Advertisement

Padubidri ವಿದ್ಯುದಾಘಾತಕ್ಕೆ ಗಬ್ಬದ ದನ ಸಾವು

11:44 PM Feb 13, 2024 | Team Udayavani |

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದ ಪಣಿಯೂರು ಕ್ರಾಸ್‌ ಜಂಕ್ಷನ್‌ ಬಳಿ ಮೆಸ್ಕಾಂ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ನ ಸ್ಟೇ ವಯರ್‌ಗೆ ಸಿಲುಕಿದ ಸ್ಥಳೀಯ ಇಸ್ಮಾಯಿಲ್‌ ಸಾಹೇಬರಿಗೆ ಸೇರಿದ ಗಬ್ಬದ ದನವೊಂದು ವಿದ್ಯುತ್‌ ಪ್ರವಹಿಸಿ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.

Advertisement

ಮೇವನ್ನರಸಿ ಬಂದಿದ್ದ 4 ತಿಂಗಳ ಗಬ್ಬದ ಹಸು ರಾಷ್ಟ್ರೀಯ ಹೆದ್ದಾರಿ 66ರ ಸರ್ವೀಸ್‌ ರಸ್ತೆಯ ಮೇಲ್ಭಾಗದಲ್ಲಿ ಇದ್ದ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಬಳಿ ಮೇಯುತ್ತಿದ್ದ ವೇಳೆ ಮೆಸ್ಕಾಂ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ನ ಸ್ಟೇ ವಯರ್‌ಗೆ ಸಿಲುಕಿಕೊಂಡಿತ್ತು. ಅದರಿಂದ ಬಿಡಿಸಿಕೊಳ್ಳುವ ವೇಳೆ ಹಳೆಯ ಜೋತು ಬಿದ್ದಿದ್ದ ಸ್ಟೇ ವಯರ್‌ ವಿದ್ಯುತ್‌ ಪ್ರವಹಿಸುತ್ತಿದ್ದ ತಂತಿಗೆ ತಗಲಿ ಸಾವು ಸಂಭವಿಸಿತು.

 

Advertisement

Udayavani is now on Telegram. Click here to join our channel and stay updated with the latest news.

Next