Advertisement

ವಿಧಾನಸಭಾ ಚುನಾವಣೆಗೆ ಗದಗ ಜಿಲ್ಲಾಡಳಿತ ಭರದ ಸಿದ್ಧತೆ

11:46 AM Feb 06, 2023 | Team Udayavani |

ಗದಗ: ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಈಗಾಗಲೇ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮ ಮತದಾರರ ಪಟ್ಟಿ ಸಿದ್ಧಗೊಂಡಿದ್ದು, 4,27,624 ಪುರುಷರು, 4,24,817 ಮಹಿಳೆಯರು, 57 ಇತರೆ ಸೇರಿ ಜಿಲ್ಲೆಯಲ್ಲಿ 8,52,498 ಮತದಾರರಿದ್ದಾರೆ.ಜಿಲ್ಲೆಯಲ್ಲಿ ಈವರೆಗೆ 12,112 ಪುರುಷರು, 14,573 ಮಹಿಳೆಯರು, 9 ಇತರೆ ಸೇರಿ 26,664 ಮತದಾರರುಹೊಸದಾಗಿ ಸೇರ್ಪಡೆಯಾಗಿದ್ದಾರೆ. ಅದೇ ರೀತಿಯಾಗಿ ವರ್ಗಾವಣೆ, ಮರಣ, ಕ್ಷೇತ್ರ ಬದಲಾವಣೆ ಸೇರಿ 10,305 ಪುರುಷರು, 11,262 ಮಹಿಳೆಯರು ಸೇರಿ 21,567 ಮತದಾರರನ್ನು ಮತಪಟ್ಟಿಯಿಂದ
ಕೈಬಿಡಲಾಗಿದೆ. ಈ ಪೈಕಿ ಅತೀ ಹೆಚ್ಚು ಮತದಾರರನ್ನು ಕೈಬಿಟ್ಟಿರುವುದು ಗದಗ ವಿಧಾನಸಭಾ ಕ್ಷೇತ್ರದಲ್ಲಿ. 6,847 ಮತದಾರರನ್ನ ಮತಪಟ್ಟಿಯಿಂದ ಕೈಬಿಡಲಾಗಿದೆ. ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಎಸ್‌ಸಿ ಮೀಸಲು ಕ್ಷೇತ್ರ ಶಿರಹಟ್ಟಿ(65) ವಿಧಾನಸಭಾ ಕ್ಷೇತ್ರದಲ್ಲಿ 1,11,800 ಪುರುಷರು, 1,10,794 ಮಹಿಳೆಯರು, 12 ಇತರೆ ಸೇರಿ ಒಟ್ಟು 2,22,606 ಮತದಾರರಿದ್ದಾರೆ. 3,200 ಪುರುಷರು, 3,977 ಮಹಿಳೆಯರು, 3 ಇತರೆ ಸೇರಿ 7,180 ಮತದಾರರುಹೊಸದಾಗಿ ಸೇರ್ಪಡೆಯಾಗಿದ್ದರೆ, 1,973 ಪುರುಷರು, 1,860 ಮಹಿಳೆಯರು ಸೇರಿ 3,833 ಮತದಾರರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ. ಗದಗ(66) ವಿಧಾನಸಭಾ ಕ್ಷೇತ್ರದಲ್ಲಿ 1,08,640 ಪುರುಷರು, 1,10,205 ಮಹಿಳೆಯರು, 17 ಇತರೆ ಸೇರಿ ಒಟ್ಟು 2,18,862 ಮತದಾರರಿದ್ದಾರೆ. 3,291 ಪುರುಷರು, 3,986 ಮಹಿಳೆಯರು, 1 ಇತರೆ ಸೇರಿ 7,278 ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದರೆ, 3,167 ಪುರುಷರು, 3,678 ಮಹಿಳೆಯರು ಸೇರಿ  6,847ಮತದಾರರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ. ರೋಣ(67) ವಿಧಾನಸಭಾ ಕ್ಷೇತ್ರದಲ್ಲಿ 1,14,202 ಪುರುಷರು, 1,13,636 ಮಹಿಳೆಯರು, 20 ಇತರೆ ಸೇರಿ ಒಟ್ಟು 2,27,858 ಮತದಾರರಿದ್ದಾರೆ. 3,466 ಪುರುಷರು, 4,038 ಮಹಿಳೆಯರು, 2 ಇತರೆ ಸೇರಿ 7,506 ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದರೆ, 3,055 ಪುರುಷರು, 3,115
ಮಹಿಳೆಯರು ಸೇರಿ 6,170 ಮತದಾರರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ.ನರಗುಂದ(68) ವಿಧಾನಸಭಾ ಕ್ಷೇತ್ರದಲ್ಲಿ 92,982 ಪುರುಷರು, 90,182 ಮಹಿಳೆಯರು, 8 ಇತರೆ ಸೇರಿ ಒಟ್ಟು 1,83,172 ಮತದಾರರಿದ್ದಾರೆ. 2,155 ಪುರುಷರು, 2,572 ಮಹಿಳೆಯರು, 3 ಇತರೆ ಸೇರಿ 4,730 ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದರೆ, 2,108 ಪುರುಷರು, 2,609 ಮಹಿಳೆಯರು ಸೇರಿ 4,717 ಮತದಾರರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ.

