Advertisement
ಜಾತಿ, ಮತ ಭೇದವಿಲ್ಲದೆ ಬಡವರ ಸ್ವಾಸ್ಥ್ಯಕ್ಕಾಗಿ ಹಮ್ಮಿಕೊಂಡ ಆರೋಗ್ಯ ವಿಮಾ ಯೋಜನೆ ಇದಾಗಿದ್ದು, ಯೋಜನೆಯ ಸೌಲಭ್ಯವನ್ನು 2021ರಲ್ಲಿ ಒಟ್ಟು 52,505 ಕುಟುಂಬಗಳಿಗೆ ಜಿಲ್ಲಾ ಮೊಗವೀರ ಯುವ ಸಂಘಟನೆ ಹಾಗೂ ವಿವಿಧ ಘಟಕಗಳ ಮೂಲಕ ನೋಂದಾವಣೆಗೊಳಿಸಿ ವಿತರಿಸಲಾಗಿದೆ. ಹಿಂದಿನ ಕಾರ್ಡ್‌ಗಳ ನವೀಕರಣ ಮತ್ತು ಹೊಸ ಸೇರ್ಪಡೆಗೂ ಅವಕಾಶವಿದೆ. ಮಣಿಪಾಲ ಸಮೂಹ ಆಸ್ಪತ್ರೆಗಳಿಗೆ ಮಾತ್ರ ಈ ಯೋಜನೆ ಸೀಮಿತ. ಕಡಿಮೆ ವರಮಾನವಿರುವ ಕುಟುಂಬಗಳಿಗೆ ಈ ಯೋಜನೆ ವರದಾನವಾಗಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಯ ಹೊರರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಯಲ್ಲಿ ಶೇ.70, ಉಡುಪಿ ಟಿ.ಎಂ.ಎ.ಪೈ ಆಸ್ಪತ್ರೆಯ ಚಿಕಿತ್ಸೆಯಲ್ಲಿ ಶೇ. 60, ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಯ ಚಿಕಿತ್ಸೆಯಲ್ಲಿ ಶೇ. 100 ರಿಯಾಯಿತಿ ಇರುತ್ತದೆ.
Related Articles
Advertisement
ಈ ಹಿಂದೆ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ಹೊಂದಿದ ಯಾವುದೇ ಸದಸ್ಯರೂ ಜಿ. ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ಪಡೆಯಬಹುದಾಗಿದೆ. ಈ ಹಿಂದೆ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ಹೊಂದಿದ್ದವರು ಕೂಡ ರೇಷನ್ ಕಾರ್ಡ್ ಪ್ರತಿ ಹಾಗೂ ಕುಟುಂಬದ ಪ್ರತಿ ಸದಸ್ಯರ ಆಧಾರ್ ಕಾರ್ಡ್ ಪ್ರತಿ ಹಾಗೂ ಹೊಸದಾಗಿ ಕಾರ್ಡ್ ಮಾಡಲಿಚ್ಛಿಸುವವರು ಕುಟುಂಬದ ರೇಷನ್ ಕಾರ್ಡ್ ಪ್ರತಿಯನ್ನು ಹಾಗೂ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಪ್ರತಿಯನ್ನು ನ. 15ರಿಂದ 30ರೊಳಗೆ ಮೊಗವೀರ ಯುವ ಸಂಘಟನೆಯ ಜಿಲ್ಲಾ ಕಚೇರಿ ಮಾಧವ ಮಂಗಲ ಸಮುದಾಯ ಭವನ ಶಾಮಿಲಿ ಸಭಾಂಗಣದ ಎದುರು ಅಂಬಲಪಾಡಿ ಅಥವಾ ಮೊಗವೀರ ಯುವ ಸಂಘಟನೆಯ ವಿವಿಧ ಘಟಕಗಳನ್ನು ಸಂಪರ್ಕಿಸಬೇಕು ಎಂದು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಶಿವರಾಮ ಕೆ.ಎಂ. ಕೋಟ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಒಂದು ಕಡೆಯಲ್ಲಿ ಮಾತ್ರ ಅವಕಾಶಒಂದು ಕುಟುಂಬ ಅಥವಾ ಕುಟುಂಬದ ಸದಸ್ಯರು ಯಾವುದೇ ಒಂದು ಘಟಕದಲ್ಲಿ ವಿಮಾ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಒಂದಕ್ಕಿಂತ ಹೆಚ್ಚು ಘಟಕಗಳಲ್ಲಿ ನೋಂದಾಯಿಸಿಕೊಂಡರೆ ಅಂತಹ ವ್ಯಕ್ತಿಯ ಅಥವಾ ಕುಟುಂಬದ ವಿಮಾ ಯೋಜನೆಯ ಸದಸ್ಯತ್ವವನ್ನು ರದ್ದುಪಡಿಸಲಾಗುವುದು.