Advertisement

ಗದಗದ ಏಳು ಮಂದಿ ಪೇದೆಗಳಿಗೆ ಸೋಂಕು ದೃಢ: ಎಸ್ ಪಿ ಕಚೇರಿ ಸೀಲ್‌ಡೌನ್

04:14 PM Jul 16, 2020 | keerthan |

ಗದಗ: ದಿನದಿಂದ ದಿನಕ್ಕೆ ಜಿಲ್ಲೆಯ ಪೊಲೀಸ್ ಪೇದೆಗಳಿಗೆ ಸೋಂಕು ಹರಡುತ್ತಿದೆ. ಸೈಬರ್ ಕ್ರೈಂ ವಿಭಾಗದ ಮೂವರು ಸೇರಿದಂತೆ ಒಟ್ಟು ಏಳು ಸಿಬ್ಬಂದಿಗೆ ಕೋವಿಡ್ ಸೋಂಕು ವಕ್ಕರಿಸಿದ್ದರಿಂದ ಜಿಲ್ಲೆಯ ಎಸ್ ಪಿ ಕಚೇರಿಯನ್ನು ಗುರುವಾರ ಸೀಲ್‌ಡೌನ್ ಮಾಡಲಾಗಿದೆ.

Advertisement

ಇಲ್ಲಿನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿರುವ ಸೈಬರ್ ಕ್ರೈಂ ವಿಭಾಗದ ಮೂವರು ಹಾಗೂ ಬೆಟಗೇರಿಯ ಇಬ್ಬರು ಪೇದೆಗಳಿಗೆ ಸೋಂಕು ದೃಢಪಟ್ಟಿದೆ. ಬುಧವಾರ ಶಹರ ಮತ್ತು ಸಂಚಾರಿ ಪೊಲೀಸ್ ಠಾಣೆಯ ತಲಾ ಓರ್ವ ಪೇದೆಗೆ ಕೋವಿಡ್ ಸೋಂಕು ಖಚಿತವಾಗಿದ್ದು, ಹೆಲ್ತ್ ಬುಲೆಟಿನ್‌ನಲ್ಲಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.

ಪೇದೆಗಳಿಗೆ ಸೋಂಕು ಹರಿಡಿದ್ದರಿಂದ ಈಗಾಗಲೇ ಸಂಚಾರಿ ಪೊಲೀಸ್ ಠಾಣೆಯನ್ನು ಪೊಲೀಸ್ ಕಲ್ಯಾಣ ಮಂಟಪಕ್ಕೆ, ಬೆಟಗೇರಿ ಪೊಲೀಸ್ ಠಾಣೆಯನ್ನು ಹೆಲ್ತ್ ಕ್ಯಾಂಪ್ ಸಮೀಪದ ಪೊಲೀಸ್ ಕ್ಯಾಂಟೀನ್ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಸೈಬರ್ ಕ್ರೈಂ ಸಿಬ್ಬಂದಿಗೆ ಸೋಂಕು ಹರಡಿದ್ದರಿಂದ ಎಸ್ ಪಿ ಕಚೇರಿಯನ್ನೂ ಸೀಲ್ ಡೌನ್ ಮಾಡಿ, ಸ್ಯಾನಿಟೈಸ್ ಮಾಡಲಾಗುತ್ತಿದೆ. ನಿನ್ನೆ ಸೀಲ್‌ಡೌನ್‌ಗೆ ಒಳಪಟ್ಟಿದ್ದ ಶಹರ ಮತ್ತು ಗೆಳತಿ ಠಾಣೆಗಳು ಗುರುವಾರದಿಂದ ಪುನಃ ಕಾರ್ಯಾರಂಭ ಮಾಡಿವೆ ಎಸ್ಪಿ ಯತೀಶ್ ಎನ್. ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next