Advertisement

ಜಿಲ್ಲೆಯಲ್ಲಿ 15,204 ಯುವ ಮತದಾರರು

ಜಿಲ್ಲಾ ಸ್ವೀಪ್‌ ಸಮಿತಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಮತದಾನದ ಬಗ್ಗೆ ಹೆಚ್ಚಿನ ರೀತಿಯಲ್ಲಿ ಅರಿವು  ಮೂಡಿಸಿದ ಪರಿಣಾಮ ಜಿಲ್ಲೆಯಲ್ಲಿ 7,897 ಯುವಕರು, 7,303 ಯುವತಿಯರು ಹಾಗೂ 4 ಇತರೆ ಸೇರಿ 15,204 ಯುವ ಮತದಾರರು ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಮೊದಲ ಮತ ಚಲಾಯಿಸಲಿದ್ದಾರೆ. ಇನ್ನು ಕ್ಷೇತ್ರವಾರು ಶಿರಹಟ್ಟಿಯಲ್ಲಿ 2,070 ಯುವಕರು, 1,887 ಯುವತಿಯರು, 1 ಇತರೆ ಸೇರಿ 3,958 ಯುವ ಮತದಾರರಿದ್ದಾರೆ. ಗದಗ ಕ್ಷೇತ್ರದಲ್ಲಿ 2,173 ಯುವಕರು, 2,163 ಯುವತಿಯರು, 2 ಇತರೆ ಸೇರಿ 4,338 ಯುವ ಮತದಾರರಿದ್ದಾರೆ. ರೋಣ ಕ್ಷೇತ್ರದಲ್ಲಿ 2,082 ಯುವಕರು, 1,858 ಯುವತಿಯರು, 1 ಇತರೆ ಸೇರಿ 3,941 ಯುವ ಮತದಾರರಿದ್ದಾರೆ. ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ 1,572 ಯುವಕರು, 1,395 ಯುವತಿಯರು ಸೇರಿ 2,967 ಯುವ ಮತದಾರರು ತಮ್ಮ ಮೊದಲ ಮತ ಚಲಾಯಿಸಲಿದ್ದಾರೆ.

ಅರ್ಹ ಮತದಾರರು ಚಲಾಯಿಸುವ ಮತ ತಾವು ಚಲಾಯಿಸಿದ ಪಕ್ಷ ಅಥವಾ ವ್ಯಕ್ತಿಗೆ ದಾಖಲಾದ ಬಗ್ಗೆ ಖಾತರಿ ಪಡಿಸಿಕೊಳ್ಳಲು ವಿ.ವಿ. ಪಾಟ್ಟ್ ಯಂತ್ರ ಸಹಕಾರಿಯಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದ ಮೂಲಕ ಮತ ಚಲಾಯಿಸಲು ಅನುಕೂಲವಾಗುವಂತೆ ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ಮೂಲಕ
ಮತದಾನದಲ್ಲಿ ಪಾಲ್ಗೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ.-ವೈಶಾಲಿ ಎಂ.ಎಲ್‌, ಜಿಲ್ಲಾಧಿಕಾರಿ, ಗದಗ

