Advertisement

Gadag; ಇಂಗ್ಲೆಂಡ್‌ನಿಂದ ಆಗಮಿಸಿ ಮತದಾನ ಮಾಡಿದ ಗದಗದ ವಿನಯ್

06:19 PM May 07, 2024 | Team Udayavani |

ಗದಗ: ಇಂಗ್ಲೆಂಡ್ ದೇಶದ ಕೂವೆಂಟ್ರಿ ನಗರದಲ್ಲಿ ಎಂಜಿನೀಯರ್ ಆಗಿ ಸೇವೆ ಸಲ್ಲಿಸುತ್ತಿರುವ ನಗರದ ವಿನಯ ಚಂದ್ರಶೇಖರ್ ವಸ್ತ್ರದ ಅವರು ಮಂಗಳವಾರದಂದು ನಗರಕ್ಕೆ ಆಗಮಿಸಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

Advertisement

ವಿನಯ ವಸ್ತ್ರದ ಅವರ ತಂದೆ ಚಂದ್ರಶೇಖರ ವಸ್ತ್ರದ ಅವರು ಸರಕಾರಿ ಪಿಯು ಕಾಲೇಜಿನ ನಿವೃತ್ತ ಪ್ರಾಚಾರ್ಯ ಹಾಗೂ ಸಾಹಿತಿಗಳೂ ಆಗಿದ್ದು ಗದಗ ನಗರದಲ್ಲಿ ವಾಸಿಸುತ್ತಿದ್ದಾರೆ.

ಮಂಗಳವಾರ ಮತದಾನದ ದಿನವಾಗಿದ್ದರಿಂದ ತಂದೆ-ತಾಯಿಯೊಟ್ಟಿಗೆ ನಗರದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯಲ್ಲಿರುವ ಮತಗಟ್ಟೆ ಸಂಖ್ಯೆ 100ರಲ್ಲಿ ಆಗಮಿಸಿ ಮತ ಚಲಾಯಿಸಿದರು.

ದೂರದ ಇಂಗ್ಲೆಂಡ್ ದೇಶದ ಕೂವೆಂಟ್ರಿ ನಗರದಿಂದ ಮಾತೃದೇಶ ಭಾರತಕ್ಕೆ ಆಗಮಿಸಿ ನನ್ನ ಹಕ್ಕನ್ನು ಚಲಾಯಿಸಿರುವುದು ನನಗೆ ಹೆಮ್ಮೆ ಎನಿಸುತ್ತಿದೆ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next