Advertisement

ಮೃತರ ಕುಟುಂಬಕ್ಕೆ ಪರಿಹಾರ ಧನದ ಚೆಕ್ ವಿತರಿಸಿ, ಮಾತು ಈಡೇರಿಸಿದ ಡಾ.ಜಿ.ಪರಮೇಶ್ವರ್

06:39 PM Jan 05, 2022 | Team Udayavani |

ಕೊರಟಗೆರೆ : ತಾಲ್ಲೂಕಿನ ಚಿಕ್ಕಸಾಗ್ಗೆರೆ ಗ್ರಾಮದಲ್ಲಿ ಆಗಸ್ಟ್ 23 ರಂದು ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಗೌರಮ್ಮ ಮತ್ತು ಅವರ 4 ಎಮ್ಮೆಗಳು ಸಾವನ್ನಪ್ಪಿದ್ದವು. ಅಂದಿನ ದಿನ ಸ್ಥಳಕ್ಕೆ ಭೇಟಿ‌ ನೀಡಿದ ಶಾಸಕ ಡಾ.ಜಿ ಪರಮೇಶ್ವರ ರವರು ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿ ಸರ್ಕಾರದಿಂದ ಕುಟುಂಬಕ್ಕೆ ಪರಿಹಾರ ನೀಡುವಂತೆ ತಿಳಿಸುತ್ತೇನೆ ಎಂದು ಭರವಸೆ ನೀಡಿದ್ದರು.

Advertisement

ಕೊಟ್ಟ ಮಾತಿನಂತೆ ಸರ್ಕಾರದ ಮನವೊಲಿಸಿ ನಡೆದ ಘಟನೆ ಬಗ್ಗೆ ತಿಳಿಸಿ ಪರಿಹಾರ ಧನವನ್ನು ನೀಡುವಂತೆ ಒತ್ತಾಯ ಮಾಡಿದ್ದರು. ಪರಮೇಶ್ವರ ಅವರು ತಿಳಿಸಿದ ನಂತರ ಸರ್ಕಾರ ಕುಟುಂಬಕ್ಕೆ ಪರಿಹಾರ ಧನವಾಗಿ 6.31 ಲಕ್ಷ ರೂಗಳನ್ನು ಬಿಡುಗಡೆ ಮಾಡಿತ್ತು. ಸರ್ಕಾರ ಬಿಡುಗಡೆ ಮಾಡಿದ ಚೆಕ್ ಅನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಸ್ಕಾಂ ಇಲಾಖೆಯ ಸಮ್ಮಖದಲ್ಲಿ ಮಾಜಿ.ಡಿಸಿಎಂ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ರವರು ಮೃತ ಕುಟುಂಬಕ್ಕೆ ಚೆಕ್ ನ್ನು ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಬೆಸ್ಕಾಂ ಇಲಾಖೆಯ ಚಿತ್ರದುರ್ಗ ವಲಯದ ಮುಖ್ಯ ಇಂಜಿನಿಯರ್ ಕೆ. ವಿ.ಗೋವಿಂದಪ್ಪ ಮತ್ತು ತುಮಕೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಕೆ.ಎಲ್.ಲೋಕೇಶ್, ಮಧುಗಿರಿ ಉಪ- ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸೈಯದ್ ಮಹಮೂದ್ ಕೊರಟಗೆರೆಯ ಕಾರ್ಯನಿರ್ವಾಹಕ ಇಂಜಿನಿಯರ್ ಮಲ್ಲಣ್ಣ.ವಿ. ಹಿರಿಯ ಸಹಾಯಕರಾದ ನಟರಾಜು.ಕೆ.ವಿ. ಶಾಖಾಧಿಕಾರಿಗಳಾದ. ವಿ ಪ್ರಸನ್ನಕುಮಾರ್, ಹೆಚ್.ಸಿ.ಮಲ್ಲಯ್ಯ,ಟಿ.ವಿರೇಶ್,ಸಿ.ಬಿ.ಮನೋಜ್, ಅಶೋಕ್ ನಾಯ್ಕ್, ಬಿ.ಸಿ. ಯೋಗೀಶ್ ಹಾಜರಿದ್ದರು.

ಇದನ್ನೂ ಓದಿ : ಮೋದಿ ಸಭೆಯಲ್ಲಿ ಭಾಗವಹಿಸುವವರಿಗೆ ಇಮ್ಯುನಿಟಿ ಬರುತ್ತದೆಯೇ : ಸಿದ್ದರಾಮಯ್ಯ ಪ್ರಶ್ನೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next