Advertisement

ಮಂಗಳೂರಿನಲ್ಲಿ ಜಿ20 ಸಭೆ: ಕೆಸಿಸಿಐಯಿಂದ ಕೇಂದ್ರ ಸಚಿವರಿಗೆ ಪತ್ರ

11:57 PM Jan 20, 2023 | Team Udayavani |

ಮಂಗಳೂರು: ದಕ್ಷಿಣ ಭಾರತದಲ್ಲಿ ಅತ್ಯಂತ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಒಂದಾಗಿರುವ ಮಂಗಳೂರಿನಲ್ಲಿ ಮುಂಬರುವ “ಜಿ20′ ಸಭೆಯನ್ನು ನಡೆಸುವಂತೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಕೇಂದ್ರದ ವಿದೇಶಾಂಗ ವ್ಯವಹಾರಗಳ ಸಚಿವ ಡಾ| ಎಸ್‌. ಜೈಶಂಕರ್‌ ಅವರಿಗೆ ಪತ್ರದ ಮೂಲಕ ಮನವಿ ಮಾಡಿದೆ.

Advertisement

ಸಾಂಪ್ರದಾಯಿಕ ಗೃಹ ಉತ್ಪನ್ನಗಳ ವ್ಯವಹಾರಗಳ ಜತೆಯಲ್ಲೇ ಐಟಿ/ಐಟಿಇಗಳಿಗೆ ಕರ್ನಾಟಕದಲ್ಲಿ ಬೆಂಗಳೂರು ಬಳಿಕದ ಪ್ರಮುಖ ಕೇಂದ್ರವಾಗಿರುವ ಮಂಗಳೂರು ಶೈಕ್ಷಣಿಕ ಕ್ಷೇತ್ರವಾಗಿಯೂ ಗುರುತಿಸಿಕೊಂಡಿದೆ. ಬೀಚ್‌ಗಳು ಮಾತ್ರವಲ್ಲದೆ ಸುಸಜ್ಜಿತ ಆಸ್ಪತ್ರೆಗಳನ್ನು ಹೊಂದಿರುವ ಮಂಗಳೂರಿಗೆ ವಿದೇಶಗಳಿಂದ ರೋಗಿಗಳು ಚಿಕಿತ್ಸೆಗಾಗಿ ಭೇಟಿ ನೀಡುತ್ತಾರೆ.

ಇದಲ್ಲದೆ ಅಂತಾರಾಷ್ಟ್ರೀಯ ಸರ್ಫಿಂಗ್‌ ಉತ್ಸವ, ಗಾಳಿಪಟ ಉತ್ಸವ, ನದಿ ಉತ್ಸವ ನಡೆಸಿರುವ ಖ್ಯಾತಿ ಮಂಗಳೂರಿಗಿದೆ. ರೈಲು, ರಸ್ತೆ, ವಿಮಾನ ಯಾನ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ಹೊಂದಿರುವ ಸಭಾಂಗಣಗಳು ಕೂಡ ಲಭ್ಯವಿವೆ. ಹಾಗಾಗಿ ಮಂಗಳೂರನ್ನು ಜಿ20 ಸಭೆ ಆಯೋಜಿಸಲು ಪರಿಗಣಿಸಬೇಕು ಎಂದು ಪತ್ರದಲ್ಲಿ ತಿಳಿಸಿದೆ.

ಇದನ್ನೂ ಓದಿ: ಕರಾವಳಿಯಾದ್ಯಂತ “ಶಕಲಕ ಬೂಮ್‌ ಬೂಮ್‌’ ತುಳು ಸಿನೆಮಾ ಬಿಡುಗಡೆ

Advertisement

Udayavani is now on Telegram. Click here to join our channel and stay updated with the latest news.

Next