Advertisement

ಕೈ ಸಮಿತಿಯಲ್ಲಿ ಜಿ23 ನಾಯಕರು : ಸಂಸದೀಯ ಸಮಿತಿಯನ್ನು ಪುನಾರಚಿಸಿದ ಸೋನಿಯಾ ಗಾಂಧಿ

02:18 AM Jul 19, 2021 | Team Udayavani |

ಹೊಸದಿಲ್ಲಿ : ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದ “ಜಿ23′ ನಾಯಕರಲ್ಲಿ ಕೆಲವರು ಪುನಾರಚನೆಗೊಂಡ ಸಂಸದೀಯ ಸಮಿತಿಗಳಲ್ಲಿ ಸ್ಥಾನ ಪಡೆದಿದ್ದಾರೆ.

Advertisement

ಸಂಸತ್‌ನ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಸಂಸದೀಯ ಸಮಿತಿಗಳನ್ನು ಪುನಾರಚಿಸಿದ್ದಾರೆ.

ಲೋಕಸಭೆಗೆ ಸಂಬಂಧಿಸಿದಂತೆ “ಜಿ23′ ಮುಖಂಡರುಗಳಾದ ಶಶಿ ತರೂರ್‌ ಮತ್ತು ಮನೀಶ್‌ ತಿವಾರಿ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕರಾಗಿ ಅಧಿರ್‌ ರಂಜನ್‌ ಚೌಧರಿ ಅವರೇ ಮುಂದುವರಿಯಲಿದ್ದಾರೆ. ಸಂಸದ ಗೌರವ್‌ ಗೊಗೊಯ್‌ ಉಪನಾಯಕರಾಗಿ ಮುಂದುವರಿಯಲಿದ್ದಾರೆ.

ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಪಕ್ಷದ ನಾಯಕ, “ಜಿ23’ರ ನಾಯಕ ಆನಂದ ಶರ್ಮಾ ಉಪನಾಯಕ ಹುದ್ದೆ ಉಳಿಸಿಕೊಂಡಿದ್ದಾರೆ. ಜೈರಾಂ ರಮೇಶ್‌ ಮುಖ್ಯ ಸಚೇತಕ. ಅಂಬಿಕಾ ಸೋನಿ, ಪಿ.ಚಿದಂಬರಂ, ದಿಗ್ವಿಜಯ ಸಿಂಗ್‌ ಮತ್ತು ಕೆ.ಸಿ.ವೇಣುಗೋಪಾಲ್‌ ಸಮಿತಿಯಲ್ಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next