ಗದಗ: ಗದಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಐಎಂಎ ರಾಷ್ಟ್ರ ಮಟ್ಟದ ದಕ್ಷಿಣ ವಲಯದ ಕಾಲೇಜ್ ಆಫ್ ಜನರಲ್ ಪ್ರ್ಯಾಕ್ಟೀಸ್ನರ್ಸ್ (ಸಿಜಿಪಿ) ಸಮ್ಮೇಳನವನ್ನು ಆ. 26, 27ರಂದು ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನ ಸಂಘಟನಾ ಸಮಿತಿಯ ಕಾರ್ಯದರ್ಶಿ ಡಾ. ಶ್ರೀಧರ ಕುರಡಗಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 27ರಂದು ನಡೆಯುವ ಉದ್ಘಾಟನಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಸಚಿವರಾದ ದಿನೇಶ ಗುಂಡೂರಾವ್, ಡಾ. ಶರಣಪ್ರಕಾಶ ಪಾಟೀಲ, ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ. ಶರದ್ ಅಗ್ರವಾಲ್ ಪಾಲ್ಗೊಳ್ಳುವರು ಎಂದು ಹೇಳಿದರು.
ಇದನ್ನೂ ಓದಿ:Yo-Yo testನಲ್ಲಿ 17.2 ಅಂಕ ಪಡೆದ ವಿರಾಟ್: ಇಲ್ಲಿದೆ ಅತೀ ಹೆಚ್ಚು ಅಂಕ ಪಡೆದವರ ಪಟ್ಟಿ
ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯವಲ್ಲದೇ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳ ರಾಜ್ಯದಿಂದ ಸಾವಿರಕ್ಕೂ ಹೆಚ್ಚು ವೈದ್ಯರು ಭಾಗವಹಿಸಲಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ವಿವಿಧ ವೈದ್ಯಕೀಯ ವಿಷಯಗಳ ಕುರಿತು ರಾಷ್ಟ್ರಮಟ್ಟದ ತಜ್ಞ ವೈದ್ಯರು ಉಪನ್ಯಾಸ ಹಾಗೂ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಸಮ್ಮೇಳನ ಸಂಘಟನಾ ಸಮಿತಿಯ ಅಧ್ಯಕ್ಷ ಡಾ. ಪ್ಯಾರಾಲಿ ನೂರಾನಿ, ಐಎಂಎ ಸಿಜಿಪಿ ರಾಷ್ಟ್ರೀಯ ಕಾರ್ಯದರ್ಶಿ ಡಾ. ಪವನಕುಮಾರ ಪಾಟೀಲ, ಐಎಂಎ ರಾಜ್ಯಾಧ್ಯಕ್ಷ ಡಾ. ಶಿವಕುಮಾರ ಲಕ್ಕೋಳ, ಡಾ. ಬಿಂ.ಎಂ. ಅಲೂರ, ಡಾ. ಶರಣ ಅಲೂರ ಸೇರಿ ಅನೇಕರು ಇದ್ದರು.