ಮಾದರಿ ನೀತಿಸಂಹಿತಿ ತಂಡ ರಚನೆ

Advertisement

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ತಲಾ ವಿಧಾನಸಭಾ ಕ್ಷೇತ್ರಗಳಲ್ಲಿ 3 ತಂಡಗಳಂತೆ ಜಿಲ್ಲೆಯಲ್ಲಿ 12 ಸಂಚಾರಿ ಹಾಗೂ ವಿಡಿಯೋ ಸರ್ವಲೆನ್ಸ್‌ ತಂಡಗಳನ್ನು ರಚಿಸಲಾಗಿದೆ. ಉಳಿದಂತೆ ವಿಧಾನಸಭಾ ಕ್ಷೇತ್ರಕ್ಕೊಂದರಂತೆ 4 ವಿಡಿಯೋ ಪರಿಶೀಲನಾ ತಂಡಗಳನ್ನು ಕೂಡ ರಚಿಸಲಾಗಿದ್ದು, ತರಬೇತಿಯಲ್ಲಿ ನಿರತರಾಗಿದ್ದಾರೆ.

92 ಸೆಕ್ಟರ್‌ ಅಧಿಕಾರಿಗಳಿಂದ ಕಾರ್ಯಾಚರಣೆ

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ 46 ಸೆಕ್ಟರ್‌ ಅಧಿಕಾರಿಗಳ ಎರಡು ತಂಡಗಳು ಜಿಲ್ಲೆಯಲ್ಲಿ ಮತದಾನದ ಮಹತ್ವ ಹಾಗೂ ಅರಿವು ಮೂಡಿಸುವಲ್ಲಿ ನಿರತರಾಗಿವೆ. ಓರ್ವ  ಸೆಕ್ಟರ್‌ ಅ ಧಿಕಾರಿ 10ರಿಂದ 12 ಮತಗಟ್ಟೆಗಳ ನಿಯಂತ್ರಣ ಮಾಡುತ್ತಿದ್ದು, ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಮತದಾರರಲ್ಲಿರುವ ಗೊಂದಲಗಳನ್ನು ಪರಿಹರಿಸುತ್ತಿದ್ದಾರೆ. ಮತದಾರರ, ಮತಗಟ್ಟೆಗಳ ಪರಿಶೀಲನೆ ನಡೆದಿದ್ದು, ದುರಸ್ತಿಗಾಗಿ ಕಾದಿರುವ ಮತಗಟ್ಟೆಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ.

ಜಿಲ್ಲೆಯಲ್ಲಿ 956 ಮತಗಟ್ಟೆಗಳು

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 956 ಮತಗಟ್ಟೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಜೊತೆಗೆ 1,876 ಬ್ಯಾಲೆಟ್‌ ಯುನಿಟ್‌ಗಳು, 1,314 ಕಂಟ್ರೋಲ್‌ ಯುನಿಟ್‌ಗಳು, 1,404 ವಿವಿ ಪ್ಯಾಟ್‌ ಮಶಿನ್‌ಗಳು ಲಭ್ಯವಿದ್ದು, ಜಿಲ್ಲಾ ಚುನಾವಣಾಧಿ  ಕಾರಿಗಳ ಸುಪರ್ದಿಯಲ್ಲಿವೆ. ಜೊತೆಗೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮಾದರಿ ಬ್ಯಾಲೆಟ್‌ ಯೂನಿಟ್‌ಗಳು, ಕಂಟ್ರೋಲ್‌ ಯೂನಿಟ್‌ಗಳು, ವಿವಿ ಪ್ಯಾಟ್‌ ಮಶಿನ್‌ಗಳೊಂದಿಗೆ ಅಧಿಕಾರಿಗಳು ಮತದಾರರಿಗೆ ಅರಿವು ಮೂಡಿಸುತ್ತಿದ್ದಾರೆ.

„ಅರುಣಕುಮಾರ ಹಿರೇಮಠ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next