Advertisement

ದಲಿತರ ಕೈ ಜಾರುತ್ತಿರುವ ರಾಜಕಾರಣ: ಜಿ.ಪರಮೇಶ್ವರ್‌

08:29 PM Sep 04, 2022 | Team Udayavani |

ಕೋಲಾರ: ರಾಜ್ಯದ 150 ವಿಧಾನಸಭಾ ಕ್ಷೇತ್ರಗಳಲ್ಲಿ ದಲಿತರೇ ನಿರ್ಣಾಯಕರಾಗಿದ್ದರೂ, ಒಗ್ಗಟ್ಟಿನ ಕೊರತೆಯಿಂದಾಗಿ ರಾಜಕಾರಣ ದಲಿತರ ಕೈ ಜಾರುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್‌ ವಿಷಾದಿಸಿದರು.

Advertisement

ನಗರದ ಗಲ್‌ಪೇಟೆಯಲ್ಲಿ ದಲಿತ ಸಮುದಾಯದ ಖಾಸಗಿ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರಿಂದ ಸನ್ಮಾನ ಸ್ಪೀಕರಿಸಿ ಮಾತನಾಡಿ, ರಾಜ್ಯದ 150 ವಿಧಾನಸಭಾ ಕ್ಷೇತ್ರಗಳಲ್ಲಿ ದಲಿತರು ಒಗ್ಗಟ್ಟಾಗಿ ಮತ ಚಲಾಯಿಸಿದರೆ ರಾಜಕೀಯ ಕೀಲಿ ಕೈ ಹಿಡಿಯಲು ಸಾಧ್ಯವಾಗುತ್ತದೆ, ದಲಿತರು ಒಂದಾಗಬೇಕಿದೆ ಎಂದರು.

ಹಳ್ಳಿ ಮತ್ತು ಕೇರಿಗಳು ಒಂದಾಗುವವರೆಗೂ ಸಮಾನತೆಯ ಹೋರಾಟ ಮುಂದುವರಿಸಬೇಕು ಎಂದು ಪ್ರತಿಪಾದಿಸಿದ ಅವರು, ಹಲವು ಹೋರಾಟಗಳಿಗೆ ನಾಂದಿ ಹಾಡಿರುವ ಕೋಲಾರ ಜಿಲ್ಲೆಯಿಂದಲೇ ಈ ಹೋರಾಟವನ್ನು ತಾವೇ ಮುಂದೆ ನಿಂತು ಮುನ್ನಡೆಸುವುದಾಗಿ ಘೋಷಿಸಿದರು.

ಶ್ರೀನಿವಾಸಪುರ ಶಾಸಕ ರಮೇಶ್‌ಕುಮಾರ್‌ ಮಾತನಾಡಿ, ಸ್ವಾತಂತ್ರ್ಯ ಅಮೃತಮಹೋತ್ಸವ ಭಾಷಣದಲ್ಲಿ ತಮಗೆ ಮಹಿಳೆಯರ ಮೇಲೆ ಗೌರವವಿದೆಯೆಂದು ಹೇಳಿದ ಮೋದಿಯವರು, ತಮ್ಮದೇ ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವ ನೆಪದಲ್ಲಿ ಬಿಡುಗಡೆ ಮಾಡಿ ಅವರನ್ನು ಅಭೂತಪೂರ್ವವಾಗಿ ಸ್ವಾಗತಿಸಿದ್ದಾರೆ. ಇಂತವರಿಗೆ ಮಹಿಳೆ ಮತ್ತು ಸಮಾನತೆಯ ಹಕ್ಕುಗಳನ್ನು ನೀಡಿರುವ ಸಂವಿಧಾನದ ಮೇಲೆ ಹೇಗೆ ಗೌರವ ಇರಲು ಸಾಧ್ಯ ಎಂದು ಪ್ರಶ್ನಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next