Advertisement

ಜಿ.ಶಂಕರ್‌ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್‌: ಫೆ.10ರ ತನಕ ನೋಂದಣಿ ಅವಧಿ ವಿಸ್ತರಣೆ

12:01 AM Feb 01, 2023 | Team Udayavani |

ಉಡುಪಿ: ಅಂಬಲಪಾಡಿ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್‌, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದೊಂದಿಗೆ ಮಾಹೆ ಮಣಿಪಾಲದ ಸಹಕಾರದೊಂದಿಗೆ ಜಿ. ಶಂಕರ್‌ ಮಣಿಪಾಲ್‌ ಆರೋಗ್ಯ ಸುರûಾ ಕಾರ್ಡ್‌ ಯೋಜನೆ ಬಡಜನರ ಆರೋಗ್ಯ ಸುರಕ್ಷೆಗಾಗಿ ಹಮ್ಮಿಕೊಂಡ ಮಹತ್ವದ ಯೋಜನೆಯಾಗಿದ್ದು, ನೋಂದಣಿಯ ಅವಧಿಯನ್ನು ಫೆ. 10ರ ವರೆಗೆ ವಿಸ್ತರಿಸಲಾಗಿದೆ.

Advertisement

ಜ. 31ರೊಳಗೆ ನೋಂದಣಿ ಮಾಡಿಕೊಂಡ ಫಲಾನುಭವಿಗಳು ಫೆ. 1ರಿಂದ ಕಾರ್ಡ್‌ನ ಸೌಲಭ್ಯ ಪಡೆಯುವುದಕ್ಕೆ ಅರ್ಹರಾಗುತ್ತಾರೆ. ಈ ಕಾರ್ಡ್‌ನ ಸೌಲಭ್ಯ 1 ವರ್ಷಕ್ಕೆ ಸೀಮಿತವಾಗಿದ್ದು, ಮುಂದಿನ ವರ್ಷದಿಂದ ಕಾರ್ಡ್‌ನ ನವೀಕರಣ ಮತ್ತು ಹೊಸ ನೋಂದಣಿ ಇರುವುದಿಲ್ಲ. ಕಾರ್ಡ್‌ಗಳನ್ನು ಜಿಲ್ಲಾ ಮೊಗವೀರ ಯುವ ಸಂಘಟನೆ ಹಾಗೂ ವಿವಿಧ ಘಟಕಗಳ ಮೂಲಕ ನೋಂದಣಿಗೊಳಿಸಿ ವಿತರಿಸಲಾಗುವುದು. ಈ ಯೋಜನೆಯು ಮಣಿಪಾಲ ಸಮೂಹ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗಿದೆ.

ಯೋಜನೆಯಲ್ಲಿ ಜನರಲ್‌ ವಾರ್ಡ್‌ಗಳಿಗೆ ಒಳರೋಗಿಗಳಾಗಿ ದಾಖಲಾಗುವ ಯಾವುದೇ ಕಾಯಿಲೆಗಳ ರೋಗಿಯ ಆಸ್ಪತ್ರೆಯ ಒಟ್ಟು ಬಿಲ್‌ನ ಮೊತ್ತದಲ್ಲಿ ಶೇ. 35 ರಿಯಾಯಿತಿ ದೊರೆಯಲಿದೆ. ಕಾರ್ಡ್‌ದಾರರು ಮಣಿಪಾಲ ಸಮೂಹ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗದಲ್ಲಿ ರಿಯಾಯಿತಿ ಪಡೆಯಬಹುದು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಟಿಎಂಎ ಪೈ ಆಸ್ಪತ್ರೆ ಉಡುಪಿ, ಕೆಎಂಸಿ ಆಸ್ಪತ್ರೆ ಅತ್ತಾವರ, ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲು, ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಸೌಲಭ್ಯ ಪಡೆಯಬಹುದು.

ಷರತ್ತುಗಳಿಲ್ಲದೆ ಎಲ್ಲರಿಗೂ ಹೊಸದಾಗಿ ಕಾರ್ಡ್‌ ಪಡೆಯಲು ಅವಕಾಶವಿದೆ. ಹಿಂದೆ ಕಾರ್ಡ್‌ ಹೊಂದಿದ್ದ ಯಾವುದೇ ಕುಟುಂಬ/ಸದಸ್ಯರು ಹೊಸ ಕಾರ್ಡ್‌ ಪಡೆಯಬಹುದು. ನೋಂದಣಿಗೆ ಒಳಪಡುವ ಎಲ್ಲ ಸದಸ್ಯರ ಆಧಾರ್‌ ಕಾರ್ಡ್‌, ಕುಟುಂಬದ ರೇಷನ್‌ ಕಾರ್ಡ್‌ ಪ್ರತಿಯೊಂದಿಗೆ ಫೆ. 10ರೊಳಗೆ ಮೊಗವೀರ ಯುವ ಸಂಘಟನೆಯ ಜಿಲ್ಲಾ ಕಚೇರಿ, ಅಂಬಲಪಾಡಿ ಶ್ಯಾಮಿಲಿ ಸಭಾಂಗಣ ಎದುರಿನ ಮಂಗಲ ಸಮುದಾಯ ಭವನ ಅಥವಾ ಮೊಗವೀರ ಯುವ ಸಂಘಟನೆಯ ಘಟಕಗಳನ್ನು ಸಂಪರ್ಕಿಸಿ ನೋಂದಾಯಿಸಿ ಕೊಳ್ಳಬಹುದು.

ಒಂದು ಕುಟುಂಬ ಅಥವಾ ಕುಟುಂಬದ ಸದಸ್ಯರು ಯಾವುದೇ ಘಟಕದಲ್ಲಿ ರಿಯಾಯಿತಿ ಸೌಲಭ್ಯ ಯೋಜನೆಯನ್ನು ನೋಂದಾಯಿಸಿಕೊಳ್ಳಬಹುದು. ಈ ಯೋಜನೆಯ ಸವಲತ್ತುಗಳು ಜನರಲ್‌ ವಾರ್ಡ್‌ಗಳಿಗೆ ಮಾತ್ರ ಸೀಮಿತವಾಗಿದೆ. ಇಲ್ಲಿ ರೋಗಿ ಮರುದಾಖಲಾದರೂ ಸೌಲಭ್ಯ ಪಡೆಯುವುದಕ್ಕೆ ಅವಕಾಶವಿದೆ ಎಂದು ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡಕ ತಿಳಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next