ಕನ್ನಡ, ಹಿಂದಿ ಸೇರಿದಂತೆ ಐದು ಭಾಷೆಯಲ್ಲಿ ಗದಾಯುದ್ಧ ತೆರೆಗೆ ಬರಲಿದೆ. ನಿರ್ದೇಶಕ ಶ್ರೀವತ್ಸ ಮಾತನಾಡಿ, “ಚಿತ್ರದ ಕಥೆಗಾಗಿ ಎರಡು ವರ್ಷ ಸಿದ್ಧತೆ ಮಾಡಿಕೊಂಡು ಶೂಟಿಂಗ್‌ ನಡೆಸಿದ್ದೇವೆ. ಚಿತ್ರದ ಪ್ರತಿ ಪಾತ್ರವೂ ಗಮನ ಸೆಳೆಯುವಂತಿದೆ. ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ವಾಮಚಾರ ನಡೆಯುತ್ತಿರುವ ಕುರಿತು ಮಾಹಿತಿ ಸಂಗ್ರಹಿಸಿ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಮನರಂಜನೆಯ ಜೊತೆಗೆ ಮಾಹಿತಿ ನೀಡುವ ಪ್ರಯತ್ನ ಮಾಡಲಾಗಿದೆ. ವೈಜ್ಞಾನಿಕವಾಗಿ ಚಿತ್ರದ ಕಥೆ ಮಾಡಿಕೊಂಡು ಕಮರ್ಷಿಯಲ್‌ ಆಗಿ ಹೇಳಲಾಗಿದೆ. ಚಿತ್ರದಲ್ಲಿ ಶರತ್‌ ಲೋಹಿತಾಶ್ವ, ಅಯ್ಯಪ್ಪ ಶರ್ಮಾ, ಸಾಧುಕೋಕಿಲ, ಶರತ್‌ ಲೋಹಿತಾಶ್ವ ಸೇರಿದಂತೆ ಮತ್ತಿತರು ನಟಿಸಿದ್ದಾರೆ’ ಎಂದರು.

ಕ್ಲೈಮ್ಯಾಕ್ಸ್‌ನಲ್ಲಿ ಬರುವ ಸಾಹಸ ದೃಶ್ಯವನ್ನು 14 ದಿನಗಳವರೆಗೆ ಚಿತ್ರೀಕರಣ ಮಾಡಲಾಗಿದ್ದು ನಿರ್ಮಾಪಕರು ಫೈಟ್‌ಗಾಗಿಯೇ ಒಂದು ಕೋಟಿ ಖರ್ಚು ಮಾಡಿದ್ದಾರೆ. ಸತ್ಯಜಿತ್‌ ಮತ್ತು ಶಿವರಾಮಣ್ಣ ಅವರ ಪಾತ್ರಕ್ಕೆ ಅವರೇ ಡಬ್ಬಿಂಗ್‌ ಮಾಡಿದ್ದಾರೆ ಎಂದು ಹೇಳಿದರು. ನಾಯಕ ಸುಮಿತ್‌ ಮಾತನಾಡಿ, “ನಮ್ಮ ಕೆಲಸ ಮಾಡಿದ್ದೇವೆ. ನಮಗೆ ತೃಪ್ತಿ ಇದೆ. ಚಿತ್ರ ನೋಡಿ ಹರಸಿ, ನಾನು ಎಂದೂ ನಾಯಕನಾಗಬೇಕು ಎಂದು ಬಯಸಿರಲಿಲ್ಲ’ ಎಂದರು.

ಚಿತ್ರದಲ್ಲಿ ಧನ್ಯಾ ಪಾಟೀಲ್‌ ನಾಯಕಿ. ಮಾಟಗಾರ ಡ್ಯಾನಿಯಲ್‌ ಕುಟ್ಟಪ್ಪ ಅವರ ಮಗಳು ಪ್ರತ್ಯಕ್ಷ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ನಟಿ ಸ್ಪರ್ಶ ರೇಖಾ ಕೂಡಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. “ನಾನು ಒಬ್ಬ ನಟಿಯಾಗಿಯೇ ಕಾಣಿಸಿಕೊಂಡಿದ್ದೇನೆ. ಮಾಟ ಮಂತ್ರಕ್ಕೆ ಒಳಗಾಗುವ ಸ್ಪರ್ಶ ರೇಖಾ ಆಗಿಯೇ ಕಾಣಿಸಿಕೊಂಡಿದ್ದೇನೆ’ ಎಂದರು

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next