Advertisement

ಗದಗ: ಬುಲೆಟ್ ಶೋರೂಂನಲ್ಲಿ ಅಗ್ನಿ ಅವಘಡ

11:23 PM Apr 01, 2022 | Team Udayavani |

ಗದಗ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಇಲ್ಲಿನ ಹುಬ್ಬಳ್ಳಿ ರಸ್ತೆಯಲ್ಲಿರುವ ರಾಯಲ್ ಎನ್‌ಫೀಲ್ಡ್ ಶೋರೂಮ್‌ನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ.

Advertisement

ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಶೋ ರೂಮ್‌ನಲ್ಲಿ ವಿದ್ಯುತ್ ಸ್ಪರ್ಷ ಉಂಟಾಗಿದ್ದು, ಮಳಿಗೆ ಸಂಪೂರ್ಣ ದಟ್ಟ ಹೊಗೆ ಆವರಿಸಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಬೆಂಕಿ ನಂದಿಸುವ ಕಾರ್ಯ ನಡೆದಿದೆ.

ಇದನ್ನೂ ಓದಿ:ಜನರ ವಿಶ್ವಾಸ ಮರುಸ್ಥಾಪಿಸಿ: ಕೇಂದ್ರೀಯ ತನಿಖಾ ಸಂಸ್ಥೆಗೆ ಸಿಜೆಐ ಕಿವಿಮಾತು

ಶೋ ರೂಮ್‌ನಲ್ಲಿ 15ಕ್ಕೂ ಹೆಚ್ಚು ವಿವಿಧ ಮಾಡೆಲ್‌ಗಳ ಬುಲೆಟ್ ದ್ವಿಚಕ್ರ ವಾಹನಗಳು ಇದ್ದವು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next