Advertisement

ಆ.12ಕ್ಕೆ ಬಹು ನಿರೀಕ್ಷಿತ ಗಾಳಿಪಟ-2 ರಿಲೀಸ್‌

01:26 PM May 08, 2022 | Team Udayavani |

ನಿರ್ದೇಶಕ ಯೋಗರಾಜ್‌ ಭಟ್‌ ಹಾಗೂ ನಟ ಗಣೇಶ್‌ ಕಾಂಬಿನೇಶ ನ್‌ನಲ್ಲಿ ತಯಾರಾಗಿರುವ “ಗಾಳಿಪಟ-2′ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದೆ.

Advertisement

ಚಿತ್ರತಂಡ ಈಗ ಅಧಿಕೃತವಾಗಿ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದು, ಆಗಸ್ಟ್‌ 12ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಈ ಮೂಲಕ ಆಗಸ್ಟ್‌ ರಂಗೇರಲಿದೆ. ಭಟ್‌ ಹಾಗೂ ಗಣೇಶ್‌ ಕಾಂಬಿನೇಶನ್‌ನಲ್ಲಿ ಬಿಡುಗಡೆಯಾಗಿದ್ದ “ಗಾಳಿಪಟ’ ಹಿಟ್‌ ಆಗಿತ್ತು. ಈಗ ಅದೇ ಜೋಡಿ ಮತ್ತೂಮ್ಮೆ ಜೊತೆಯಾಗಿ “ಗಾಳಿಪಟ-2′ ಮಾಡಿದ್ದಾರೆ. ಈ ಚಿತ್ರವನ್ನು ಸೂರಜ್‌ ಪ್ರೊಡಕ್ಷನ್ಸ್‌ನಡಿ ರಮೇಶ್‌ ರೆಡ್ಡಿ ನಿರ್ಮಾಣ ಮಾಡಿದ್ದು, ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ ಎನ್ನಲಾಗಿದೆ.

ಚಿತ್ರದಲ್ಲಿ ಗಣೇಶ್‌, ದಿಗಂತ್‌ ಹಾಗೂ ಪವನ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ, ನಿಶ್ವಿ‌ಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ರಂಗಾಯಣ ರಘು, ಅನಂತ್‌ ನಾಗ್‌ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ “ಪರೀಕ್ಷೆನ ಬಡಿಯಾ… ಕ್ವಶ್ಚನ್ನು ಪೇಪರ್‌ಗೆ ಎಂಟತ್ತು ನಾಗರಹಾವು ಕಡಿಯಾ… ಅತ್ಲ ಕಡೆ ಪ್ರಣಯ, ಇತ್ಲ ಕಡೆ ಪ್ರಳಯ… ಫೈನಲ್ಲು ಇಯರ್‌ಗೆ ನೂರಾ ಒಂದು ತೆಂಗಿನಕಾಯಿ ಒಡಿಯಾ…’ ಎಂಬ ಸಾಲುಗಳಿಂದ ಶುರು ವಾಗುವ ಹಾಡು ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿ¨

Advertisement

Udayavani is now on Telegram. Click here to join our channel and stay updated with the latest news.

Next