Advertisement

ʼಗಾಳಿಪಟ-2ʼ ಟ್ರೇಲರ್‌ ರಿಲೀಸ್‌ : ಮೇಸ್ಟ್ರು ಹೇಳಿದ ಸಂತಸ,ಸಂಕಟದ ಕಥೆಯಿದು..

11:52 AM Aug 01, 2022 | Team Udayavani |

ಯೋಗರಾಜ್‌ ಭಟ್‌ ನಿರ್ದೇಶನದ ʼಗಾಳಿಪಟ-2ʼ ಚಿತ್ರದ ಬಹು ನಿರೀಕ್ಷಿತ ಟ್ರೇಲರ್‌ ರಿಲೀಸ್‌ ಆಗಿದೆ.

Advertisement

ಚಿತ್ರದ ಬಗ್ಗೆ ಚಂದವನದಲ್ಲಿ ದೊಡ್ಡ ನಿರೀಕ್ಷೆಯಿದೆ. ಈಗಾಗಲೇ ಆ ನಿರೀಕ್ಷೆಯನ್ನು ಚಿತ್ರದ ಹಾಡು ಹಾಗೂ ಕ್ಯಾರೆಕ್ಟರ್ ಟೀಸರ್‌ ದುಪ್ಪಟ್ಟುಗೊಳಿಸಿದೆ. ಇದೀಗ ಟ್ರೇಲರ್‌ ರಿಲೀಸ್‌ ಆಗಿದ್ದು, ಹೊಸ ಬಗೆಯ ಕಥೆಯಿಂದ ಗಮನ ಸೆಳೆಯುತ್ತಿದೆ. ‌

ʼನೀನು ಬಗೆಹರಿಯದ ಹಾಡುʼ, ʼದೇವ್ಲೆ ದೇವ್ಲೆʼ,ʼಎಕ್ಸಾಂ ಹಾಡುʼ ಮಿಲಿಯನ್‌ ಗೂ ಅಧಿಕ ವೀಕ್ಷಣೆ ಪಡೆದುಕೊಂಡು ಸೂಪರ್‌ ಹಿಟ್‌ ಸಾಲಿಗೆ ಸೇರಿದೆ.

ಟ್ರೇಲರ್‌ ನಲ್ಲಿ ಏನಿದೆ? :

ʼನೀರುಕೋಟೆʼ ಎಂಬ ಊರಿನಲ್ಲಿ ನಡೆಯುವ ಮೂರು ಜನರ ಸ್ನೇಹಿತರ ಬದುಕಿನ ಕಹಾನಿಯನ್ನು ಹಾಸ್ಯ,ಭಾವನೆ ತುಂಬಿದ ಸಂಭಾಷಣೆ ಹಾಗೂ ಜೀವನ ಪಾಠವನ್ನು ಹೇಳುವ ಮೇಸ್ಟ್ರ ಮೂಲಕ ಯೋಗರಾಜ್‌ ಭಟ್‌ ಟ್ರೇಲರ್‌ ನಲ್ಲಿ ಹೇಳಿದ್ದಾರೆ.

Advertisement

ʼಗಾಳಿಪಟʼದಲ್ಲಿ ಬೇಟೆಗಾರನಾಗಿದ್ದ ಅನಂತ್‌ ನಾಗ್‌ ಇಲ್ಲಿ ಕನ್ನಡ ಮೇಸ್ಟ್ರು ಕಿಶೋರ್‌ ಆಗಿದ್ದಾರೆ. ಇವರ ಸ್ಕೂಲಿಗೆ ಬರುವ ಮೂವರು ವಿದ್ಯಾರ್ಥಿಗಳು, ಒಬ್ಬ ತುಂಟ ಗಣಿ, ಮತ್ತೊಬ್ಬ ಕೋಪಿಷ್ಟ ದಿಗಿ, ಇನ್ನೊಬ್ಬ ಶಾಂತ ಸ್ವಭಾವದ ಭೂಶಿ. ಈ ಮೂರು ಜನರ ಬಾಳಿನ ಕಥೆಯನ್ನು ʼಗಾಳಿಪಟ-2ʼ ವಿನ ಟ್ರೇಲರ್‌ ನಲ್ಲಿ ಝಲಕ್‌ ಬಿಟ್ಟಿದ್ದಾರೆ.

ಇನ್ನು ಗಾಳಿಪಟ ಮೊದಲ ಭಾಗದ ಮೆಲುಕು ಟ್ರೇಲರ್‌ ನಲ್ಲಿದೆ. ಮುಗ್ಗಿಲುಪೇಟೆ ಊರಿನ ಹಿನ್ನೆಲೆಯೂ ಚಿತ್ರದಲ್ಲಿರಲಿದೆ ಎನ್ನುವುದನ್ನು ಇಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: ಪ್ರಕರಣ ಬೇಧಿಸಲು ಜನರ ಸಹಕಾರ ಅತ್ಯಗತ್ಯ: ಡಿಜಿಪಿ ಪ್ರವೀಣ್ ಸೂದ್

ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ, ಸಂಯುಕ್ತ ಮೆನನ್‌, ವೈಭವಿ ಶಾಂಡಿಲ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಪದ್ಮಜಾ ರಾವ್‌,ಶ್ರೀನಾಥ್‌,ಪ್ರಕಾಶ್‌ ತುಮಿನಾಡು ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಯೂಟ್ಯೂಬ್‌ ನಲ್ಲಿ ಟ್ರೇಲರ್‌  ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

ಆಗಸ್ಟ್‌ 12 ರಂದು ಚಿತ್ರ ತೆರೆಗೆ ಬರಲಿದೆ. ಅರ್ಜುನ್‌ ಜನ್ಯ ಮ್ಯೂಸಿಕ್‌ ನೀಡಿದ್ದಾರೆ. ಉಮಾ ಎಂ ರಮೇಶ್‌ ರೆಡ್ಡಿ ಅವರು ನಿರ್ಮಾಣ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next