Advertisement

ಗದಗ: 8.25 ಲಕ್ಷ ರೂ. ಮೌಲ್ಯದ ಗಾಂಜಾ ವಶಕ್ಕೆ

02:02 PM Apr 27, 2023 | Team Udayavani |

ಗದಗ: ಸಾರಿಗೆ ಬಸ್ ನಲ್ಲಿ ಸಾಗಿಸುತ್ತಿದ್ದ ಅಂದಾಜು 8.25 ಲಕ್ಷ ರೂ. ಮೌಲ್ಯದ ಅಪಾರ ಪ್ರಮಾಣದ ಗಾಂಜಾವನ್ನು ವ್ಯಕ್ತಿ ಸಹಿತ ವಶಪಡಿಸಿಕೊಂಡಿರುವ ಘಟನೆ ನಗರದಲ್ಲಿ ಎ.27 ರಂದು ನಡೆದಿದೆ.

Advertisement

ಖಚಿತ ಮಾಹಿತಿ ಆಧರಿಸಿ ನಗರದ ಸೈಬರ್, ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ ಠಾಣೆ ಪೊಲೀಸರು ದಾಳಿ ನಡೆಸಿ 8.25 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ನರಸಿಂಹ ಪಟ್ಟಣದಿಂದ ಗದಗ ಮಾರ್ಗವಾಗಿ ಗೋವಾಗೆ ಈ ಗಾಂಜಾ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಬಸ್ ನಲ್ಲಿ ಕುಳಿತಿದ್ದ ವ್ಯಕ್ತಿಯೋರ್ವನ ಬ್ಯಾಗ್ ನಲ್ಲಿ ಇದ್ದ ಅಂದಾಜು 8.25 ಕೆ.ಜಿ. ಗಾಂಜಾವನ್ನು ವ್ಯಕ್ತಿ ಸಹಿತ ವಶಕ್ಕೆ ಪಡೆದಿದ್ದಾರೆ. ಇದರ ಮೌಲ್ಯ 8.25 ಲಕ್ಷ ಎಂದು  ಪೊಲೀಸರು ಅಂದಾಜಿಸಿದ್ದಾರೆ.

ಈ ಕುರಿತು ನಗರದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next