Advertisement

Gadaga: ಆನ್‌ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡು ಲಾಡ್ಜ್ ನಲ್ಲೇ ಆತ್ಮಹತ್ಯೆಗೆ ಶರಣಾದ ಯುವಕ

07:23 PM Dec 01, 2024 | Team Udayavani |

ಗದಗ: ಆನ್‌ಲೈನ್ ಗೇಮ್ ನಿಂದ ಹಣ ಕಳೆದುಕೊಂಡು ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಓಲ್ಡ್‌ ಡಿಸಿ ಆಫಿಸ್ ಸರ್ಕಲ್ ಬಳಿಯ ವಿಶ್ವ ಲಾಡ್ಜ್ ನಲ್ಲಿ ನಡೆದಿದೆ.

Advertisement

37 ವರ್ಷದ ಜಗದೀಶ್ ಹಳೆಮನಿ ಎಂಬ ಯುವಕ ನೇಣಿಗೆ ಶರಣಾಗಿದ್ದಾನೆ. ಮೃತ ಜಗದೀಶ್ ಜಿಲ್ಲೆಯ ಶಿರಹಟ್ಟಿ ಮೂಲದ ನಿವಾಸಿಯಾಗಿದ್ದು, ದೊಡ್ಡ ವ್ಯಾಪಾರಸ್ಥನಾಗಿದ್ದ. ಹಲವಾರು ತಿಂಗಳಿಂದ ಆನ್‌ಲೈನ್ ಗೇಮ್ ನಲ್ಲಿ ಜಗದೀಶ್ ಮಗ್ನನಾಗಿದ್ದ. ರಮ್ಮಿ ಆನ್‌ಲೈನ್ ಗೇಮ್ ನಲ್ಲಿ ಆಟವಾಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ.

ನಿನ್ನೆ ರಾತ್ರಿ 10:30 ರ ಸುಮಾರಿಗೆ ಶಿರಹಟ್ಟಿ ಯಿಂದ ಗದಗ ವಿಶ್ವ ಲಾಡ್ಜ್ ಗೆ ಬಂದಿದ್ದಾನೆ. ಕಂಠ ಪೂರ್ತಿ ಕುಡಿದು, ಸ್ವಲ್ಪ ಊಟ ಮಾಡಿದ್ದಾನೆ. ನಂತರ ನಶೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಡೆತ್ ನೋಟ್ ನಲ್ಲಿ ರಮ್ಮಿ ಆನ್‌ಲೈನ್ ಗೇಮ್ ಬ್ಯಾನ್ ಮಾಡಬೇಕೆಂದು ಉಲ್ಲೇಖ. ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಅವರು ಅಧಿವೇಶನದಲ್ಲಿ ಚರ್ಚೆ ಮಾಡಬೇಕು. ರಮ್ಮಿ ಗೇಮ್ ಬ್ಯಾನ್ ಮಾಡುವಂತೆ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕು. ನನ್ನಂತೆ ಬಹಳ ಜನರು ಹಾಳಾಗಿದ್ದಾರೆ. ದಯವಿಟ್ಟು ಆನ್‌ಲೈನ್ ಗೇಮ್ ಬ್ಯಾನ್ ಆಡುವಂತೆ ಅಧಿವೇಶನದಲ್ಲಿ ಚರ್ಚೆ ಮಾಡುವಂತೆ ಡೆತ್ ನೋಟ್ ನಲ್ಲಿ ಮನವಿ ಮಾಡಿಕೊಂಡು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇಂದು ಮಧ್ಯಾಹ್ನವಾದ್ರೂ ರೂಮ್ ನಿಂದ ಯುವಕ ಹೊರಬಂದಿಲ್ಲ. ಲಾಡ್ಜ್ ನವರಿಗೆ ಅನುಮಾನ ಬಂದು ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದಾರೆ. ಕುಟುಂಬಸ್ಥರ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಸ್ಥಳಕ್ಕೆ ಗದಗ ಶಹರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Varanasi: ಕಾಲ ಭೈರವ ದೇವಾಲಯದ ಗರ್ಭಗುಡಿಯಲ್ಲೇ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಮಹಿಳೆ

Advertisement
Advertisement

Udayavani is now on Telegram. Click here to join our channel and stay updated with the latest news.

Next